ಮಂಗಳೂರು: ಮನೆಗೆ ನುಗ್ಗಿ ಬಾಲಕಿಯ ಅತ್ಯಾಚಾರ - ಮಹಮ್ಮದ್ ಶಾಫಿ ಅರೆಸ್ಟ್

ಎಂಟನೇ ತರಗತಿ ಬಾಲಕಿಯ ಪದೇ ಪದೇ ಅತ್ಯಾಚಾರ - ಗರ್ಭಿಣಿಯಾದ ಬಾಲಕಿ - ಆರೋಪಿಯ ಬಂಧನ

ಮಂಗಳೂರು: ಮನೆಗೆ ನುಗ್ಗಿ ಎಂಟನೇ ತರಗತಿಯ ಬಾಲಕಿಯ ಅತ್ಯಾಚಾರವೆಸಗಿ ಆರು ತಿಂಗಳ ಗರ್ಭಿಣಿಯಾಗಿಸಿದ ಯುವಕನನ್ನು ನಗರ ಮಹಿಳಾ ಠಾಣಾ ಪೋಲಿಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಉಳ್ಳಾಲ ಪೇಟೆಯ ಮಹಮ್ಮದ್ ಶಾಫಿ ಅಲಿಯಾಸ್ ಶಾಫಿ ಎಂದು ಗುರುತಿಸಲಾಗಿದೆ.

8 ನೇ ತರಗತಿಯಲ್ಲಿ ಕಲಿಯುತ್ತಿದ್ದ ಬಾಲಕಿಗೆ ಉಳ್ಳಾಲ ಪೇಟೆಯ ಮಹಮ್ಮದ್ ಶಾಫಿ ಅಲಿಯಾಸ್ ಶಾಫಿ ಎಂಬವನ ಪರಿಚಯವಿದ್ದು, ದಾರಿಯಲ್ಲಿ ಕಾಣಸಿಕ್ಕಿದಾಗ ಮಾತನಾಡುತ್ತಿದ್ದ ಆದರೆ ಜನವರಿ ತಿಂಗಳಲ್ಲಿ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದ ಸಮಯ ಆರೋಪಿ ಶಾಫಿಯು ಬಾಲಕಿಯ ಬಾಯಿಗೆ ಕೈ ಹಿಡಿದು ರೂಮಿಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ.

ಇದಾದ ಬಳಿಕವೂ ಪದೇ ಪದೇ ಅವಳು ಒಬ್ಬಳೇ ಇದ್ದಾಗ ಆರೋಪಿಯು ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಬಾಲಕಿಯು 6 ತಿಂಗಳ ಗರ್ಭಿಣಿಯಾಗಿದ್ದು, ಬಾಲಕಿ ನೀಡಿದ ದೂರಿನಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಮತ್ತು ಉಳ್ಳಾಲ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.