ಪುತ್ತೂರು: NIA ದಾಳಿ - ನಾಲ್ವರು ವಶಕ್ಕೆ

NIA ದಾಳಿ - ನಾಲ್ವರು ವಶಕ್ಕೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿದ್ದು, ಪುತ್ತೂರಿನಲ್ಲಿ ನಾಲ್ವರನ್ನು ಎನ್ ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಮಹಮ್ಮದ್ ಹ್ಯಾರೀಸ್ ಕುಂಬ್ರ (32), ಸಜ್ಜದ್ ಹುಸೈನ್ ಕೋಡಿಂಬಾಡಿ (37), ಫೈಜಲ್ ಅಹಮ್ಮದ್ ತಾರಿಗುಡ್ಡೆ, ಸಂಶುದ್ದೀನ್ ಕೂರ್ನಡ್ಕ ಎಂಬವರನ್ನು ವಶಕ್ಕೆ ಪಡೆಯಲಾಗಿದೆ.

ಇನ್ನು ವಶಕ್ಕೆ ಪಡೆದಿರುವ ನಾಲ್ವರಿಗೆ ಪಿಎಫ್‌ಐ ಲಿಂಕ್ ಸಾಧ್ಯತೆ ಇದೆ ಎನ್ನಲಾಗಿದೆ.