ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಕಾಪು ತಾಲೂಕು ವತಿಯಿಂದ 'ದಿ ಕೇರಳ ಸ್ಟೋರಿ' ಉಚಿತ ಪ್ರದರ್ಶನ

ಕೇರಳ ಸ್ಟೋರಿ ಸಿನೆಮಾ ವೀಕ್ಷಿಸಿದ ಪಡುಬಿದ್ರೆಯ ಯುವತಿಯರು

ಪಡುಬಿದ್ರೆ: ಲವ್ ಜಿಹಾದ್, ಮತಾಂತರದ ಕೆಟ್ಟ ಪ್ರಪಂಚವನ್ನ ಪರಿಚಯ ಮಾಡಿಕೊಟ್ಟ 'ದಿ ಕೇರಳ ಸ್ಟೋರಿ ಸಿನೆಮಾವನ್ನು ನಮ್ಮ ಊರಿನ ಯುವತಿಯರು ನೋಡಬೇಕು ಎನ್ನುವ ಉದ್ದೇಶದಿಂದ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಕಾಪು ತಾಲೂಕು ವತಿಯಿಂದ ಸಿನೆಮಾದ ಉಚಿತ ಪ್ರದರ್ಶನ ಯಶಸ್ವಿಯಾಗಿ ನಡೆದಿದೆ.

ಸದ್ಯ ಎಲ್ಲಾ ಊರಿನಲ್ಲೂ ಹಲವು ಸಂಘಟನೆಗಳು ಸಿನೆಮಾದ ಸಂದೇಶ ಎಲ್ಲರಿಗೂ ತಲುಪಬೇಕು ಎಂದು ಉಚಿತ ಪ್ರದರ್ಶನ ಮಾಡುವ ಮೂಲಕ ಜನರಿಗೆ ಲವ್ ಜಿಹಾದ್, ಮತಾಂತರದ ಕರಾಳ ಮುಖದ ದರ್ಶನ ಮಾಡುತ್ತಿದ್ದಾರೆ. 

ಪಡುಬಿದ್ರೆಯ ಭರತ್ ಸಿನಿಮಾ ಥಿಯೇಟರ್ ನಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಕಾಪು ತಾಲೂಕು ವತಿಯಿಂದ ಆಯೋಜಿಸಿದ್ದ ಉಚಿತ ಪ್ರದರ್ಶನವನ್ನು 200ಕ್ಕೂ ಅಧಿಕ ಯುವತಿಯರು ವೀಕ್ಷಣೆ ಮಾಡಿದ್ದಾರೆ. 

ಲವ್ ಜಿಹಾದ್'ಗೆ ಬಲಿಯಾದ ಹಿಂದೂ ಯುವತಿಯರ ಕಥೆಯನ್ನು ಆಧರಿಸಿದ ಸಿನೆಮಾ ಜನರ ಮನ ಮುಟ್ಟಿದ್ದು, ಬದಲಾವಣೆ ಗಾಳಿ ಬೀಸಿದೆ. ಸಂದೇಶ ಬರಿತ ಸಿನೆಮಾವನ್ನು ನೋಡಲು ಅವಕಾಶ ಮಾಡಿಕೊಟ್ಟ ಕಾಪು ತಾಲೂಕಿನ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿಯ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ಪ್ರಾಂತ ದುರ್ಗಾ ವಾಹಿನಿ ಪ್ರಮುಖ್ ಸುರೇಖಾ ರಾಜ್, ವಿ ಹಿಂ ಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಜಿಲ್ಲಾ ಸುರಕ್ಷಾ ಪ್ರಮುಖ್ ರಾಜೇಶ್ ಕೋಟ್ಯಾನ್, ಸುಧೀರ್ ಸೋನು ಭಜರಂಗ ದಳ ಪ್ರಮುಖರು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಬಿಜೆಪಿ ಪ್ರಮುಖರು, ಶಿಲ್ಪಾ ಸುವರ್ಣ, ಶ್ರೀಕಾಂತ್ ನಾಯಕ್, ಗಣೇಶ್ ಗುಜರಾನ್,ದೀಪಕ್ ಮೂಡುಬೆ ಲ್ಲೆ,ಜಯಪ್ರಕಾಶ್ ಪ್ರಭು, ದಿನೇಶ್ ಪಾಂಗಾಳ,ರಾಜೇಂದ್ರ ಶೆಣ್ನೈ, ಅಭಿನಂದನ್, ವಿಖ್ಯಾತ ಭಟ್, ಆನಂದ, ಅಜಿತ್ ಶೆಟ್ಟಿ, ಸುಜಿತ್ ಶೆಟ್ಟಿ ಉಪಸ್ಥಿತರಿದ್ದರು.