ಸೌಜನ್ಯ ಪ್ರಕರಣದ ಸತ್ಯಶೋಧನಾ ವರದಿ - ಪತ್ರಕರ್ತ ವಸಂತ್ ಗಿಳಿಯಾರ್ ಮೇಲೆ ಅವಹೇಳನ

ಮೂವರ ವಿರುದ್ಧ ದೂರು ದಾಖಲು

ಪತ್ರಕರ್ತ ವಸಂತ್ ಗಿಳಿಯಾರ್ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಅವ್ಯಾಚ್ಯವಾಗಿ ನಿಂಧಿಸಿ, ಮಾನಹಾನಿ ನಡೆಸುತ್ತಿದ್ದ ಮೂವರ ಮೇಲೆ ಕೋಟ ಪೋಲಿಸ್ ಠಾಣೆ ಹಾಗೂ ಉಡುಪಿಯ ಸೆನ್ ಪೋಲಿಸ್ ಠಾಣೆ ಯಲ್ಲಿ ಕೇಸು ದಾಖಲಾಗಿದೆ.

ಧರ್ಮಸ್ಥಳ ಸೌಜನ್ಯ ಪ್ರಕರಣದ ಸತ್ಯ ಶೋಧನಾ ವರದಿಯನ್ನು ಪ್ರಸಾರ ಮಾಡುತ್ತಿದ್ದ ವಸಂತ್ ಗಿಳಿಯಾರ್ ಅವರನ್ನು ಗುರಿಯಾಗಿಸಿ ಪ್ರಜ್ವಲ್ ಗೌಡ, ಆರತಿ ಗಿಳಿಯಾರ, ಸುಖಿ ಶೆಟ್ಟಿ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಅವ್ಯಾಚ್ಯವಾಗಿ ನಿಂಧಿಸಿ ಸುಳ್ಳು ಸುದ್ದಿಯನ್ನು ಹಂಚಿಕೆ ಮಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಜ್ವಲ್ ಗೌಡ, ಆರತಿ ಗಿಳಿಯಾರ, ಸುಖಿ ಶೆಟ್ಟಿ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ಸಾಮಾಜಿಕ ಸ್ವಾಸ್ಥ್ಯ ವನ್ನು ಕದಡುತ್ತ ಅನೇಕ ಭಾರಿ ಅವಹೇಳನಕಾರಿಯಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎನ್ನಲಾಗಿದೆ. ವಸಂತ್ ಗಿಳಿಯಾರ್ ಅವರ ಪೋಟೊವನ್ನು ದುರ್ಬಳಕೆ ಮಾಡಿ ಮಾನಹಾನಿಕಾರವಾಗಿ ಎಡಿಟ್ ಮಾಡುತ್ತಿರುವ ಬಗ್ಗೆ ದೂರು ನೀಡಲಾಗಿದೆ.

ಕೋಟ ಪೋಲಿಸರು ಹಾಗೂ ಸೆನ್ ಪೋಲಿಸ್ ನಿರಿಕ್ಷಕರು ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.