ಏಷ್ಯಾನ್ ಗೇಮ್ಸ್: 16 ಚಿನ್ನದ ಪದಕ ಗೆದ್ದ ಭಾರತ..! ಮತ್ತೊಮ್ಮೆ ಐತಿಹಾಸಿಕ ಸಾಧನೆಯ ಶಿಖರದತ್ತ ಭಾರತಾಂಬೆಯ ಕ್ರೀಡಾಳುಗಳು..!

ಏಷ್ಯಾನ್ ಗೇಮ್ಸ್: 16 ಚಿನ್ನದ ಪದಕ ಗೆದ್ದ ಭಾರತ..! ಮತ್ತೊಮ್ಮೆ ಐತಿಹಾಸಿಕ ಸಾಧನೆಯ ಶಿಖರದತ್ತ ಭಾರತಾಂಬೆಯ ಕ್ರೀಡಾಳುಗಳು..!

ಏಷ್ಯಾನ್ ಗೇಮ್ಸ್ನಲ್ಲಿ ಹಿಂದೆಂದಿಗಿಂತಲೂ ಅಮೋಘ ಸಾಧನೆಯತ್ತ ಹೆಜ್ಜೆ ಹಾಕುತ್ತಿದೆ. ಈಗಾಗಲೇ 16 ಚಿನ್ನದ ಗರಿಯನ್ನು ತನ್ನ ತೆಕ್ಕೆಗೆ ಹಾಕಿದ ಭಾರತಾಂಬೆಯ ಮಕ್ಕಳು ಮತ್ತೊಮ್ಮೆ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಆ ಮೂಲಕ ಈ ಹಿಂದೆ ದಾಖಲಾಗಿದ್ದ ಅತೀ ಹೆಚ್ಚು ಚಿನ್ನ ಗೆದ್ದ ದಾಖಲೆಯನ್ನು ಸರಿಸಮವಾಗಿಸಿದೆ. ಹನ್ನೊಂದನೇ ದಿನವಾದ ಇಂದು ಸ್ವರ್ಣ ಪದಕ ಗೆಲ್ಲಲು ಸೆಣಸಾಟ ಆರಂಭವಾಗಿದೆ. 

ಜ್ಯೋತಿ ಸುರೇಖಾ ವೆನ್ನಂ ಹಾಗೂ ಓಜಸ್ ದೇವತಲೆ ಅವರು ಕೊರಿಯಾದ ಚೇವಾನ್ ಮತ್ತು ಜೂ ಜೇಹೂನ್ ಅವರನ್ನು ಸೋಲಿಸಿ ಚಿನ್ನದ ಪದಕ ಬೇಟೆಯಾಡಿದ್ದಾರೆ.

35 ಕಿಮೀ ಮಿಶ್ರ ಓಟದ ನಡಿಗೆ ಸ್ಪರ್ಧೆಯಲ್ಲಿ ರಾಮ್ ಬಾಬೂ ಮತ್ತು ಮಂಜು ರಾಣಿ ಜೋಡಿ ಕಂಚು

 

10ನೇ ದಿನದಲ್ಲಿ ಭಾರತದ ಫಲಿತಾಂಶಗಳು

ಮಹಿಳೆಯರ 5000 ಮೀಟರ್ ಓಟದಲ್ಲಿ ಪಾರುಲ್ ಚೌಧರಿ ಚಿನ್ನದ ಪದಕ 

ಜಾವೆಲಿನ್ ಥ್ರೋನಲ್ಲಿ 62.92 ಮೀಟರ್ ದೂರ ಎಸೆದ ಅಣ್ಣು ರಾಣಿ ಚಿನ್ನದ ಪದಕ 

800 ಮೀಟರ್ ಓಟದ ಸ್ಪರ್ಧೆಯಲ್ಲಿ ಮೊಹಮ್ಮದ್ ಅಫ್ಸಲ್ ಬೆಳ್ಳಿ ಪದಕ 

ಮಹಿಳೆಯರ 400 ಮೀಟರ್ ಹರ್ಡಲ್ಸ್ ನಲ್ಲಿ ವಿಥ್ಯಾ ರಾಮ್ ರಾಜ್ ಕಂಚಿನ ಪದಕ 

ಮಹಿಳೆಯರ 54 ಕೆಜಿ ಬಾಕ್ಸಿಂಗ್ ನಲ್ಲಿ ಪ್ರೀತಿ ಪವಾರ್ ಕಂಚಿನ ಪದಕ 

ಪುರುಷರ ಕ್ಯಾನೋ ಡಬಲ್ 1000 ಮೀಟರ್ ನಲ್ಲಿ ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್ ಕಂಚಿನ ಪದಕ 

ಪುರುಷರ ಡೆಕತ್ಲಾನ್ ನಲ್ಲಿ ಶಂಕರ್ ತೇಜಸ್ವಿನ್ ಬೆಳ್ಳಿ ಪದಕ

ಪುರುಷರ 92 ಕೆಜಿ ವಿಭಾಗದ ಬಾಕ್ಸಿಂಗ್‌ನಲ್ಲಿ ನರೇಂದರ್ ಕಂಚಿನ ಪದಕ

ಪುರುಷರ ಟ್ರಿಪಲ್ ಜಂಪ್‌ನಲ್ಲಿ ಚಿತ್ರವೇಲ್ ಪ್ರವೀಣ್ ಕಂಚಿನ ಪದಕ

ಮಹಿಳೆಯರ ಬಾಕ್ಸಿಂಗ್‌ನಲ್ಲಿ ಝರೀನ್ ನಿಖಾತ್ ಕಂಚಿನ ಪದಕ