ವಿಟ್ಲ: ಅ. 3 ರಂದು ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಕಟ್ಟಡ ಮಂಡಳಿಯ ಕಾರ್ಮಿಕ ವಿರೋಧ ನೀತಿಯನ್ನು ವಿರೋಧಿಸಿ ಬಿಎಂಎಸ್ ವತಿಯಿಂದ ಪ್ರತಿಭಟನೆ

ವಿಟ್ಲ: ಅ. 3 ರಂದು ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಕಟ್ಟಡ ಮಂಡಳಿಯ ಕಾರ್ಮಿಕ ವಿರೋಧ ನೀತಿಯನ್ನು ವಿರೋಧಿಸಿ ಬಿಎಂಎಸ್ ವತಿಯಿಂದ ಪ್ರತಿಭಟನೆ

ವಿಟ್ಲ: ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ವಿಟ್ಲ ವತಿಯಿಂದ, ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ವಿವಿಧ ಸಮಸ್ಯೆಗಳ ಬಗ್ಗೆ ಈ ಪ್ರತಿಭಟಸೆ ದಿನಾಂಕ 03-10-2023 ಮಂಗಳವಾರ ಬೆಳಗ್ಗೆ 10 ಗಂಟೆಗೆ ವಿಟ್ಲ ಬಿಎಂಎಸ್ ಕಚೇರಿಯಿಂದ ಹೊರಟು, ವಿಟ್ಲ ನಾಡಕಚೇರಿಯ ಉಪತಹಶೀಲ್ದಾರಿಗೆ ಮನವಿ ಪತ್ರ ನೀಡುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಶ್ರೇಯೋಭಿವೃದ್ಧಿಗಾಗಿ ಇರುವ "ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ" ಯಲ್ಲಿ ತೆಗೆದುಕೊಳ್ಳುವ ತಪ್ಪು ನಿರ್ಣಯಗಳಿಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದ್ದು ಈ ಕುರಿತು ನಮ್ಮ ಸಂಘವು ಹಲವಾರು ಬಾರಿ ಮಂಡಳಿಯ ಉನ್ನತ ಅಧಿಕಾರಿಗಳು ಮತ್ತು ಕಾರ್ಮಿಕ ಸಚಿವರನ್ನು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ವಿವರಿಸಿ ಅವುಗಳ ಪರಿಹರಿಸುವಂತೆ ವಿನಂತಿಸಲಾಗಿತ್ತು. 

ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಮಾನ್ಯ ಸಚಿವರು ನೀಡಿರುವ ಆಶ್ವಾಸನೆ ಕಾರ್ಯರೂಪಕ್ಕೆ ಬಂದಿರುವುದಿಲ್ಲ, ಮತ್ತು ಕಾರ್ಮಿಕರ ಸೌಲಭ್ಯಕ್ಕಾಗಿ ಕಡಿತ ಮಾಡುವ ಬಗ್ಗೆ ಮಂಡಳಿಯ ಅಧ್ಯಕ್ಷರು (ಕಾರ್ಮಿಕ ಸಚಿವರು) ನಿಮ್ಮ ತೀರ್ಮಾನಿಸಿರುವ ಕುರಿತು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ. ಈ ರೀತಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಬಗ್ಗೆ ನಮ್ಮ ತೀವ್ರ ಆಕ್ಷೇಪವನ್ನು ವ್ಯಕ್ತ ಮಾಡುತ್ತಾ ಈ ಕೆಳಗಿನ ಕೆಲವು ವಿಷಯಗಳ ಕಾರ್ಮಿಕರಿಗೆ ಅನ್ಯಾಯವಾಗುವುದನ್ನು ಗಮನಕ್ಕೆ ತರುತ್ತಿದ್ದೇವೆ. 

