ಏಕಕಾಲಕ್ಕೆ ಐದು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!

ಐದು ಶಿಶುಗಳಿಗೆ ಜನ್ಮ ನೀಡಿದ ಮಹಿಳೆ

ತಾಯಿಯಾಗುವುದು ಮಹಿಳೆಯ ಜೀವನದಲ್ಲಿ ಮರೆಯಲಾಗದ ಅನುಭವಗಳಲ್ಲಿ ಒಂದಾಗಿದೆ. ಗರ್ಭಾವಸ್ಥೆಯಲ್ಲೂ ಹಲವು ಅಚ್ಚರಿಯ ಘಟನೆಗಳು ಸಂಭವಿಸುತ್ತವೆ. ಕೆಲವೊಬ್ಬರು ಅವಳಿ, ತ್ರಿವಳಿ ಮಕ್ಕಳಿಗೆ ಜನ್ಮ ನೀಡುತ್ತಾರೆ. ಇನ್ನೂ ಅಪರೂಪದಲ್ಲಿ ಕೆಲವರು ನಾಲ್ವರು, ಐವರು ಮಕ್ಕಳಿಗೆ ಜನ್ಮ ನೀಡಿರುವುದೂ ಇದೆ. ಹೀಗೆಯೇ ಜಾರ್ಖಂಡ್‌ನಲ್ಲೊಬ್ಬ ಗರ್ಭಿಣಿ ಐದು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಘಟನೆ ನಡೆದಿದೆ. 

ಜಾರ್ಖಂಡ್‌ನ ರಾಂಚಿಯ RIMS (ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ) ನಲ್ಲಿ ಮಹಿಳೆಯೊಬ್ಬರಿಗೆ ಐದು ಅಕಾಲಿಕ ಹೆಣ್ಣು ಶಿಶುಗಳು ಜನಿಸಿದವು. ತಾಯಿ ಮತ್ತು ಶಿಶುಗಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಕ್ವಿಂಟಪ್ಲೆಟ್‌ಗಳು ಜನಿಸುತ್ತಿರುವುದು ಇದೇ ಮೊದಲು ಎಂದು ಆಡಳಿತ ಮಂಡಳಿ ಹೇಳಿದೆ. ಶಿಶುಗಳ ತೂಕವು ಸಾಮಾನ್ಯಕ್ಕಿಂತ ಕಡಿಮೆ ಇರುವುದರಿಂದ NICU (ನವಜಾತ ಶಿಶುಗಳ ತೀವ್ರ ನಿಗಾ ಘಟಕ) ದಲ್ಲಿ ಇರಿಸಲಾಗಿದೆ.

ದಂಪತಿಗೆ ಮದುವೆಯಾಗಿ ಹಲವು ವರ್ಷಗಳಾಗಿದ್ದರೂ ಮಕ್ಕಳಾಗಿರಲ್ಲಿಲ್ಲ. ಅನಿತಾ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಹೀಗಾಗಿ ಗರ್ಭ ಧರಿಸಲು ತೊಂದರೆಯಾಗಿತ್ತು. ಹೀಗಾಗಿ ಆಕೆ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದಾದ ಬಳಿಕ ಆಕೆ ಗರ್ಭಿಣಿಯಾಗಿದ್ದರು. ಸೋಮವಾರದಂದು ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನಲೆ ಕುಟುಂಬಸ್ಥರು ಆಕೆಯನ್ನು ರಿಮ್ಸ್‌ ಆಸ್ಪತ್ರೆಗೆ ಕರೆತಂದಿದ್ದರು. ಇಲ್ಲಿ ಅನಿತಾ ಐವರು ಮಕ್ಕಳಿಗೆ ಜನ್ಮ ನೀಡಿದರು.