ಹಿಂದೂ ಹೆಸರಲ್ಲಿ ಲವ್, ಬಲವಂತವಾಗಿ ಮತಾಂತರ - ಅಪ್ಪನ ಜೊತೆ ಮಲಗುವಂತೆ ಒತ್ತಾಯ.!

ಹಿಂದೂ ಹುಡುಗಿಯನ್ನು ಲವ್ ಜಿಹಾದ್ ಬಲೆಗೆ ಬೀಳಿಸಿ ಚಿತ್ರಹಿಂಸೆ ನೀಡಿದ ಅಬೀದ್

ದೇಶದಲ್ಲಿ ಬಲವಂತದ ಮತಾಂತರ, ಲವ್ ಜಿಹಾದ್, ಪ್ರೀತಿ ಹಾಗೂ ಸೆಕ್ಸ್ ವಂಚನೆಗಳು ಹೆಚ್ಚಾಗುತ್ತಿದೆ. ಇದೀಗ ಅಂಕಿತ್ ಹೆಸರು ಹೇಳಿ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿದ ಅಬೀದ್, ಬಳಿಕ ದೈಹಿಕ ಸಂಪರ್ಕ ಬೆಳೆಸಿದ್ದಾನೆ.

ಇದೇ ವಿಡಿಯೋಗಳನ್ನಿಟ್ಟು ಬೆದರಿಸಿ ಹುಡುಗಿಯನ್ನು ಬಲವಂತವಾಗಿ ಮತಾಂತರ ಮಾಡಿದ್ದಾನೆ. ಮದುವೆಯಾಗುವುದಾಗಿ ಹೇಳಿ ತನ್ನ ತಂದೆಯ ಜೊತೆಗೆ ಸೆಕ್ಸ್ ಮಾಡುವಂತೆ ಹುಡುಗಿಗೆ ಚಿತ್ರಹಿಂಸೆ ನೀಡಿದ ಘಟನೆ ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ನಡೆದಿದೆ. ಅಬೀದ್ ಮನೆಯಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ, ದೂರು ದಾಖಲಿಸಿದ್ದಾರೆ. ಇತ್ತ ಅಬೀದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ತಂದೆ ಹಾಗೂ ಇತರ ವಿರುದ್ಧ ಪ್ರಕರಣ ದಾಖಲಾಗಿದೆ.

ಅಬೀದ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿರುವ ಯುವತಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾಳೆ. ಇತ್ತ ಪೊಲೀಸರು ಅಬೀದ್ ಬಂಧಿಸಿದ್ದಾರೆ. ಅಬೀದ್ ತಂದೆ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಅಬೀದ್ ತನ್ನ ಹೆಸರು ಅಂಕಿತ್ ಎಂದು ಹೇಳಿ ಹಿಂದು ಹುಡುಗಿಯ ಸ್ನೇಹ ಸಂಂಪಾದಿಸಿದ್ದ. ಯುವತಿಯ ಭೇಟಿಯಾಗುವ ವೇಳೆ ಕೈಗೆ ದಾರ, ತಿಲಕ ಸೇರಿದಂತೆ ಇತರ ನಾಟಕಗಳನ್ನು ಆಡಿದ್ದ. ಹೀಗಾಗಿ ಯುವತಿಗೆ ಈತನ ಅಸಲಿ ಹೆಸರು ಅಬೀದ್ ಅನ್ನೋದು ಗೊತ್ತೆ ಆಗಿಲ್ಲ. ಸ್ನೇಹ ಪ್ರೀತಿಗೆ ತಿರುಗಿತ್ತು. ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ. ಇದೇ ವೇಳೆ ಈ ವಿಡಿಯೋಗಳನ್ನು ಮಾಡಿದ್ದ.

ಬಳಿಕ ವಿಡಿಯೋ ಹರಿಬಿಡುವುದಾಗಿ ಬೆದರಿಸಿ ಬಲವಂತವಾಗಿ ಯುವತಿಯನ್ನು ಇಸ್ಲಾಂಗೆ ಮತಾಂತರ ಮಾಡಿದ್ದಾನೆ. ಮತಾಂತರ ಮಾಡಿದ ಅಬೀದ್ ಮನಗೆ ಕರೆದುಕೊಂಡು ಹೋಗಿ, ತನ್ನ ತಂದೆ ಜೊತೆಗೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದಾನೆ. ಇಷ್ಟೇ ಅಲ್ಲ ಚಿತ್ರ ಹಿಂಸೆ ನೀಡಿದ್ದಾನೆ ಎಂದು ಯುವತಿ ದೂರಿನಲ್ಲಿ ಹೇಳಿದ್ದಾಳೆ. ಅಬೀದ್ ಹಾಗೂ ಆತನ ಕುಟುಂಬಸ್ಥರಿಂದ ತಪ್ಪಿಸಿಕೊಂಡು ಬಂದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಯುಪಿ ಪೊಲೀಸರು ಮತಾಂತರ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಯುವತಿ ಪ್ರಕರಣ ದಾಖಲಾಗಿದೆ. ಯುವತಿ ಹೇಳಿಕೆ ಕುರಿತು ತನಿಖೆ ನಡೆಯಲಿದೆ. ಈ ತನಿಖೆಯಲ್ಲಿ ದೊರೆಯುವ ಸಾಕ್ಷ್ಯಗಳು, ಆಧಾರಗಳ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.