  •  2021-22 ನೇ ಸಾಲಿನ ಕಟ್ಟಡ ಕಾರ್ಮಿಕ ಮಕ್ಕಳು ಸಲ್ಲಿಸಿದ ವಿದ್ಯಾರ್ಥಿ ವೇತನದ ಅರ್ಜಿಗಳಲ್ಲಿ ರಾಜ್ಯದಲ್ಲಿ ಸುಮಾರು 1 ಲಕ್ಷ ವಿದ್ಯಾರ್ಥಿಗಳೇ ಬಂದಿರುವುದಿಲ್ಲ, ಇದನ್ನು ಶೀಘ್ರ ಪಾವತಿ ಮಾಡೋದಕ್ಕೆ ಕ್ರಮ ಕೈಗೊಳ್ಳಬೇಕು..
  • 2022-23 ನೇ ಸಾಲಿನಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳು ಸಲ್ಲಿಸಿದ ವಿದ್ಯಾರ್ಥಿ ವೇತನದ ಸಹಾಯಧನ (ಸ್ಕಾಲರ್ಶಿಪ್) ಅರ್ಜಿಗಳನ್ನು ಪರಿಶೀಲಿಸಿ ಶೀಘ್ರ ಪಾವತಿ ಮಾಡಬೇಕು.
  • ನೂತನವಾಗಿ ಆಯ್ಕೆಯಾದ ಕರ್ನಾಟಕ ಸರ್ಕಾರದ ಕಾರ್ಮಿಕ ಮಂತ್ರಿಗಳಾದ ಮಾನ್ಯ "ಸಂತೋಷ್ ಲಾಡ್" ರವರು ಏಕಪಕ್ಷೀಯ ನಿರ್ಧಾರ ಕೈಗೊಂಡು ಕಾರ್ಮಿಕರ ಮದುವೆ, ಅಪಘಾತ ಮರಣ, ಸಹಜ ಮರಣ, ವೃದ್ಧಾಪ್ಯ ಪಿಂಚಣಿ ಹಾಗೂ ಸ್ಕಾಲರ್ಶಿಪ್ ನಲ್ಲಿ ಬಾರಿ ಪ್ರಮಾಣದಲ್ಲಿ ಕಡಿತ ಮಾಡಲು ನಿರ್ಧರಿಸುವುದಾಗಿ ತಿಳಿದು ಬಂದಿದೆ ಇದನ್ನು ಕೂಡಲೇ ಹಿಂಪಡೆದು ಈ ಮುಂಚಿನAತೆ ಕಾರ್ಮಿಕರಿಗೆ ಈ ಎಲ್ಲಾ ಸೌಲಭ್ಯಗಳನ್ನು ನೀಡಬೇಕು.
  • ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಹಾಗೂ ಅವಲಂಬಿತರ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಮರುಪಾವತಿಯಲ್ಲಿರುವ ಅವ್ಯವಸ್ಥೆಯನ್ನು ಕೂಡಲೆ ಸರಿಪಡಿಸಬೇಕು.
  • ಕಟ್ಟಡ ಮತ್ತು ಇತರೆ ಕಾರ್ಮಿಕರ ವಸತಿ ಯೋಜನೆಗೆ ಸಾಲ ಮತ್ತು ಸಹಾಯಧವನ್ನು ಕೂಡಲೇ ನೀಡಬೇಕು ಮತ್ತು ವಸತಿ ಯೋಜನೆಯ ಹೆಸರಲ್ಲಿ ಕರ್ನಾಟಕ ಸರ್ಕಾರದ ಇತರ ಮಂಡಳಿಗಳಿಗೆ ಹಣ ನೀಡುವುದನ್ನು ನಿಲ್ಲಿಸಬೇಕು.
  • ಮರಣ ಹೊಂದಿದ ಕಾರ್ಮಿಕರ ಸಂಗಾತಿಗೆ ವಿಧವಾ ವೇತನ ನೀಡಬೇಕು ಮತ್ತು ಮರಣ ಹೊಂದಿದ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ಆರ್ಥಿಕ ಪುನಶ್ಚೇತನಕ್ಕಾಗಿ ಕ್ರಮಗಳನ್ನು ಕೈಗೊಳ್ಳಬೇಕು.
  • ಜನಪ್ರಿಯ ಯೋಜನೆ ಜಾರಿಗೆ ತರುವುದನ್ನು ಕೈ ಬಿಡಬೇಕು ಉದಾಹರಣೆಗೆ ಮೆಡಿಕಲ್ ಕ್ಯಾಂಪ್ ದೃಷ್ಟಿಯಲ್ಲಿ ಟೆಂಡರ್ ಕರೆಯುವುದು ಉಪಯೋಗವಿಲ್ಲದ ಮೆಡಿಕಲ್ ಕಿಟ್ ಗಳನ್ನು ಕಾರ್ಮಿಕರಿಗೆ ವಿತರಿಸುವುದು ಕಳಪೆ ದರ್ಜಿಯ ಕೆಲಸದ ಸಾಮಗ್ರಿಗಳನ್ನು ವಿತರಿಸುವುದು ಇತ್ಯಾದಿ.
  • ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಮತ್ತು ಮರು ನೋಂದಣಿ ಹಾಗೂ ಎಲ್ಲಾ ಸೌಲಭ್ಯಕ್ಕೆ ಅರ್ಜಿ ಹಾಕುವ ವ್ಯವಸ್ಥೆಯನ್ನು ಕೇವಲ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ಸಂಘಟನೆಗಳಿಗೆ ಮಾತ್ರ ಅವಕಾಶ ಕೊಡಬೇಕೆಂದು ನಾವು ನಮ್ಮ ಸಂಘದಿAದ 2018 ರಿಂದ 2020ರ ಮೂರರವರೆಗೆ ಹಲವು ಬಾರಿ ಪತ್ರ ಬರೆದು ನಂದಿಸಿದರು ಸಹ ಕರ್ನಾಟಕ ಸರ್ಕಾರದ ಮಂತ್ರಿಗಳಾಗಲಿ ಕಟ್ಟಡ ಕಾರ್ಮಿಕ ಮಂಡಳಿ ಅಧ್ಯಕ್ಷರಾಗಲಿ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಾಗಲಿ ಗಮನಹರಿಸಲಿಲ್ಲ ಹಾಗೂ ಪತ್ರಗಳನ್ನು ಪರಿಗಣಿಸಲು ಇಲ್ಲ ಎಂಬುದು ತುಂಬಾ ವಿಷಾದನೀಯ ಸಂಗತಿ...
