ಕಾರ್ಗಿಲ್ ಗಡಿಯಲ್ಲಿ ಯೋಧರ ಜೊತೆ ಪ್ರಧಾನಿ ಮೋದಿ ದೀಪಾವಳಿ ಸಂಭ್ರಮ

ಕಾರ್ಗಿಲ್ ಗಡಿಯಲ್ಲಿ ಯೋಧರ ಜೊತೆ
ಪ್ರಧಾನಿ ಮೋದಿ ದೀಪಾವಳಿ ಸಂಭ್ರಮ.

 ಕಾರ್ಗಿಲ್‌ನಲ್ಲಿ ಯೋಧರು ಹಾಗೂ ಅವರ ಕುಟುಂಬ ಸದಸ್ಯರ ಜೊತೆ ದೀಪಾವಳಿ ಆಚರಿಸಿದ ಬಳಿಕ ಮಾತನಾಡಿದ ಮೋದಿಯವರು, ದೇಶದ ಗಡಿ ಸುರಕ್ಷಿತವಾಗಿದ್ದರೆ ಮಾತ್ರ ದೇಶದ ಆರ್ಥಿಕತೆ ಸದೃಢವಾಗಿರುತ್ತದೆ. ಜೊತೆಗೆ ಸಮಾಜವೂ ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತದೆ. ಸೇನೆಗೆ ಮಹಿಳೆಯರನ್ನು ಸೇರ್ಪಡೆ ಮಾಡಿಕೊಂಡ ಬಳಿಕ ಸೇನೆಯ ಬಲವರ್ಧನೆಯಾಗಿದೆ ಎಂದು ಹೇಳಿದರು.

 ಭಾರತವು ದೇಶದ ಒಳಗೆ ಹಾಗೂ ಹೊರಗೆ ವೈರಿಗಳನ್ನು ನಿಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಜಾಗತಿಕವಾಗಿ ಭಾರತದ ಹಿರಿಮೆ ಹೆಚ್ಚಿದೆ. ಭಾರತದ ಶಕ್ತಿ ಹೆಚ್ಚಾದಷ್ಟೂ ಜಾಗತಿಕವಾಗಿ ಶಾಂತಿ ಹಾಗೂ ಸಮೃದ್ಧಿ ಹೆಚ್ಚುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

 ಸೇನೆಯ ಸುಧಾರಣೆಗೆ ಈ ಹಿಂದೆಲ್ಲ ದೀರ್ಘಕಾಲದ ತನಕ ಕಾಯಬೇಕಾಗುತ್ತಿತ್ತು. ಆದರೆ ಈಗ ಎಲ್ಲವೂ ವೇಗವಾಗಿ ಜಾರಿಯಾಗುತ್ತಿದೆ. ದೇಶ ಆತ್ಮ ನಿರ್ಭರವಾಗುತ್ತಿದೆ. ದೇಶದ ಭದ್ರತೆ ವಿಚಾರದಲ್ಲೂ ನಾವು ವಿದೇಶದ ಶಸ್ತ್ರಾಸ್ತ್ರಗಳ ಮೇಲೆ ಹೊಂದಿದ್ದ ಅವಲಂಬನೆ ಕಡಿಮೆಯಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

 ಮೋದಿ ಪ್ರಧಾನಿ ಆದ ಮೇಲೆ ಆಚರಿಸಿದ ದೀಪಾವಳಿ

 2014: ಸಿಯಾಚಿನ್

 2015: ಅಮೃತಸರ

 2016: ಲಾಹೌಲ್ -ಸ್ಪಿಟಿ

 2017: ಗುರೆಜ್

 2018: ಚಮೋಲಿ

 2019: ರಾಜೌರಿ

 2020: ಜೈಸಲ್ಮೇರ್

 2021: ನೌಶೆರಾ

 2022: ಕಾರ್ಗಿಲ್