ಜನರ ಮನಗೆದ್ದ "ಪರಮಾತ್ಮೆ ಪಂಜುರ್ಲಿ" ತುಳು ನಾಟಕ

ಕಲಾಕುಂಭ ಕುಳಾಯಿ ಕಲಾವಿದರ ಚೊಚ್ಚಲ ಕಲಾ ಕಾಣಿಕೆ

ಪ್ರಥಮ ಪ್ರದರ್ಶನದ ಮೂಲಕ ಮೆಚ್ಚುಗೆಗೆ ಪಾತ್ರವಾದ "ಪರಮಾತ್ಮೆ ಪಂಜುರ್ಲಿ"

ಮಂಗಳೂರು : "ಪರಮಾತ್ಮೆ ಪಂಜುರ್ಲಿ" ಎಂಬ ತುಳು ನಾಟಕವನ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಕುಳಾಯಿ ಕಲಾವಿದರ ತಂಡ ಪ್ರಥಮ ಪ್ರದರ್ಶನ ಯಶಸ್ವಿಯಾಗಿ ನೀಡಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.  

ಪಾಡ್ಡನ ಆಧರಿತ ಕುಳಾಯಿ ಮಾಧವ ಭಂಡಾರಿ ಸಾಹಿತ್ಯದಲ್ಲಿ ನಾಗೇಶ್ ಕುಳಾಯಿ ನಿರ್ದೇಶನದಲ್ಲಿ ಮೂಡಿಬಂದಿರುವ ಪರಮಾತ್ಮೆ ಪಂಜುರ್ಲಿ ಈ ನಾಟಕದ ಪ್ರತಿಯೊಂದು ಸಂಭಾಷಣೆಯು ಶುದ್ಧ ತುಳು ಪದಗಳ ಸಾಹಿತ್ಯ ಭಂಡಾರದಿ0ದ ತುಂಬಿದ್ದು ಕೇಳುಗರ ಕೀವಿಗೆ ರಸದೌತಣ ನೀಡಿದೆ. ಪ್ರಥಮ ಪ್ರದರ್ಶನದ ಮೂಲಕ ಜನರ ಮನ ಗೆದ್ದಿದೆ.    

ಅತ್ಯಧ್ಬುತವಾಗಿ ನಟಿಸಿದ ಯುವ ಪ್ರತಿಭಾವಂತ ಕಲಾವಿದರು ಹಾಗೇ ಸ್ಟೇಜ್ ಸೆಟ್ಟಿಂಗ್ ಕೂಡ ನೋಡುಗರ ಮನ ಮುಟ್ಟುವ ರೀತಿಯಲ್ಲಿ ತೋರಿಸಲಾಗಿತ್ತು. ಈ ಸಂಭಾಷಣೆಗೆ ಪ್ರಬುದ್ಧ ಕಲಾವಿದರ ಕಂಠದಾನದಿ0ದ ಇನ್ನಷ್ಟು ಮೆರುಗು ನೀಡಿದ್ದು, ತುಳುನಾಡ ಧರ್ಮದೈವ ಪಂಜುರ್ಲಿ ದೈವದ ಕಥೆಯ ನಾಟಕವಾದರೂ ವೇದಿಕೆಯಲ್ಲಿ ದೈವದ ಮುಖವರ್ಣಿಕೆಯ ಅರದಾಳ, ದೈವದ ಅಣಿ, ಸಿರಿ ಬಳಸದೆ ಕೋಲಕಟ್ಟಿ ಕುಣಿಯದೆ ದೈವಾರಾಧನೆಗೆ ಯಾವುದೇ ಚ್ಯುತಿ ಬಾರದ ಹಾಗೆ ಹೊಸ ರೀತಿಯಲ್ಲಿ ನಾಟಕ ರಚಿಸಿ ಪ್ರದರ್ಶಿಸಿ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಕಲಾಕುಂಭ ಕಲಾವಿದರ ತಂಡ.

ಈ ನಾಟಕದ ಪ್ರಥಮ ಪ್ರದರ್ಶನ ತಾ/11/02/24ರಂದು ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರದಲ್ಲಿ ಯಶಸ್ವಿಯಾಗಿ ನಡೆದಿದೆ. ಈ ಹೊಚ್ಚ ಹೊಸ ನಾಟಕದ ಪ್ರದರ್ಶನ ಬುಕ್ಕಿಂಗ್ ಮಾಡಲು ಸಂಪರ್ಕಿಸಿ : 9945421351, 6362384236