ಮಂಗಳೂರು: ಪೊಲೀಸರೇ ಎಚ್ಚರ.!? ಮಂಗಳೂರಿನಲ್ಲಿ ಕೇರಳ ಮತ್ತು ಹೊರ ರಾಜ್ಯಗಳ ವಿದ್ಯಾರ್ಥಿಗಳ ಹಾವಳಿ

ಮಾದಕ ಲೋಕ - ನಂಬರ್ ಪ್ಲೇಟ್ ಇಲ್ಲದೇ ತಿರುಗಾಡುವ ವಾಹನ.!

ಮಂಗಳೂರು: ತಮ್ಮದೇ ಹೊಸ ಲೋಕ.! ನಂಬರ್ ಪ್ಲೇಟ್ ಇಲ್ಲದೆಯೂ ಮಂಗಳೂರು ಸುತ್ತುವ ಗಾಡಿಗಳು. ಅದೂ ಹೊತ್ತಲ್ಲದ ಹೊತ್ತಲ್ಲಿ.. ಇದು ಕರ್ನಾಟಕದ ಗಡಿನಾಡು ಕೇರಳ ಮತ್ತು ಇತರೆ ರಾಜ್ಯದಿಂದ ಮಂಗಳೂರಿಗೆ ಬಂದಿರುವ ವಿದ್ಯಾರ್ಥಿಗಳ ಕಥೆ/ವ್ಯಥೆ..!?

ಅತೀ ಹೆಚ್ಚು ವಿದ್ಯಾಸಂಸ್ಥೆಗಳು, ಉತ್ತಮ ಶಿಕ್ಷಣ ನೀಡುವ ಮಂಗಳೂರಿಗೆ ಬೇರೆ ಬೇರೆ ರಾಜ್ಯ, ಊರುಗಳಿಂದ ವಿದ್ಯಾರ್ಥಿಗಳ ಸಾಗರವೇ ಬರುತ್ತವೆ. ವಿದ್ಯಾರ್ಜನೆಗಾಗಿ ಕರಾವಳಿ ಕಡೆಗೆ ಒಲವು ತೋರುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ಮಂಗಳೂರಿನಲ್ಲಿ ಕೇರಳ ಮತ್ತು ಹೊರ ರಾಜ್ಯಗಳ ವಿದ್ಯಾರ್ಥಿಗಳ ಹಾವಳಿ ಹೆಚ್ಚಾಗಿದ್ದು, ಊರಿಗೆ ಮಾರಕ ಎನ್ನುವ ರೀತಿಯಲ್ಲಿ ಅವರ ಚಟುವಟಿಕೆಗಳು ನಡೆಯುತ್ತಿದೆ. 

ರಾತ್ರಿ ಆಯಿತೆಂದರೆ ಸಾಕು ಗಂಡು, ಹೆಣ್ಣು ಸೇರಿಕೊಂಡು ಪಬ್, ರೆಸಾರ್ಟ್ ಗಳಿಗೆ ಎಂಟ್ರಿ ಕೊಡುತ್ತಾರೆ.. ಇದಕ್ಕೆಂದೇ ಮಂಗಳೂರಿನಲ್ಲಿ ಇರುವ ಪಬ್, ರೆಸಾರ್ಟ್ ಗಳ ಸಂಖ್ಯೆ ಕೂಡ ಕಡಿಮೆಯೇನಿಲ್ಲ.. ಪಬ್ ಒಳಗಡೆ ಮಾದಕ ಲೋಕವೇ ಅಡಗಿದೆ. ಮಂಗಳೂರು ಪೊಲೀಸ್ ಇಲಾಖೆಯ ದಕ್ಷ ಕಣ್ಗಾವಲಿನಿಂದ ಅದೆಷ್ಟೋ ಡ್ರಗ್ಸ್ ಪೆಡ್ಲಾರ್ ಗಳನ್ನು ಹೆಡೆಮುರಿ ಕಟ್ಟಿರುವುದು ಮಂಗಳೂರಿಗೆ ಹೆಮ್ಮೆಯ ವಿಚಾರ. ಈ ಬಾರಿ ಪೊಲೀಸರು ಒಮ್ಮೆ ಈ ಪಬ್ ಗಳಿಂದ ರಾತ್ರಿ ಹೊರಬರುವ ಯುವತಿ, ಯುವಕರನ್ನು ವೈದ್ಯಕೀಯ ತಪಾಸಣೆ ಒಳಪಡಿಸಬೇಕಾಗಿದೆ.. ಇಲ್ಲಿ ಹೆಚ್ಚಿನವರು ಮಾದಕ ವ್ಯಸನಿಗಳೇ ಆಗಿರುತ್ತಾರೆ. ಇವರ ಮೂಲಕ ಎಲ್ಲಿಂದ ಮಾದಕ ವಸ್ತು ದೊರೆಯಿತು ಎಂದು ಜಾಲ ಹಿಡಿದರೆ, ಒಂದು ತಿಂಗಳ ಒಳಗಾಗಿ ಮಂಗಳೂರು ಡ್ರಗ್ಸ್ ಮುಕ್ತವಾಗುವುದರಲ್ಲಿ ಅನುಮಾನವಿಲ್ಲ.

ವಿದ್ಯಾರ್ಜನೆಗೆ ಆಗಮಿಸುವ ಅದೆಷ್ಟೋ ವಿದ್ಯಾರ್ಥಿಗಳ ಮಧ್ಯೆ ಕೆಲವು ಪುಂಡ ಯುವಕರ ಗುಂಪುಗಳು ಕೂಡ ಕೇರಳದಿಂದ ಮಂಗಳೂರಿಗೆ ಆಗಮಿಸಿ ಹಾಸ್ಟೆಲ್, ಪಿಜಿ, ಬಾಡಿಗೆ ಮನೆ, ಫ್ಲಾಟ್ ಗಳಲ್ಲಿ ನೆಲೆಸಿ ತಮ್ಮದೇ ಹೊಸ ಲೋಕವನ್ನು ಸೃಷ್ಟಿಸಿ ಕೊಂಡಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಬೈಕ್, ಸ್ಕೂಟಿ ಗಳಲ್ಲಿ ತಿರುಗಾಟ ಮಾತ್ರವಲ್ಲದೆ ತ್ರಿಬಲ್‌ ರೈಡ್ ಬೇರೆ ಇದು ಸದಾ ನಗರದಲ್ಲಿ ಕಾಣಸಿಗುವ ದೃಶ್ಯ. ಮಾದಕ ವಸ್ತುಗಳ ಸೇವನೆ ಜೊತೆಗೆ ಮಾರಾಟ ಮಾಡುತ್ತಾ ಮಂಗಳೂರಿಗೆ ಕೆಟ್ಟ ಹೆಸರು ತರುವಲ್ಲಿ ಹೊರ ರಾಜ್ಯದ ಜನರ ಪಾತ್ರವೂ ಪ್ರಮುಖವಾಗಿದೆ. 

ಕೆಲವೊಂದು ಕಡೆ ರಾತ್ರಿ ವೇಳೆ ಪೊಲೀಸ್ ನಾಕಾಬಂಧಿ ಇದ್ದರೂ, ಅದನ್ನು ಲೆಕ್ಕಿಸದೆ ಕೆಲವೊಂದು ಕಾರು ಮತ್ತು ಬೈಕ್ ಗಳು ರಾತ್ರಿ ಓಡಾಡುತ್ತಿವೆ. ರಾತ್ರಿ ಹೊತ್ತು ಮಂಗಳೂರಿನಲ್ಲಿ ಪಬ್ ಎಂಬ ಹೆಸರಿನಲ್ಲಿ ಕಾರ್ಯಚರಿಸುತ್ತಿರುವ ಬಾರ್ ಗಳಲ್ಲಿ ಡ್ರಗ್ಸ್ ಮತ್ತು ಗಾಂಜಾ ವ್ಯವಹಾರ ಜೋರಾಗೆ ನಡೆಯುತ್ತಿದೆ. ಈ ಬಗ್ಗೆ ಕೂಡ ಪೊಲೀಸ್ ಇಲಾಖೆ ಗಮನ ಹರಿಸಿ, ಡ್ರಗ್ಸ್ ವ್ಯಸನಿಗಳು ಸಿಕ್ಕಿಬಿದ್ದರೆ ಅವರಿಗೆ ಡ್ರಗ್ಸ್ ವಿತರಿಸುವ  ಮೂಲ ಅವರಿಂದಲೇ ತಿಳಿಯಬಹುದು. 

ಈ ಮೂಲಕ ಮಾನ್ಯ ಕಮೀಷನರ್ ಕುಲದೀಪ್ ಜೈನ್ ಮತ್ತು ಪೊಲೀಸ್ ಇಲಾಖೆಯ ಬಳಿ ನಮ್ಮ ಮನವಿ ಏನೆಂದರೆ, ಪ್ರತೀ ಫ್ಲಾಟ್‌, ಬಾಡಿಗೆ ಮನೆ ಮತ್ತು ವಸತಿಗೃಹದಲ್ಲಿ ಆಶ್ರಯ ಪಡೆಯುತ್ತಿರುವ ಹೊರ ರಾಜ್ಯದ ವಿದ್ಯಾರ್ಥಿಗಳ ಮಾಹಿತಿ ಪಡೆದು, ಅವರ ಚಟುವಟಿಕೆ ಗಮನಿಸಿ ನಂಬರ್ ಪ್ಲೇಟ್ ಇಲ್ಲದ ಗಾಡಿಗಳನ್ನು ಕೂಡಲೇ ವಶಕ್ಕೆ ಪಡೆದು, ಮಂಗಳೂರಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕಾಗಿ ವಿನಂತಿ. ದಕ್ಷಿಣ ಕನ್ನಡ, ಉಡುಪಿ ಮತ್ತು ಇಡೀ ಕರ್ನಾಟಕ ರಾಜ್ಯ ಡ್ರಗ್ಸ್ ಮುಕ್ತ ಆಗಬೇಕೆಂಬುದು ನಮ್ಮ ಆಶಯ.