ಮುಲ್ಕಿ: ಕತ್ತಲು ಆವರಿಸುತ್ತಿದ್ದಂತೆ ನದಿಗೆ ಇಳಿಯುವ ನಾಡದೋಣಿಗಳು.!

ಮುಲ್ಕಿ ಹಳೆಯಂಗಡಿ ಬಳಿ ರಾತ್ರಿ ಹೊತ್ತು ನಡೆಯುವ ಮರಳು ದಂಧೆ : ತಡೆಯೋರೆ ಇಲ್ಲ.!

ಮಂಗಳೂರಿನ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಹಳೆಯಂಗಡಿ ಸಮೀಪದ ಬೊಳ್ಳುರು ಬಳಿ ಅಕ್ರಮ ಮರಳು ಮಾಫಿಯಾ ಬಹು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.

ಸಂಜೆಯ ಕತ್ತಲು ಆವರಿಸುತ್ತಿದ್ದಂತೆ 4,5 ನಾಡದೋಣಿಗಳು ನದಿಗೆ ಇಳಿದು ಮರಳು ಎತ್ತುವ ಕೆಲಸ ಶುರುಮಾಡಿ, ಟಿಪ್ಪರ್ ಮೂಲಕ ಮರಳು ಸಾಗಿಸುತ್ತಿದ್ದಾರೆ. ಸದ್ಯ ಇಡೀ ದಕ್ಷಿಣ ಕನ್ನಡ ಭಾಗದಲ್ಲಿ ಮರಳುಗಾರಿಕೆ ಅಕ್ಟೋಬರ್ 5 ರವರೆಗೆ ಸ್ಥಗಿತಗೊಳಿಸಲು ಆದೇಶ ಹೊರಡಿಸಲಾಗಿದೆ. ಆದರೆ, ಈ ಪ್ರದೇಶದಲ್ಲಿ ಮಾತ್ರ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ಸಾಗುತ್ತಲೇ ಇದೆ.

ಪ್ರಭಾವಿ ವ್ಯಕ್ತಿಗಳ ಮಾಲೀಕತ್ವದಲ್ಲಿ ಈ ದಂಧೆ ಬಿರುಸಾಗಿ ಸಾಗುತ್ತಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಾದರೂ ಮುಲ್ಕಿ ಪೊಲೀಸ್ ಠಾಣಾ ಸಿಬ್ಬಂದಿ ಎಚ್ಚೆತ್ತು ಈ ಮರಳು ದಂಧೆಗೆ ಕಡಿವಾಣ ಹಾಕಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಾರ ಎಂಬುದು ಯಕ್ಷಪ್ರಶ್ನೆ...!