ಕಿನ್ನಿಗೋಳಿ: ಸೈಂಟ್ ಮೇರಿಸ್ ಸೆಂಟ್ರಲ್ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಸಂಭ್ರಮ

ಸೈಂಟ್ ಮೇರಿಸ್ ಸೆಂಟ್ರಲ್ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಸಂಭ್ರಮ

ಕಿನ್ನಿಗೋಳಿ: ಸೈಂಟ್ ಮೇರಿಸ್ ಸೆಂಟ್ರಲ್ ಶಾಲೆಯ 2023-24ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಶಾಲಾ ಪ್ರಾರಂಭೋತ್ಸವವು ಜೂನ್ 5 ರಂದು ನಡೆಯಿತು. 

ಬೇಸಿಗೆ ರಜೆ ಕಳೆದು ಮರಳಿ ಶಾಲೆಗೆ ಬಂದ ಮಕ್ಕಳನ್ನು ಶಿಕ್ಷಕರು ಪ್ರೀತಿಯಿಂದ ಬರಮಾಡಿಕೊಂಡರು. ಈ ಶೈಕ್ಷಣಿಕ ವರ್ಷದಲ್ಲಿ ಹೊಸತಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಗಣ್ಯರು ಹೂ ನೀಡಿ ಸ್ವಾಗತಿಸಿದರು. 

ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾಗಿರುವ ವಂದನೀಯ ಗುರು ಫಾವುಸ್ತಿನ್ ಲೂಕಸ್ ಲೋಬೊ ಮಾತನಾಡಿ, ಮಕ್ಕಳಿಗೆ ಶುಭ ಹಾರೈಸಿದರು. ಶಾಲಾ ಪ್ರಾಂಶುಪಾಲರಾದ ವಂಧನೀಯ ಗುರು ಲ್ಯಾನ್ಸಿ ಸಲ್ಮಾನ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಸ್ಥಾನಿ ಪಿಂಟೊ, ಕಾರ್ಯದರ್ಶಿ ಅನಿತಾ ನೊರೊನ್ಹಾ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿಲಿಯಂ ಡಿಸೋಜ ಉಪಸ್ಥಿತರಿದ್ದರು.