ಶ್ರೀ ಸತ್ಯ ಕೋಡ್ದಬ್ಬು ಪ್ರತಿಷ್ಠಾ ಕಲಶಾಭಿಷೇಕ

20ರಿಂದ ಉರುಂದಾಡಿಯಲ್ಲಿ ಧಾರ್ಮಿಕ ಕಾರ್ಯಕ್ರಮ

ಮಂಗಳೂರು: ಪಂಜಿಮೊಗರಿನ ಉರುಂದಾಡಿಯ ಶಿವಾಜಿನಗರದಲ್ಲಿ 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಶ್ರೀ ಸತ್ಯ ಕೋಡ್ದಬ್ಬು, ತನ್ನಿಮಾನಗ ಹಾಗೂ ಪರಿವಾರ ದೈವಗಳ ದೈವಸ್ಥಾನ, ಗುಡಿ ಗೋಪುರದಲ್ಲಿ ಪ್ರತಿಷ್ಠಾಪನಾ ಕಲಶಾಭಿಷೇಕ ಮೇ 20ರಿಂದ ಆರಂಭವಾಗಿ 22ರ ತನಕ ನಡೆಯಲಿದೆ.

 ಮೇ 19ರಂದು ಸಂಜೆ 4ಕ್ಕೆ ಕೂಳೂರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. 20ರಂದು ಸಂಜೆ 5ಕ್ಕೆ ವಾಸ್ತುಪೂಜೆ ಇತ್ಯಾದಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ. 21ರಂದು ಬೆಳಗ್ಗೆ 6.30ರಿಂದ ಮಂಗಳ ಗಣಯಾಗ, ಪ್ರತಿಷ್ಠಾಪನಾ ಪ್ರಧಾನ ಹೋಮ, ಪಂಚವಿಂಶತಿ ಕಲಶ ಪ್ರತಿಷ್ಠಾಪನೆ, ಕಲಶಾಭಿಷೇಕ, ತಂಬಿಲ, ಪ್ರಸನ್ನ ಪೂಜೆ, ಮಧ್ಯಾಹ್ನ 1ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

 ಮಧ್ಯಾಹ್ನ 3ಕ್ಕೆ ಭಂಡಾರ ಏರುವುದು, ರಾತ್ರಿ 8ರಿಂದ ಅನ್ನಸಂತರ್ಪಣೆ, 10ರಿಂದ ಕೋಡ್ದಬ್ಬು ದೈವದ ಗಗ್ಗರ ಸೇವೆ, ದರ್ಶನ ಬಲಿ, ಮುಂಜಾನೆ 3ರಿಂದ ತನ್ನಿಮಾನಿಗ ನೇಮ ನಡೆಯಲಿದೆ.

 22ರಂದು ಸಂಜೆ 6.30ಕ್ಕೆ ಶ್ರೀ ಚಾಮುಂಡೇಶ್ವರಿ ಮತ್ತು ಕತ್ತಲೆ ಕಾನದ ಗುಳಿಗ ದೈವದ ಗಗ್ಗರ ಸೇವೆ, ರಾತ್ರಿ 8.30ರಿಂದ ಸಾರ್ವಜನಿಕ ಅನ್ನಸಂತರ್ಪಣೆ, 9.30ಕ್ಕೆ ಪಂಜುರ್ಲಿ ಮತ್ತು ಬಂಟ ದೈವಗಳ ಗಗ್ಗರ ಸೇವೆ ನಡೆಯಲಿದೆ. 12ಕ್ಕೆ ರಾಹು ದೈವದ ಗಗ್ಗರ ಸೇವೆ, ಮುಂಜಾನೆ 2.30ಕ್ಕೆ ಮಾಯೊಳು ದೈವಗಳ ಸೇವೆ ನಡೆದು 3.30ಕ್ಕೆ ಭಂಡಾರ ಇಳಿಯಲಿದೆ.