ಚಿಕ್ಕಾಸು ಅನುದಾನ ತರಲು ವಿಫಲವಾದ ಶಾಸಕನಿದ್ದರೆ ಅದು ಲಾಲಾಜಿ..

ಮಾಜಿ ಸಚಿವ ಆರೋಪ...

ಈ ಹಿಂದಿನ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಜೂರಾದ ಅನುದಾನವನ್ನು ಇದೀಗ ನಾನು ತಂದಿರುವುದು ಎಂಬುದಾಗಿ ಬೊಗಳೆ ಬಿಡುವ ಕಾಪು ಶಾಸಕ ಲಾಲಾಜಿ ಮೆಂಡನ್, ತನ್ನ ಅಧಿಕಾರವಧಿಯಲ್ಲಿ ಚಿಕ್ಕಾಸು ಕೂಡಾ ಕಾಪು ಕ್ಷೇತ್ರದ ಅಭಿವೃದ್ಧಿಗೆ ತರಲು ವಿಫಲವಾಗಿರುವುದು ನಿತ್ಯ ಸತ್ಯ ಎಂಬುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಕಾಪು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವರು ಮಾಡುತ್ತಿರುವುದು ಕಮಿಷನ್ ದಂಧೆ, ಸರ್ಕಾರಿ ಅಧಿಕಾರಿಗಳನ್ನು ವರ್ಗಾವಣೆ ನಡೆಸಲು ಕಮಿಷನ್, ತನ್ನ ಖಾಸಗಿ ಜಾಗದ ಮರಳು ಸಾಗಿಸಲು ಮೂಳೂರು ಸಹಿತ ಸುತ್ತಲ ಪ್ರದೇಶದ ಮಳೆನೀರು ಹರಿದು ಹೋಗುವ ಕಾಲುವೆಯನ್ನು ವಿರೋಧದ ನಡುವೆಯೂ ಕಿರುದುಗೊಳಿಸಿ ರಸ್ತೆ ನಿರ್ಮಾಣ ನಡೆಸುತ್ತಿರುವುದು, ಜನವಿರೋಧಿಯಾಗಿ ಸುರತ್ಕಲ್ ಟೋಲ್ ನಲ್ಲಿ ಜನರ ರಕ್ತ ಹೀರುತ್ತಿದ್ದರೂ ಅದರ ಬಗ್ಗೆ ಒಂದು ಮಾತೂ ಆಡದೆ ಟೋಲ್ ಸಂಗ್ರಹಗಾರರ ಹಾಗೂ ಕಮಿಷನ್ ನೀಡುವವರ ಪರ ವಾದಿಸುವುದೇ ನಮ್ಮ ಕಾಪು ಶಾಸಕರ ಸಾಧನೆ ಎಂಬುದಾಗಿ ವ್ಯಂಗವಾಡಿದ್ದಾರೆ.  

ಸುದ್ಧಿಗೋಷ್ಠಿಯಲ್ಲಿ ಕಾಪು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಮುಖಂಡರಾದ ರಮೀಜ್ ಹುಸೇನ್, ಜ್ಯೋತಿ ಮೆನನ್, ಜೀತೇಂದ್ರ ಪುಟ್ರಾಡೋ, ಶಾಂತಲಾ ಶೆಟ್ಟಿ, ಅಶ್ವಿನಿ, ಸುಧಾಕರ್ ಹೆಜಮಾಡಿ ಮುಂತಾದವರಿದ್ದರು.