ಸುರತ್ಕಲ್ ನಲ್ಲಿ ಶಾಸಕರಿಂದ ಯು.ಪಿ. ಯೋಗಿ ಮಾದರಿಯ ಆಡಳಿತ ವೈಖರಿ ಆರಂಭ.

ಪ್ರಪ್ರಥಮ ಬಾರಿಗೆ ಗೋ ಹಂತಕರ ಮನೆ, ಆಸ್ತಿ ಮುಟ್ಟುಗೋಲು.

ಮಂಗಳೂರು: ಅಕ್ರಮ ಗೋಹತ್ಯೆ ಕೇಸ್‌ನಲ್ಲಿ ಉತ್ತರಪ್ರದೇಶ ಮಾದರಿ ಆಡಳಿತ ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಮಂಗಳೂರು ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಅವರ ಆಡಳಿತ ವೈಖರಿಯಿಂದ ಇಲ್ಲಿ ಕಠಿಣ ಕ್ರಮ ಜಾರಿ ಮಾಡಿದ್ದು ಹಲವು ಮತಾಂಧರಲ್ಲಿ ನಡುಕ ಹುಟ್ಟಿಸುವಂತೆ ಮಾಡಿದೆ.

 ಸುರತ್ಕಲ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗೋಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದ ಮೂವರ ಮನೆಗಳನ್ನು ಜಪ್ತಿ ಮಾಡಿದ್ದು, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

 ಅಕ್ರಮ ಗೋಹಂತಕರ ಮೇಲೆ ಯುಪಿ ಮಾದರಿಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಇದೇ ಮೊದಲ ಸಲ ಈ ಕಠಿಣ ನಿರ್ಧಾರ ಕೈಗೊಂಡಿದೆ. ರಾಜ್ಯದಲ್ಲೇ ಇದು ಮೊದಲನೇ ಸಲ ಅಕ್ರಮ ಗೋಹಂತಕರ ಮನೆ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

 ಸುರತ್ಕಲ್ ಪರಿಸರದ ಕೃಷ್ಣಾಪುರ, ಕಾಟಿಪಳ್ಳ ಪ್ರದೇಶದ ಹಕೀಂ ಸುಕ, ಹಕೀಂ ಮೊಹಮ್ಮದ್ ಪರ್ವೇಜ್ ಎಂಬುವವರಿಗೆ ಸೇರಿದ್ದ ಮನೆಗಳು ಜಪ್ತಿಯಾಗಿವೆ. ಇವರ ಮೇಲೆ ಮನೆಯಲ್ಲಿ ಅಕ್ರಮವಾಗಿ ಗೋಹತ್ಯೆ ಮಾಂಸ ಮಾರಾಟ ಮಾಡುತ್ತಿದ್ದ ಆರೋಪವಿತ್ತು. ಈ ಬಗ್ಗೆ ಸಾಕ್ಷಿ ಸಮೇತ ಬಿಜೆಪಿ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಮನೆಯಲ್ಲಿ ಅಕ್ರಮವಾಗಿ ಗೋಮಾಂಸ ಮಾರುತ್ತಿದ್ದಾರೆ ಎಂದು ದೂರು ನಿಡಿದ್ದರು.

 ಗುರುವಾರ ದಕ್ಷಿಣ ಕನ್ನಡ ಎಸಿ, ಎಸ್‌ಪಿ ಅವರ ಮೂಲಕ ಕಾರ್ಯಾಚರಣೆ ಮಾಡಲಾಗಿದೆ. ಗೋಹತ್ಯೆ ಪ್ರತಿಬಂಧಕ ಕಾಯ್ದೆ 2020ರ ಅಡಿ ಕಾರ್ಯಾಚರಣೆ ಮಾಡಿ ಮನೆ ಜಪ್ತಿ ಮಾಡಿಕೊಳ್ಳಲಾಗಿದೆ.