ಪ್ರತಿಭಾ ಕುಳಾಯಿ ವಿರುದ್ಧ ಮಾನಹಾನಿಕರ ಪೋಸ್ಟ್; ಆರೋಪಿ ಕೋರ್ಟ್ ಗೆ ಹಾಜರು...

1 ದಿನ ಕಾಲ ಪೊಲೀಸ್ ಕಸ್ಟಡಿಗೆ..

ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಪೋಸ್ಟ್ ಹಾಕಿದ ಪ್ರಕರಣದ ಆರೋಪಿಗಳಲ್ಲಿ ಓರ್ವನಾಗಿರುವ ಅಡ್ಯಾರ್ ಪದವು ನಿವಾಸಿ ಕೆ.ಆರ್. ಶೆಟ್ಟಿ ಗುರುವಾರ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ....

ವಕೀಲರ ಮೂಲಕ ಕೋರ್ಟಿಗೆ ಹಾಜರಾಗಿದ್ದ ಆತನನ್ನು ನ್ಯಾಯಲಯ ಒಂದು ದಿನ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಕೆ.ಆರ್. ಶೆಟ್ಟಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತನಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು.. ಸುರತ್ಕಲ್  ಟೋಲ್ ಗೇಟ್ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಪ್ರತಿಭಾ ಕುಳಾಯಿ ವೀಡಿಯೋ ವೈರಲ್ ಆಗಿದ್ದು, ಅದೇ ವಿಷಯವನ್ನು ಕೆ.ಆರ್. ಶೆಟ್ಟಿ ತನ್ನ ಫೇಸ್ಬುಕ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದರು... ಇದೇ ಪೋಸ್ಟ್ ಗೆ ಶ್ಯಾಮ್ ಸುದರ್ಶನ್ ಭಟ್ ಎನ್ನುವಾಟ ಅಶ್ಲೀಲ ಕಮೆಂಟ್ ಹಾಕಿದ್ದು, ಆತ ತಲೆಮರೆಸಿಕೊಂಡಿದ್ದಾನೆ... 4 ತಂಡಗಳನ್ನು ರಚಿಸಿ ಆತನಿಗಾಗಿ ಶೋಧ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ...

ಸುರತ್ಕಲ್ ಟೋಲ್ ವಿರೋಧಿ ಸಮಿತಿ ನಡೆಸಿದ ಹೋರಾಟದಲ್ಲಿ ವೈರಲ್ ಆದ ಪ್ರತಿಭಾ ಕುಳಾಯಿ ಅವರ ಫೋಟೋ ಒಂದನ್ನು ಕೆ.ಆರ್. ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, "ಇದಕ್ಕೊಂದು ಒಳ್ಳೆಯ ಟೈಟಲ್ ಕೊಡಿ ಫ್ರೆಂಡ್ಸ್" ಎಂದು ಕಮೆಂಟ್ ಹಾಕಿದ್ದ..

ಇದಕ್ಕೆ ಪ್ರತಿಕ್ರಯಿಸಿದ ಶ್ಯಾಮ್ ಸುದರ್ಶನ್ ಭಟ್ ಹೊಸಮೂಲೆ ಮಾನಹಾನಿಕರ ಕಮೆಂಟ್ ಮಾಡಿದ್ದ... ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸಂಘಟನೆಗಳಿಂದ, ವಿವಿಧ ಸಂಘ ಸಂಸ್ಥೆ, ಕಾಂಗ್ರೆಸ್ ಸಹಿತ ವಿವಿಧ ರಾಜಕೀಯ ಪಕ್ಷಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು..