ಫಿಲ್ಮಿ ಶೈಲಿಯಲ್ಲಿ ಭಜರಂಗದಳ ಕಾರ್ಯಕರ್ತರ ದಾಳಿ...!

ಮಂಗಳೂರು

ಕೋಮುಸೂಕ್ಷ್ಮ ಪ್ರದೇಶ ಮಂಗಳೂರಿನಲ್ಲಿ ಮತ್ತೆ ಅನ್ಯಕೋಮಿನ ಯುವಕನ ಮೇಲೆ ಭಜರಂಗದಳ ಕಾರ್ಯಕರ್ತರು ಅಟ್ಯಾಕ್ ಮಾಡಿದ್ದಾರೆ... 

ಅನ್ಯಕೋಮಿನ ಯುವಕನೋರ್ವ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಹಿಂದೂ ಯುವಕನಂತೆ ನಟಿಸಿ ಚಿಕ್ಕಮಂಗಳೂರಿನ ಹಿಂದೂ ಯುವತಿಯೊಬ್ಬಳನ್ನು ಪಟಾಯಿಸಿ ಬೆಂಗಳೂರಿಗೆ ಎಸ್ಕೇಪ್ ಆಗಲು ಪ್ಲಾನ್ ಮಾಡಿದ್ದ.

ಇದರ ಮಾಹಿತಿ ತಿಳಿದ ಭಜರಂಗದಳ ಕಾರ್ಯಕರ್ತರು ಅಲರ್ಟ್ ಆಗಿ, ಮಂಗಳೂರಿನ ನಾಗುರಿಯಲ್ಲಿ ಬಸ್ ತಡೆದು, ಆ ಯುವಕನನ್ನು ಬಸ್ ನಿಂದ ಎಳೆದು ಹಾಕಿ ಹಿಗ್ಗಮುಗ್ಗ ಥಳಿಸಿ ಮಾರಣಾಂತಿಕ ಕೃತ್ಯ ಎಸಗಿದ್ದಾರೆ... ಹಲ್ಲೆಗೊಳಗಾದ ಯುವಕನ ಮನೆ ಬಿಸಿರೋಡ್ ಸಮೀಪ ಎಂದು ಮೂಲಗಳಿಂದ ತಿಳಿದು ಬಂದಿದೆ...

 

ಯುವಕನ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ನಾಲ್ವರು ಭಜರಂಗದಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ... ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ...