ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಟಿ ರವಿ ಬಹುತೇಕ ಫಿಕ್ಸ್.!

ಮುಂದಿನ ರಾಜ್ಯಾಧ್ಯಕ್ಷ ಸಿಟಿ ರವಿ - ಘೋಷಣೆ ಮಾತ್ರ ಬಾಕಿ

ಕರ್ನಾಟಕ ಬಿಜೆಪಿಯಲ್ಲಿ ಕಳೆದ ಕೆಲ ಸಮಯದಿಂದ ಭಾರೀ ಚರ್ಚೆಯಲ್ಲಿರುವ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಸ್ಥಾನದ ಚರ್ಚೆ ಬಹುತೇಕ ಕ್ಲೈಮಾಕ್ಸ್ ಹಂತಕ್ಕೆ ತಲುಪಿದಂತಿದಿದ್ದು, ಸಿಟಿ ರವಿ ಮುಂದಿನ ರಾಜ್ಯಾಧ್ಯಕ್ಷ ಎನ್ನಲಾಗಿದೆ. 

ಕಳೆದ ಕೆಲ ಸಮಯದಿಂದ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಲವರ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿದ್ದರೂ ಇದೀಗ ಮಾಜಿ ಶಾಸಕ ಸಿಟಿ ರವಿ ಅವರ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದೆ. ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ವಿ ಸುನೀಲ್ ಕುಮಾರ್, ಬಸನಗೌಡ ಪಾಟೀಲ್ ಯತ್ನಾಳ್, ವಿ ಸೋಮಣ್ಣ, ಆರ್ ಅಶೋಕ್, ಡಾ ಅಶ್ವತ್ಥ್ ನಾರಾಯಣ್ ಸೇರಿದಂತೆ ಅನೇಕರ ಹೆಸರು ಕೇಳಿ ಬರುತ್ತಿತ್ತು.

ಆದರೆ ಸದ್ಯದ ಟ್ರೆಂಡ್ ಪ್ರಕಾರ ಮಾಜಿ ಶಾಸಕ ಬೆಂಕಿ ಚೆಂಡು ಸಿಟಿ ರವಿ ಅವರನ್ನೇ ರಾಜ್ಯ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ, ಇನ್ನೇನು ಘೋಷಣೆ ಮಾತ್ರ ಬಾಕಿ ಇದೆ ಎಂದು ತಿಳಿದು ಬಂದಿದೆ. ಮಾಜಿ ಶಾಸಕ ಸಿಟಿ ರವಿ ಅವರು ರಾಜ್ಯದಲ್ಲಿ ಪ್ರಬಲ ಸಮುದಾಯ ಎನಿಸಿಕೊಂಡಿರುವ ಒಕ್ಕಲಿಗ ಸಮುದಾಯದ ವ್ಯಕ್ತಿ ಆಗಿರುವುದರಿಂದ ಒಕ್ಕಲಿಗ ಮತಬ್ಯಾಂಕ್‌ಗೆ ಕಣ್ಣು ಹಾಕುವ ನಿಟ್ಟಿನಲ್ಲಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆ ಇದೆ. ಈವರೆಗೆ ಒಕ್ಕಲಿದ ಸಮುದಾಯ ಬಹುದೊಡ್ಡ ಸಂಖ್ಯೆಯಲ್ಲಿ ಜೆಡಿಎಸ್ ಪಕ್ಷವನ್ನು ಕೈ ಹಿಡಿದಿತ್ತು.

ಸದ್ಯ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿಯೂ ಆಗಿರುವುದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಮತ ಕಾಂಗ್ರೆಸ್ ಪಾಲಾಗುವ ಸಾಧ್ಯತೆ ನಿಚ್ಚಳವಾಗಿರುವುದರಿಂದ ಒಕ್ಕಲಿಗೆ ಮತಬುಟ್ಟಿಗೆ ಕೈ ಹಾಕುವ ನಿಟ್ಟಿನಲ್ಲಿ ಸಿಟಿ ರವಿ ಅವರಿಗೆ ನಾಯಕತ್ವ ನೀಡುವ ಸಾಧ್ಯತೆ ಹೇರಳವಾಗಿದೆ.