ತೋಕೂರು ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಹಿಂದುಯೇತರರಿಗೆ ವ್ಯಾಪರಕ್ಕೆ ಅವಕಾಶ ನೀಡದಂತೆ ವಿಹಿಂಪ ಮನವಿ

ತೋಕೂರು ಶ್ರೀ ಸುಬ್ರಮಣ್ಯ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಹಿಂದುಯೇತರರಿಗೆ ವ್ಯಾಪರಕ್ಕೆ ಅವಕಾಶ ನೀಡದಂತೆ ವಿಶ್ವ ಹಿಂದೂ ಪರಿಷತ್ ಮುಲ್ಕಿ ಪ್ರಖಂಡ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಮನವಿ

ಹಳೆಯಂಗಡಿ: ತೋಕೂರು ಶ್ರೀ ಸುಬ್ರಮಣ್ಯ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಹಿಂದುಯೇತರರಿಗೆ ವ್ಯಾಪರಕ್ಕೆ ಅವಕಾಶ ನೀಡದಂತೆ ವಿಶ್ವ ಹಿಂದೂ ಪರಿಷತ್ ಮುಲ್ಕಿ ಪ್ರಖಂಡ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಮನವಿ ಮಾಡಿದ್ದಾರೆ. 

ಸದ್ಯ ಕರಾವಳಿಯಲ್ಲಿ ವ್ಯಾಪರ ದಂಗಲ್ ಕಿಚ್ಚು ಹೆಚ್ಚಿದ್ದು, ಹಲವು ದೇವಸ್ಥಾನಗಳಲ್ಲಿ ಮುಸ್ಲಿಂ ವ್ಯಾಪರಿಗಳಿಗೆ ವ್ಯಾಪರಕ್ಕೆ ಅವಕಾಶ ನೀಡದಂತೆ ವಿಶ್ವ ಹಿಂದೂ ಪರಿಷತ್ ಆಗ್ರಹ ಮಾಡಿದ್ದು, ಈಗಾಗಲೇ ಹೆಚ್ಚಿನ ಕಡೆಗಳಲ್ಲಿ ಹಿಂದುಯೇತರರಿಗೆ ವ್ಯಾಪರಕ್ಕೆ ಅವಕಾಶವಿಲ್ಲವೆಂದು ಆಡಳಿತ ಮಂಡಳಿಗಳು ತಿರ್ಮಾನಿಸಿದ್ದಾರೆ. ಈದೀಗಾ ತೋಕೂರು ಶ್ರೀ ಸುಬ್ರಮಣ್ಯ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಹಿಂದುಯೇತರರಿಗೆ ವ್ಯಾಪರಕ್ಕೆ ಅವಕಾಶ ನೀಡದಂತೆ ವಿಶ್ವ ಹಿಂದೂ ಪರಿಷತ್ ಮುಲ್ಕಿ ಪ್ರಖಂಡ ಮನವಿ ಮಾಡಿದೆ ಎಂದು ಮಾಧ್ಯಮಕ್ಕೆ ಬಜರಂಗದಳ ಸಂಚಾಲಕರಾದ ಅಮಿತ್ ಶೆಟ್ಟಿ ತಿಳಿಸಿದ್ದಾರೆ.

ಮನವಿಯಲ್ಲಿ ಉಲ್ಲೇಖಿಸಲಾದ ವಿಷಯ 

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ತಿದ್ದುಪಡಿ ಅಧಿನಿಯಮ 2012 ಸಂಖ್ಯೆ 12 ರ ಪ್ರಕಾರ ಅಧಿಸೂಚಿತ ಸಂಖ್ಯೆ 31/12 ರಂತೆ ಧಾರ್ಮಿಕ ಇಲಾಖೆಗೆ ಸಂಬoಧಪಟ್ಟ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಂದುಗಳಲ್ಲದವರಿಗೆ (ಹಿಂದುಯೇತರರಿಗೆ) ಅಂಗಡಿ ಮುಂಗಟ್ಟುಗಳ ಗುತ್ತಿಗೆಯನ್ನು ನೀಡತಕ್ಕದಲ್ಲ ಎಂಬ ಅಧಿನಿಯಮವಿದೆ, ಈ ನಿಯಮದ ಪ್ರಕಾರ ದೇವಸ್ಥಾನಗಳ ಜಾತ್ರಾಮಹೋತ್ಸವ, ರಥೋತ್ಸವ ಹಾಗು ಇನ್ನಿತರ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಿಂದುಯೇತರರಿಗೆ ಅವಕಾಶ ಕೊಡಬಾರದು ಹಾಗೂ ಟೆಂಡರ್ ಪಕ್ರಿಯೆಗಳಲ್ಲಿ ಹಿಂದುಯೇತರರು ಭಾಗವಹಿಸದಿರಲು ನಿಯಮದ ಪ್ರಕಾರ ಕ್ರಮಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ.