ಮಂಗಳೂರು: ಅ.15ರ ವರೆಗೆ ಮರಳುಗಾರಿಕೆ ನಿಷೇಧ

ಮರಳುಗಾರಿಕೆ ನಿಷೇಧ

ಮಂಗಳೂರು: ಸಿಆರ್‌ಝಡ್‌ ಪ್ರದೇಶದಲ್ಲಿ ಮರಳುಗಾರಿಕೆ ಮಳೆಗಾಲ ಆರಂಭವಾಗುವ ಎರಡು ತಿಂಗಳ ಮೊದಲೇ ಪೂರ್ಣಗೊಂಡಿದ್ದು, ಅಕ್ಟೋಬರ್‌ 15ರವರೆಗೆ ಮರಳುಗಾರಿಕೆ ನಿಷೇಧ ಜಾರಿಯಲ್ಲಿರುತ್ತದೆ.

ಪರವಾನಿಗೆಯ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾ. 4ಕ್ಕೇ ಸಿಆರ್‌ಝಡ್‌ ವ್ಯಾಪ್ತಿಯ ಮರಳು ದಿಣ್ಣೆಗಳಲ್ಲಿ ಮರಳುಗಾರಿಕೆ ನಿಂತಿದ್ದು, ಆ ಬಳಿಕ ಇಸಿ (ಪರಿಸರ ಕ್ಲಿಯರೆನ್ಸ್‌) ಮತ್ತೆ ಪಡೆಯುವುದಕ್ಕೆ ಬೇಕಾದ ಬೆಥಮೆಟ್ರಿ ಸರ್ವೇ ಪೂರ್ಣಗೊಂಡಿದ್ದು, ಆದರೆ ವರದಿ ಬರಲು ಬಾಕಿ ಇದೆ. ಅಲ್ಲದೆ ಈ ಮಧ್ಯೆ ಚುನಾವಣ ಪ್ರಕ್ರಿಯೆಯೂ ಇದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಮಟ್ಟದ ಸಮಿತಿಯೂ ಸಭೆ ಸೇರಲು ಸಾಧ್ಯವಾಗಿಲ್ಲ.

ಇನ್ನು ಬೆಥಮೆಟ್ರಿ ವರದಿ ಬಂದ ಬಳಿಕ ಡಿಸಿ ಸಮಿತಿಯಲ್ಲಿ ಇದಕ್ಕೆ ಅನುಮೋದನೆ ಪಡೆದು ಸರಕಾರದ ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಸಮಿತಿ (ಕೆಸಿಝಡ್‌ಎಂ)ಯ ಅನುಮತಿ ಪಡೆಯುವ ಪ್ರಕ್ರಿಯೆ ಬಾಕಿ ಇದೆ.