ಬ್ರಿಟನ್ ಪ್ರಧಾನಿಯಾಗಿ ಭಾರತದ ವ್ಯಕ್ತಿಯ ಆಯ್ಕೆ..

ಬ್ರಿಟನ್ ಪ್ರಧಾನಿಯಾಗಿ ಭಾರತದ ವ್ಯಕ್ತಿಯ ಆಯ್ಕೆ..

ಬ್ರಿಟನ್ ನ ನೂತನ ಪ್ರಧಾನಿಯಾಗಿ ಭಾರತೀಯ ಸಂಜಾತ ರಿಷಿ ಸುನಕ್ ಆಯ್ಕೆಯಾಗಿದ್ದಾರೆ...

ರಿಷಿ ಸುನಕ್ ಬ್ರಿಟನ್ ನ ನೂತನ ಪ್ರಧಾನಿಯಾಗಿದ್ದು ಸಂಜೆ 6.30ರ ಸುಮಾರಿಗೆ ಅವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು, ಇನ್ನು ಅಕ್ಟೋಬರ್ 28ರಂದು ರಿಷಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ...

ರಿಷಿ ಸುನಕ್ ಗೆ ಬರೋಬ್ಬರಿ 193 ಸಂಸದರು ಬೆಂಬಲ ನೀಡಿದ್ದು, ಪ್ರತಿಸ್ಪರ್ಧಿಯಾಗಿದ್ದ ಪೆನ್ನಿ ಮೋಡ್ರಾಂಟ್ ಗೆ 26 ಸಂಸದರು ಮಾತ್ರ ಬೆಂಬಲ ನೀಡಿದ್ದು, ಹೀಗಾಗಿ ಪ್ರಧಾನಿ ಹುದ್ದೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ...

ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತೆ ಪ್ರಧಾನಿ ರೇಸ್ ನಿಂದ ಹೊರಗುಳಿದ ನಂತರ ಅವರ ನಿಷ್ಠರಾದ ಪ್ರೀತಿ ಪಟೇಲ್, ಭಾರತೀಯ ಸಂಜಾತ ರಿಷಿ ಸುನಕ್ ಗೆ ಬೆಂಬಲ ವ್ಯಕ್ತಪಡಸಿದ್ದು, ಅವರು ಬ್ರಿಟನ್ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿತ್ತು...

ಇನ್ಫೋಸಿಸ್ ನ ನಾರಾಯಣ ಮೂರ್ತಿ - ಸುಧಾ ಮೂರ್ತಿ ಅಳಿಯನೂ ಆಗಿರುವ ರಿಷಿ ಸುನಕ್ ಬ್ರಿಟನ್ ನ ಮೊದಲ ಭಾರತೀಯ ಪ್ರಧಾನಿಯಾಗಿ ಇತಿಹಾಸ ನಿರ್ಮಿಸಲಿದ್ದಾರೆ...

ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ 45 ದಿನಗಳಲ್ಲೇ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದರು... ಇಂಗ್ಲೆಂಡ್ ನಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಸಮಯದಲ್ಲಿ ಕನ್ಸರ್ವೇಟಿವ್ ಪಕ್ಷದ ಲಿಜ್ ಟ್ರಸ್ ಅಧಿಕಾರಕ್ಕೆ ಬಂದಿದ್ದರು. ಆದ್ದರಿಂದ ಪ್ರಧಾನಿ ಪಟ್ಟದ ಜವಾಬ್ದಾರಿ ಇವರಿಗೆ ಸುಲಭದ ಹಾದಿಯಾಗಿರಲಿಲ್ಲ. ಇನ್ನು ಆರ್ಥಿಕ ಸುಧಾರಣೆ ಸಾಧ್ಯವಾಗದ ಕಾರಣ ಲಿಜ್ ಟ್ರಸ್ ರಾಜೀನಾಮೆ ನೀಡಬೇಕಾಯಿತು. ಇದೀಗ ಹೊಸದಾಗಿ ಹೊಸದಾಗಿ ಆಯ್ಕೆಯಗಿರುವ ರಿಷಿ ಸುನಕ್ ಮುಂದೆ ಸಹ ದೊಡ್ಡ ಸವಾಲುಗಳಿವೆ.