  • ಕರ್ನಾಟಕ ಒನ್ ,ಬೆಂಗಳೂರು ಒನ್,ಗ್ರಾಮ ಒನ್ ಹಾಗೂ ಸಾರ್ವಜನಿಕ ಸೇವ ಕೇಂದ್ರ (ಅSಅ) ಗಳಿಗೆ ನೋಂದಣಿ ಮತ್ತು ಮರಣ ಹಾಗೂ ಎಲ್ಲಾ ಸೌಲಭ್ಯಕ್ಕೆ ಅರ್ಜಿ ಹಾಕಲು ಅವಕಾಶ ನೀಡಿದ ಪರಿಣಾಮವಾಗಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರಲ್ಲದವರ ಭಾರಿ ಪ್ರಮಾಣದಲ್ಲಿ ನೋಂದಣಿ ಆಗಿರುತ್ತದೆ ಎಂಬುದು ನಮ್ಮ ಸ್ಪಷ್ಟವಾದ ಅಭಿಪ್ರಾಯ ಇದು ಕಲ್ಯಾಣ ಮಂಡಳಿಯ ಅಧ್ಯಕ್ಷರು, ಕಾರ್ಮಿಕ ಇಲಾಖೆಯ ಮುಖ್ಯ ಕಾರ್ಯದರ್ಶಿಯ ನಿರ್ಣಯದಿಂದ ಆದ ತಪ್ಪಾಗಿರುತ್ತದೆ. ಆದುದರಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಲ್ಲದವರು ನೋಂದಣಿ ಆಗುವುದನ್ನು ಮತ್ತು ಸೌಲಭ್ಯ ಪಡೆಯುವುದನ್ನು ತಡೆಗಟ್ಟಲು ಕೂಡ ಸೂಕ್ತ ಕ್ರಮ ಕೈಗೊಳ್ಳಬೇಕು .
  • ನಮ್ಮ ಭಾರತೀಯ ಮಜ್ದೂರ್ ಸಂಘ ದೇಶದ ಅತಿ ದೊಡ್ಡ ಕಾರ್ಮಿಕ ಸಂಘಟನೆ ಆಗಿರುತ್ತದೆ ಆದ್ದರಿಂದ ನಮ್ಮ ಸಂಘವು ಭಾರತೀಯ ಮಜ್ದೂರ್ ಸಂಘಕ್ಕೆ ಸಂಯೋಜಿತವಾದ ರಾಜ್ಯ ಫೆಡರೇಶನ್ ಆಗಿದ್ದು, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸದಸ್ಯತ್ವ ನೀಡಬೇಕೆಂದು ಒತ್ತಾಯಿಸುತ್ತೇವೆ..
  • ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಈಗ ಕೊಡುವ ಸೌಲಭ್ಯಗಳನ್ನು ಕಡಿತ ಮಾಡಿದ್ದೆ ಆದಲ್ಲಿ ನಾವು ನಮ್ಮ ಸಂಘದಿ0ದ ಉಗ್ರ ಹೋರಾಟವನ್ನು ಕರ್ನಾಟಕ ಸರ್ಕಾರ ಕಲ್ಯಾಣ ಮಂಡಳಿಯ ವಿರುದ್ಧ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಹಾಗೂ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಸರ್ಕಾರದ ಕಟ್ಟಡ ಕಾರ್ಮಿಕರ ವಿರೋಧ ನೀತಿಯನ್ನು ಧಿಕ್ಕರಿಸಿ ಹೋರಾಟ ಮಾಡುವುದು ಹಾಗೂ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ. 

ಎಂದು ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಮಾತನ್ನು ಕೇಳಲು ಬಯಸುತ್ತಿದ್ದೇವೆ. ಈ ಮೇಲಿನ ಎಲ್ಲಾ ಬೇಡಿಕೆಗಳನ್ನು ಕನ್ನಡ ಸರ್ಕಾರ ಆ ಕಲ್ಯಾಣ ಮಂಡಳಿ ಕೂಡಲೇ ಈಡೇರಿಸಬೇಕು, ಇಲ್ಲವಾದಲ್ಲಿ.. ರಾಜ್ಯದಂತ ಕಟ್ಟಡ ಕಾರ್ಮಿಕ ವಿರೋಧವನ್ನು ತಾವು ಎದುರಿಸಬೇಕಾಗ್ತದೆ ಎಂದು ಆಯೋಜಕರು ಎಚ್ಚರಿಕೆ ನೀಡಿದ್ದಾರೆ.