ಕುಂದಾಪುರ: ವೀರ ಕೇಸರಿ ಸ್ಪೋರ್ಟ್ಸ್ ಕ್ಲಬ್(ರಿ) ಕೋಡಿತಲೆ ವತಿಯಿಂದ 'ದಿ ಕೇರಳ ಸ್ಟೋರಿ' ಉಚಿತ ಪ್ರದರ್ಶನ

ವೀರ ಕೇಸರಿ ಸ್ಪೋರ್ಟ್ಸ್ ಕ್ಲಬ್(ರಿ) ಕೋಡಿತಲೆ ವತಿಯಿಂದ 'ದಿ ಕೇರಳ ಸ್ಟೋರಿ' ಉಚಿತ ಪ್ರದರ್ಶನ

ಕುಂದಾಪುರ: ದೇಶದಲ್ಲಿ ಜಿಹಾದಿಗಳ ಅಟ್ಟಹಾಸ ಹೆಚ್ಚುತ್ತಿದ್ದು, ಲವ್ ಜಿಹಾದ್ ಗೆ ಹಿಂದೂ ಯುವತಿಯರು ಬಲಿಯಾಗುವ ಪ್ರಕರಣಗಳು ಹೆಚ್ಚುತ್ತಿದೆ. ಇಂತಹ ನೈಜ ಕಥೆಯನ್ನು ಆಧರಿಸಿದ 'ದಿ ಸಿನೆಮಾ ಕೇರಳ ಸ್ಟೋರಿ' ಸಿನೆಮಾದ ಉಚಿತ ಪ್ರದರ್ಶನವನ್ನು ವೀರ ಕೇಸರಿ ಸ್ಪೋರ್ಟ್ಸ್ ಕ್ಲಬ್(ರಿ) ಕೋಡಿತಲೆ ವತಿಯಿಂದ ಯುವತಿಯರಿಗೆ ತೋರಿಸಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಕಾಲೇಜಿಗೆ ಹೋದ ಹಿಂದೂ ಹೆಣ್ಣುಮಕ್ಕಳನ್ನು ಟಾರ್ಗೆಟ್ ಮಾಡಿ ಪ್ರೀತಿಯ ಹೆಸರಿನಲ್ಲಿ ವಂಚಿಸಿ, ಮತಾಂತರ ಮಾಡಿ ಅವರ ಬದುಕನ್ನೇ ನಾಶದಮಾಡುತ್ತಿರುವ ಲವ್ ಜಿಹಾದ್ ನ ಕರಾಳ ಮುಖವನ್ನು ಜಗತ್ತಿಗೆ ಪರಿಚಯಿಸಿದ ಕೇರಳ ಸ್ಟೋರಿ ಸಿನೆಮಾವನ್ನು ನಮ್ಮೂರಿನ ಹೆಣ್ಣುಮಕ್ಕಳು ಕೂಡ ತಪ್ಪದೇ ನೋಡಬೇಕು ಎನ್ನುವ ಉದ್ದೇಶದಿಂದ ಎಲ್ಲ ಹದಿಹರೆಯದ ಬಾಲಕಿಯರು ಮತ್ತು ಯುವತಿಯರಿಗೆ ಸಿನಿಮಾದ ಉಚಿತ ಪ್ರದರ್ಶನವನ್ನು ವೀರ ಕೇಸರಿ ಸ್ಪೋರ್ಟ್ಸ್ ಕ್ಲಬ್ ರಿ. ಕೋಡಿತಲೆ ಏರ್ಪಡಿಸಿದ್ದರು.

ಸತ್ಯ ಘಟನೆ ಪ್ರೇರಿತ ಸಿನಿಮಾ "ದಿ ಕೇರಳ ಸ್ಟೋರಿ " ಇದೀಗ ಎಲ್ಲೆಡೆ ಪ್ರದರ್ಶನಗೊಳ್ಳುತ್ತಿದೆ. ಇದನ್ನು ವೀಕ್ಷಿಸಿದ ಯುವತಿಯರು ಲವ್ ಜಿಹಾದ್ ಹಾಗೂ ಮತಾಂತರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಇಂತಹ ಜಿಹಾದ್ ಗೆ ಯಾವ ಹುಡುಗಿಯರು ಬಲಿಯಾಗಬಾರದು ಇದು ಒಂದು ವ್ಯವಸ್ಥಿತ ಜಿಹಾದ್ ಎನ್ನುವುದು ಹಲವು ಯುವತಿಯರಿಗೆ ಸಿನೆಮಾ ತೋರಿಸುವ ಮೂಲಕ ಪರಿಚಸಿದ ವೀರ ಕೇಸರಿ ಸ್ಪೋರ್ಟ್ಸ್ ಕ್ಲಬ್ ರಿ. ಕೋಡಿತಲೆ ಇದರ ಎಲ್ಲಾ ಸದಸ್ಯರಿಗೂ ಯುವತಿಯರು ಅಭಿನಂದನೆ ಸಲ್ಲಿಸಿದ್ದಾರೆ.

ಹಿಂದೂ ಹೆಣ್ಣುಮಕ್ಕಳನ್ನು ಪ್ರೀತಿಯ ಬಲೆಗೆ ಬೀಳಿಸಿ ಮೋಸದಿಂದ ಮದುವೆಯಾಗಿ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವ ನೈಜ ಕಥೆಯನ್ನು 120ಕ್ಕೂ ಅಧಿಕ ಕೋಡಿಕನ್ಯಾಣದ ಹಿಂದೂ ಹೆಣ್ಣುಮಕ್ಕಳಿಗೆ ಉಚಿತವಾಗಿ ವೀಕ್ಷಿಸಲು ಮಣಿಕಂಠ ಇವರ ನೇತೃತ್ವದಲ್ಲಿ ವೀರ ಕೇಸರಿ ಸ್ಪೋರ್ಟ್ಸ್ ಕ್ಲಬ್ ಅವಕಾಶ ಮಾಡಿಕೊಟ್ಟು ಯಶಸ್ವಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಅಭಿನಂದನ್ ಅಡ್ಯಂತಾಯ ಸೇರಿದಂತೆ ವೀರ ಕೇಸರಿ ಸ್ಪೋರ್ಟ್ಸ್ ಕ್ಲಬ್ ಇದರ ಅಭಿಷೇಕ್, ನಿಖಿಲ್, ಹರ್ಷ, ಮಣಿಕಂಠ, ಕೃಷ್ಣ, ಹಾಗೂ ಸರ್ವ ಸದ್ಯಸರು ಉಪಸ್ಥಿತಿ ಇದ್ದರು.