ಮಂಗಳೂರು: ಶೌರ್ಯ ರಥಯಾತ್ರೆ-ವಿಹಿಂಪ ಕಾರ್ಯಾಲಯ ಉದ್ಘಾಟನೆ

ಶೌರ್ಯ ರಥಯಾತ್ರೆ ಕಾರ್ಯಾಲಯ ಕಾರ್ಯಾರಂಭ

ಮಂಗಳೂರು:  ವಿಶ್ವ ಹಿಂದೂ ಪರಿಷತ್‌ ಗೆ 60 ವರ್ಷಗಳ ಸಂಭ್ರಮ  ಹಿನ್ನೆಲ್ಲೆ ಭಾರತದಲ್ಲಿ ಶೌರ್ಯ ಜಾಗರಣ ರಥ ಯಾತ್ರೆಯನ್ನು ಬಜರಂಗದಳ ಆಯೋಜಿಸಿದೆ.

ಕರ್ನಾಟಕದಲ್ಲೂ ಚಿತ್ರದುರ್ಗದಿಂದ ಕರಾವಳಿ ಜಿಲ್ಲೆಗೆ ಶೌರ್ಯ ರಥ ಯಾತ್ರೆ ಹಮ್ಮಿಕೊಂಡಿದ್ದು ಸೆಪ್ಟೆಂಬರ್ 25 ರಂದು ಚಿತ್ರದುರ್ಗದಿಂದ ಹೊರಟ ರಥ ಯಾತ್ರೆ ಅಕ್ಟೋಬರ್ 9 ರಂದು ಮಂಗಳೂರು ಪ್ರವೆಶಿಸಲಿದೆ.

ಈ ಹಿನ್ನೆಲೆಯಲ್ಲಿ ಬೃಹತ್ ಶೋಭಾ ಯಾತ್ರೆ ಮತ್ತು ಸಾರ್ವಜನಿಕ ಸಭೆಯನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿದ್ದು ಈ ರಥಯಾತ್ರೆಯ ಪ್ರಯುಕ್ತ ವಿಶ್ವಹಿಂದೂ ಪರಿಷತ್ ಕಾರ್ಯಾಲಯವನ್ನು ನಗರದಲ್ಲಿ ಆರಂಭಿಸಿದ್ದು ಇದರ ಉದ್ಘಾಟನೆ ಗುರುವಾರ ನಡೆಯಿತು. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮಂಗಳೂರು ಮಹಾ ನಗರದ ಸಹ ಸಂಘ ಚಾಲಕರಾದ ಸುನೀಲ್ ಆಚಾರ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯಧ್ಯಕ್ಷರಾದ ಪ್ರೊ. ಎಂ ಬಿ ಪುರಾಣಿಕ್, ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಜಿಲ್ಲಾಧ್ಯಕ್ಷ ಎಚ್‌ಕೆ ಪುರುಷೋತ್ತಮ, ಕಾರ್ಯದರ್ಶಿ ಭುಜಂಗ ಕುಲಾಲ್, ರಥಯಾತ್ರೆ ಸ್ವಾಗತ ಸಮಿತಿ ಅಧ್ಯಕ್ಷರಾದ ಗಿರಿಧರ ಶೆಟ್ಟಿ, ಶಾಸಕ ವೇದವ್ಯಾಸ್ ಕಾಮತ್ ಮತ್ತಿತರ ನಾಯಕರುಗಳು ಉಪಸ್ಥಿತರಿದ್ದರು.