ಉಡುಪಿ: ಅಂಗಳದಲ್ಲಿ ಬೃಹತ್ ಗಾತ್ರದ ಹೆಬ್ಬಾವು.!

ಕೆಳ ಪರ್ಕಳದಲ್ಲಿ 8 ಅಡಿಯ ಬೃಹತ್ ಗಾತ್ರದ ಹೆಬ್ಬಾವು ಪತ್ತೆ

ಉಡುಪಿ: ಆಹಾರ ನುಂಗಿ ಓಡಾಡಲಾಗದೆ ಅಂಗಳದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾದ ಘಟನೆ ಕೆಳ ಪರ್ಕಳದಲ್ಲಿ ನಡೆದಿದೆ

ಬೃಹತ್ ಗಾತ್ರದ ಹೆಬ್ಬಾವು ಒಂದು ಕೆಳ ಪರ್ಕಳದ ಸ್ಥಳೀಯ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾದ ಆದರ್ಶ ಶೆಟ್ಟಿಗಾರ್ ಅವರ ಮನೆ ಬಳಿ ಕಂಡು ಬಂದಿದೆ.

ಆಹಾರ ನುಂಗಿ ಓಡಾಡಲಾಗದೆ ಅಂಗಳದಲ್ಲಿ ಮೆಲ್ಲನೆ ಚಲಿಸುವುದು ಕಂಡುಬAದಿದೆ ತಕ್ಷಣ ಸ್ಥಳೀಯರಾದ ಗಣೇಶ್ ಆಚಾರ್ಯ ರವರಿಗೆ ಮಾಹಿತಿ ನೀಡಿ ಹೆಬ್ಬಾವು ಅನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಗಿದೆ. ಈ ಹೆಬ್ಬಾವು ಅಂದಾಜು 8 ಅಡಿ ಉದ್ದವಿತ್ತು ಎಂದು ತಿಳಿಸಿದ್ದಾರೆ. 30 ರಿಂದ 35 ಕೆಜಿ ಭಾರವಿತ್ತು ಎನ್ನಲಾಗಿದೆ.