ಶಾಸಕ ಅಶೋಕ್ ರೈ ವಿರುದ್ದ ಕಮೆಂಟ್ ಹಾಕಿದವನ ಮನೆಗೆ ನುಗ್ಗಿ ಗೂಂಡಾಗಿರಿ

ಅಶೋಕ್ ರೈ ಅಭಿಮಾನಿಗಳ ಗೂಂಡಾಗಿರಿ

ಸುಳ್ಯ: ಫೇಸ್ಬುಕ್ ನಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರನ್ನ ನಿಂದಿಸಿದ ಆರೋಪದ ಮೇಲೆ ಶಾಸಕ ಅಶೋಕ್ ರೈ ಕೋಡಿಂಬಾಡಿ ಅಭಿಮಾನಿಗಳು ರಾತ್ರೋ ರಾತ್ರಿ‌ ಯುವಕನ ಮನೆಗೆ ಹೋಗಿ ಗೂಂಡಾಗಿರಿ ನಡೆಸಿದ ಘಟನೆ ನಡೆದಿದೆ.

ಸುಳ್ಯ ತಾಲೂಕಿನ ಜಯನಗರ ನಿವಾಸಿ ಪ್ರಮೀತ್ ಎಂಬಾತ ಫೇಸ್ಬುಕ್ ನಲ್ಲಿ ಪುತ್ತೂರು ಶಾಸಕ ಅಶೋಕ್ ರೈಯವರ ನಿಂದನಾತ್ಮಕ ಬರಹವನ್ನ ಹಂಚಿಕೊಂಡಿದ್ದ, ಇದರಿಂದ ಕೆರಳಿದ ಅಶೋಕ್ ರೈ ಅಭಿಮಾನಿಗಳು ರಾತ್ರೋ ರಾತ್ರಿ‌ ಪ್ರಮೀತ್ ಎಂಬವರ ಮನೆಗೆ ಹೋಗಿ, ಫೇಸ್ಬುಕ್ ನಿಂದ ಬರಹವನ್ನ ಡಿಲಿಟ್ ಮಾಡುವಂತೆ ಅಶೋಕ್ ರೈ ಅಭಿಮಾನಿಗಳು ಗೂಂಡಾಗಿರಿ ತೋರಿದ್ದಾರೆ.

ಪ್ರಮೀತ್ ಅವರ ಮನೆಗೆ ನುಗ್ಗಿದ ಅಶೋಕ್ ರೈ ಅಭಿಮಾನಿಗಳು ಡಿಲಿಟ್ ಮಾಡುವಂತೆ ಒತ್ತಾಯ ಮಾಡಿದ್ದು, ಮಾತಿಗೆ ಮಾತು ಬೆಳೆದು ಎರಡು ತಂಡಗಳ ನಡುವೆ ವಾಗ್ವಾದ ನಡೆದಿದೆ. ಬಳಿಕ ಪರಿಸ್ಥಿತಿಯನ್ನ ಸುಳ್ಯ ಪೊಲೀಸರು ಶಾಂತಗೊಳಿಸಿದ್ದು, ಸ್ಥಳಕ್ಕೆ ಡಿವೈಎಸ್ಪಿ ಗಾನ ಆಗಮಿಸಿ ಎರಡು ತಂಡದವರನ್ನ ಸಮಾಧಾನಪಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಪಡೆದರು. ಆದ್ರೂ ಅಶೋಕ್ ರೈ ಅಭಿಮಾನಿ ಬಳಗ ಪ್ರಮೀತ್ ಕ್ಷಮೆಯಾಚಿಸುಂತೆ ಪಟ್ಟು ಹಿಡಿದಿದ್ದು, ಕೊನೇ ಕ್ಷಣದಲ್ಲಿ ಪ್ರಮೀತ್ ಅಶೋಕ್ ರೈ ಬಗ್ಗೆ ನಿಂದನೆ ಮಾಡಿದ್ದಕ್ಕೆ ಕ್ಷಮೆಯಾಚನೆ ಮಾಡಿದ್ದಾರೆ.

ಪುತ್ತೂರು ಪೊಲೀಸ್ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಅಶೋಕ್ ರೈ ಎರಡು ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಅಶೋಕ್ ರೈ ಒಂದುವಾರ ಕಳೆದ್ರು ದಾಖಲೆ ಬಿಡುಗಡೆ ಮಾಡದ ಕಾರಣ ಫೇಸ್ಬುಕ್ , ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿತ್ತು, ಟ್ರೋಲ್ ನ್ನ ಹಂಚಿಕೊಂಡಿದ್ದ ಪ್ರಮೀತ್ ಅದಕ್ಕೆ “ಅಪ್ಪನಿಗೆ ಹುಟ್ಟಿದ್ರೆ ಎರಡು ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡಿ” ಎಂದು ಕಮೆಂಟ್ ಮಾಡಿದ್ದಾರೆ.