ತ್ರಿಕೋನ ಪ್ರೇಮಕಥೆಗೆ ವಿದ್ಯಾರ್ಥಿ ಬಲಿ: ಅಮಾಯಕನನ್ನ ಕೊಂದ ಪುಂಡರ ಗ್ಯಾಂಗ್.!‌

ಯಾರದ್ದೋ ತಪ್ಪಿಗೆ ಬಲಿಯಾದ ವಿದ್ಯಾರ್ಥಿ

ಇದು ವಿದ್ಯಾರ್ಥಿಯೊಬ್ಬನ ತ್ರಿಕೋನ ಪ್ರೇಮ ಕಥೆ. ಗೆಳೆಯನ ಹುಡುಗಿಯ ಹಿಂದೆ ಬಿದ್ದ ಯುವಕನ ಕೊಲೆ ಮಾಡಲು ಸಜ್ಜಾದ ಗ್ಯಾಂಗ್‌ ಅಮಾಯಕನೊಬ್ಬನನ್ನ ಕೊಲೆ ಮಾಡಿಯೇ ಬಿಟ್ಟಿದ್ದಾರೆ. ಈ ಘಟನೆ ಬೆಂಗಳೂರಿನ ಹೆಣ್ಣೂರು, ಬಾಣಸವಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಇದು 20-21ವರ್ಷದ ಹುಡುಗರ ಗ್ಯಾಂಗ್ ಕಾಲೇಜು ಓದುತ್ತಲೇ ರಕ್ತ ಕೈಗತ್ತಿತ್ತು. ಓದಿನಲ್ಲಿ ಡ್ರಾಪೌಟ್ ಆಗಿ ಪುಂಡಾಡಕ್ಕೆ ಇಳಿದಿದ್ರು. ಹೀಗಿದ್ದಾಗ ಅದೊಂದು ಯುವತಿಯ ವಿಚಾರ ಕಿವಿಗೆ ಬಿದ್ದು, ಗೆಳೆಯನ ಹುಡುಗಿ ಹಿಂದೆ ಸುತ್ತುತ್ತಿದ್ದ ಯುವಕನ ಬೆನ್ನಟ್ಟಿ ಸ್ಟೋರಿಗೆ ಕನೆಕ್ಟೇಯಿಲ್ಲದ ಅಮಾಯಕನೊಬ್ಬನನ್ನ ಕೊಲೆ ಮಾಡಿದ್ಧಾರೆ.ಇದು ಕಳೆದೆರಡು ದಿನದ ಹಿಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಖಾಸಗಿ ಕಾಲೇಜು ವಿದ್ಯಾರ್ಥಿಯ ಪ್ರಕರಣ.

ಸದ್ಯ ಅಪರಾಧಿಗಳನ್ನು ಹೆಣ್ಣೂರು ಮತ್ತು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಾರ್ತಿಕ್, ಅಭಿಶೇಕ್, ನೆಲ್ಸನ್, ರಾಕಿ, ಡ್ಯಾನಿಯಲ್, ಶ್ರಿಕಾಂತ್ ಎಂದು ಗುರುತಿಸಲಾಗಿದೆ. ಈ ಕೊಲೆ ಪ್ರಕರಣದ ರುವಾರಿ ಶ್ರೀಕಾಂತ್.  ಶ್ರೀಕಾಂತ್ ಯುವತಿಯೊಬ್ಬಳನ್ನ ಲವ್ ಮಾಡ್ತಿದ್ದ. ಆದ್ರೆ ಅದೇ ಯುವತಿಯ ಹಿಂದೆ ಕೊಲೆಯಾದ ಮಾರ್ವೇಶ್ ಗೆಳೆಯ ಬಿದ್ದಿದ್ದು, ಪ್ರೀತ್ಸು ಪ್ರೀತ್ಸು ಅಂತಾ ಕಾಟ ಕೊಡ್ತಿದ್ದ ಎನ್ನಲಾಗಿದೆ. ಈ ವಿಚಾರ ಯಾವಾಗ ಶ್ರೀಕಾಂತ್ ಕಿವಿಗೆ ಬಿತ್ತೋ ತನ್ನ ಹುಡುಗಿ ಹಿಂದೆ ಬಿದ್ದಚನ ಹುಡುಕಾಟಕ್ಕೆ ನಿಂತಿದ್ದ. ಆಗ ಸಿಕ್ಕಿದ್ದು ಅವನ ಗೆಳೆಯ ಮಾರ್ವೇಶ್. ಟೀ ಕುಡಿಯೋಕೆ ನಿಂತಿದ್ದವನ್ನ ಮಾತಾಡ್ಬೇಕು ಅಂತಾ ಕರೆದೊಯ್ದಿದ್ದವರು ಗೆಳೆಯನ ಪತ್ತೆಗೆ ಈತನ ಬಾಯ್ಬಿಡಿಸಲು ಹೊಡೆದಿದ್ದ ಆರೋಪಿಗಳು ಕೊಲೆ ಮಾಡಿದ್ದಾರೆ.

ಸದ್ಯ ಅಮಾಯಕನೊಬ್ಬನನ್ನ ಕೊಲೆ ಮಾಡಿದ್ದ ಎಲ್ಲಾ ಆರೋಪಿಗಳನ್ನ ಬಂಧಿಸಿರೋ ಪೊಲೀಸರು ಅವ್ರನ್ನ ಕಸ್ಟಡಿಗೆ ಪಡೆದಿದ್ದಾರೆ.. ಕೇಸ್ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದ್ಧಾರೆ. ಆದರೆ ಕೊಲೆಯಾದ ಮಾರ್ವೇಶ್ ಘಟನೆ ಮಾತ್ರ ದುರಂತ. ಯಾರದ್ದೋ ತಪ್ಪು ಮತ್ಯಾರಿಗೋ ಶಿಕ್ಷೆ ಅಂತಾ ಹಂತಕರು ಅಮಾಯಕನ್ನ ಕೊಂದಿರೋದು ಬೇಸರದ ಸಂಗತಿ.