ಕಾಸರಗೋಡು: ಒಂಟಿಯಾಗಿ ವಾಸಿಸುತ್ತಿದ್ದ ವಿವಾಹಿತೆಯ ಅತ್ಯಾಚಾರ - ಗರ್ಭಕ್ಕೆ ಹೊಣೆಯಾರೆಂದು ಗೊತ್ತಿಲ್ಲ ಎಂದ ಸಂತ್ರಸ್ತೆ

ಕಾಸರಗೋಡು: ಒಂಟಿಯಾಗಿ ವಾಸಿಸುತ್ತಿದ್ದ ವಿವಾಹಿತೆಯ ಅತ್ಯಾಚಾರ - ಗರ್ಭಕ್ಕೆ ಹೊಣೆಯಾರೆಂದು ಗೊತ್ತಿಲ್ಲ ಎಂದ ಸಂತ್ರಸ್ತೆ

ಕಾಸರಗೋಡು: ಮೂರು ಮಂದಿಯಿAದ ಲೈಂಗಿಕ ಕಿರುಕುಳಕ್ಕೆ ಒಳಗಾಗಿ ಯುವತಿ ಒಂಭತ್ತು ತಿಂಗಳ ಗರ್ಭಿಣಿಯಾದ ಘಟನೆ ನಡೆದಿದೆ. ಈಗ ಪೊಲೀಸರ ಎದುರು ಯುವತಿ ಯಾರಿಂದ ಗರ್ಭ ಧರಿಸಿರುವುದೆಂದು ತಿಳಿದುಬಂದಿಲ್ಲವೆಂದು ಹೇಳಿಕೆ ನೀಡಿದ್ದಾಳೆ.  

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮೂರು ಮಂದಿ ವಿರುದ್ಧ ಮೇಲ್ಪರಂಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.

ಪುರುಷು, ಬದ್ರುದ್ದೀನ್, ರಾಘವನ್ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ. ಅವರನ್ನು ಪತ್ತೆಹಚ್ಚುವ ಕ್ರಮ ಆರಂಭಿಸಿರುವುದ್ದಾಗಿ ಪೊಲೀಸರು ತಿಳಿಸಿದ್ದಾರೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ 30ರ ಹರೆಯದ ಯುವತಿ ದೂರುದಾತೆಯಾಗಿದ್ದಾಳೆ. ಈಕೆ ವಿವಾಹಿತೆಯಾಗಿದ್ದರೂ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಾಳೆನ್ನಲಾಗಿದೆ. 

ಒಂಭತ್ತು ತಿಂಗಳ ಗರ್ಭಿಣಿ ಯಾದರೂ ಆ ಬಗ್ಗೆ ಯಾರಿಗೂ ತಿಳಿದುಬಂದಿಲ್ಲ. ಈ ಮಧ್ಯೆ ಯುವತಿ ಗರ್ಭಿಣಿಯಾದ ವಿಷಯ ಕುಟುಂಬಶ್ರೀ ಕಾರ್ಯ ಕರ್ತೆಯರ ಗಮನಕ್ಕೆ ಬಂದಿತ್ತು. ಅನಂತರ ಮೇಲ್ಪ ರಂಬ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದರು. 

ಮೂರು ಮಂದಿ ತನ್ನ ಗರ್ಭಕ್ಕೆ ಹೊಣೆಯಾಗಿದ್ದಾರೆ. ಆದರೆ ಯಾರಿಂದ ಗರ್ಭ ಧರಿಸಿರುವುದೆಂದು ತಿಳಿದುಬಂದಿಲ್ಲವೆAದು ಯುವತಿ ಹೇಳಿಕೆ ನೀಡಿದ್ದಾಳೆ. ಆರೋಪಿಗಳನ್ನು ಪತ್ತೆಹಚ್ಚಬೇಕಾದರೆ ಸಮಗ್ರವಾಗಿ ಹೇಳಿಕೆ ದಾಖಲಿಸಬೇಕಾಗಿದೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ.