ಮಂಗಳೂರು: ಬೀದಿ ವ್ಯಾಪಾರಿಗಳಿಂದ ಪಾಲಿಕೆ ಕಚೇರಿಗೆ ಮುತ್ತಿಗೆ.!

ಗುರುತಿನ ಚೀಟಿಗಾಗಿ ಬೀದಿ ವ್ಯಾಪಾರಿಗಳಿಂದ ಮಂಗಳೂರು ಪಾಲಿಕೆ ಆಯುಕ್ತರ ಕಚೇರಿಗೆ ಮುತ್ತಿಗೆ

ಮಂಗಳೂರು: ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರ ವಿತರಣೆ ಮಾಡದ ಹಿನ್ನೆಲೆ ಮಂಗಳೂರು ಪಾಲಿಕೆ ಆಯುಕ್ತರ ಕಚೇರಿಗೆ ಇಂದು ಬೀದಿ ಬದಿ ವ್ಯಾಪಾರಿಗಳು ಮುತ್ತಿಗೆ ಹಾಕಿದ ಘಟನೆ ನಡೆಯಿತು.

2021 ರಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸರ್ವೆ ನಡೆಸಿ ಒಟ್ಟು ಸಂಖ್ಯೆ 667 ಜನ ಬೀದಿ ಬದಿ ವ್ಯಾಪರಸ್ಥರಿಗೆ ಕೊಡಬೇಕಾದ ಐಡಿ ಕಾರ್ಡ್ ಗಳು ತಡೆ ಹಿಡಿದಿದ್ದಾರೆ, 2022 ರ ಆಗಸ್ಟ್ ನಲ್ಲಿ ಐಡಿ ಕಾರ್ಡ್ ಪ್ರಿಂಟ್ ಆಗಿದ್ದರೂ ವ್ಯಾಪರಸ್ಥರಿಗೆ ಕೊಡದೇ ಇರುವುದಲ್ಲಿ ಖಂಡಿಸಿ ಇಂದು ಪಾಲಿಕೆ ಆಯುಕ್ತರ ಕಚೇರಿ ಮುಂದೆ ಪ್ರತಿಭಟಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತರು ಅಕ್ಟೋಬರ್ 30 ರ ಒಳಗೆ ಕೊಡುವುದಾಗಿ ತಿಳಿಸಿದ್ದರು. ಒಂದು ವೇಳೆ ಅಲ್ಲಿಯು ವಿಳಂಬ ಮಾಡಿದ್ದಲ್ಲಿ. ಇದೇ ಬರುವ ನವೆಂಬರ್ 1 ರಂದು ರಾಜ್ಯೋತ್ಸವ ದಿನ ಜೈಲೊ ಬರೋ ನಡೆಸುದಾಗಿ ತಿಳಸಿದರು.

ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆಯುಕ್ತ ಆನಂದ್, ಈ ತಿಂಗಳ ಒಳಗೆ ಗುರುತಿನ ಚೀಟಿ, ಪ್ರಮಾಣ ಪತ್ರ ನೀಡುವ ಭರವಸೆ ನೀಡಿದರು. 667 ಜನರಿಗೆ ಗುರುತಿನ ಚೀಟಿ, ಪ್ರಮಾಣಪತ್ರ ನೀಡಬೇಕಾಗಿದೆ. ಮೇಯರ್, ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನೀಡುತ್ತೇವೆ. 30 ರ ಒಳಗಡೆ ಕಾರ್ಯಕ್ರಮ ಆಯೋಜಿಸಿ ಐಡೆಂಟಿಟಿ ಕಾರ್ಡ್, ಪ್ರಮಾಣಪತ್ರ ವಿತರಣೆ ಮಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಂಘದ ಗೌರವ ಅಧ್ಯಕ್ಷರಾದ ಬಿ.ಕೆ.ಇಮ್ತಿಯಾಸ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.