"ಚಿನ್ನ ಗೆದ್ದ ಚಿನ್ನದ ಹುಡುಗ"

ಏಷ್ಯನ್‌ ಗೇಮ್ಸ್‌ - ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ನೀರಜ್ ಚೋಪ್ರಾ

ಹ್ಯಾಂಗ್‌ಝೂನಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ ನಲ್ಲಿ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ನಿರೀಕ್ಷೆಯಂತೆ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ.

ನೀರಜ್ ಚೋಪ್ರಾ ಅವರಿಗೆ ತೀವ್ರ ಪೈಪೋಟಿ ನೀಡಿದ ಭಾರತದ ಇನ್ನೋರ್ವ ಕಿಶೋರ್ ಜೆನಾ ಬೆಳ್ಳಿಯ ಪದಕವನ್ನು ಗೆದ್ದಿದ್ದು ಭಾರತಕ್ಕೆ ಮತ್ತೆ ಎರಡು ಪದಕ ಸೇರಿದೆ.

ಇನ್ನು ಪುರುಷರ 4×400 ಮೀ ರಿಲೇಯಲ್ಲಿ ಭಾರತವು ಚಿನ್ನದ ಪದಕವನ್ನು ಗೆದ್ದಿದ್ದು, 3:01.58 ಸಮಯದಲ್ಲಿ ಹೊಸ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿದೆ.. ಇದರೊಂದಿಗೆ 2023 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 81 ಪದಕಗಳನ್ನು ಗೆದ್ದಂತಾಗಿದೆ. ಈ ಬಾರಿ ಭಾರತವು 100 ಪದಕಗಳ ಗುರಿಯನ್ನು ಹೊಂದಿದ್ದು ಅದು ಈಗ ನಿಜವಾಗುವ ಸಾಧ್ಯತೆ ತೋರುತ್ತಿದೆ.