ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಪಬ್ ಗಳಿಗೆ ಇರುವ ಪರವಾನಿಗೆ ಏನು ಗೊತ್ತಾ..?

ಕೇವಲ ಬಾರ್ ನಡೆಸಲು ಅನುಮತಿ ಪಡೆದು ಡಿ.ಜೆ. ಪಾರ್ಟಿ ನಡೆಸುತ್ತಿವೆ ಪಬ್ ಗಳು

ಮಂಗಳೂರು ನಗರದಲ್ಲಿ ಪಬ್ ಗಳಿಗೆ ಯಾವುದೇ ರೂಲ್ಸ್ ಇಲ್ವಾ.? ಪ್ರತಿನಿತ್ಯ ತಡರಾತ್ರಿ ವರೆಗೂ ಓಪನ್.. ಡಿಜೆ ಮ್ಯೂಸಿಕ್ ಸೌಂಡ್ ಪ್ಲೇ, ಕುಡಿದು ತೂರಾಡುವ ಯುವಕ ಯುವತಿಯರು. ಅಬ್ಬಬ್ಬಾ ಮಂಗಳೂರಿನ ಸ್ಥಿತಿ ನೋಡಿದರೆ ದೊಡ್ಡ ನಶೆ ಲೋಕವೇ ತೆರೆದುಕೊಂಡಿದೆ. 

ಅನುಮತಿಯಿಲ್ಲದೆ ಕಾರ್ಯಾಚರಿಸುವ ಪಬ್ ಗಳು.?? ನಿಜಕ್ಕೂ ಈ ಪಬ್ ಗಳಿಗೆ ಈ ರೀತಿಯಾಗಿ ಕಾರ್ಯಚರಿಸಲು ಅನುಮತಿಯಂತೂ ಯಾರು ಕೊಟ್ಟಿಲ್ಲ. ಆದರೂ ಎಲ್ಲಾವೂ ಸಕ್ರಮವಾಗಿ ನಡೆಸುವ ರೀತಿಯಲ್ಲಿ ಯುವ ಜನತೆಯ, ಮಂಗಳೂರಿನ ಸ್ವಾಸ್ಥ್ಯ ಕೆಡಿಸುವಲ್ಲಿ ಆರಾಮವಾಗಿ ತನ್ನ ಕಾರ್ಯವನ್ನು ಮುಂದುವರಿಸುತ್ತಿದೆ. 

ಇವರಿಗೆ ಅನುವತಿ ಇರೋದು ಬಾರ್ ನಂತೆ ಬಂದ ಗ್ರಾಹಕರಿಗೆ ಬೇಕದ್ದನ್ನು ನೀಡಿ ಕುಡಿಸಿ ಕಳುಹಿಸಿ ಕೊಡಲು ಅಷ್ಟೇ. ಆದರೆ ಇಲ್ಲಿ ನಡೆಯುವುದು ಏನು ಎನ್ನುವುದನ್ನು ಹೇಳುವ ಅಗತ್ಯವಿಲ್ಲ ಇದು ಎಲ್ಲರಿಗೂ ತಿಳಿದಿರುವ ವಿಚಾರವಾದರೂ ತಿಳಿದರು ಇದೆಲ್ಲ ಸಕ್ರಮ ಎಂಬ0ತೆ ಜನರು ಭವಿಸಿದ್ದರೋ ಏನೋ ಗೊತ್ತಿಲ್ಲ ಇದನ್ನಂತು ಯಾರು ಕ್ಯಾರೇ ಮಾಡಲ್ಲ.!? ಇದೂ ನಮ್ಮ ನಗರದ ಅವಸ್ಥೆಯೋ ವ್ಯವಸ್ಥೆಯೋ ಗೊತ್ತಿಲ್ಲ. 

ಶರ‍್ಲಾಕ್, ಓಯನ್ಯಾಕ್ಸ್ ಇಂತಹ ಹಲವು ಪಬ್ ಗಳು ಅನುಮತಿ ರಹಿತವಾಗಿ ತಡರಾತ್ರಿ ವರೆಗೂ ಕಾರ್ಯಚರಿಸುತ್ತೆ. ಇವುಗಳ ಹಾವಳಿಗೆ ಯುವಕ, ಯುವತಿರು ನಶೆಗೆ ದಾಸರಾಗಿದ್ದಾರೆ. ನಿಜಕ್ಕೂ ಇವರಿಗೆ ಅನುಮತಿಯಿಲ್ಲದೆ ನಡೆಸಲು ಧೈರ್ಯ ಹೇಗೆ ಬರುತ್ತೆ.? ಅಧಿಕಾರಿಗಳೂ ಇವರನ್ನೂ ಪ್ರಶ್ನಿಸಲ್ವ.? ಇದರ ವಿರುದ್ಧ ಕ್ರಮ ಯಾಕೇ ಕೈಗೊಳ್ಳಲ್ಲ.??

ಒಟ್ಟಾರೆಯಾಗಿ ಯಾರ ಭಯವೂ ಇಲ್ಲದೆ ಕಾರ್ಯಾಚರಿಸುವ ಈ ಪಬ್ ಗಳ ವ್ಯವಸ್ಥೆ ನೋಡಬೇಕು.. ಎದುರಿಗೆ ದೇಹ ದಾಡ್ಯ ಬೆಳೆಸಿಕೊಂಡ ವ್ಯಕ್ತಿಗಳು ತಾವೇನೂ ದೇಶ ಸೇವೆ ಮಾಡುವ ರೀತಿಯಲ್ಲಿ ಯುವಕ ಯುವತಿಯರನ್ನು ತಪಾಸಣೆ ಮಾಡಿ ಒಳಗೆ ಕಳುಹಿಸುತ್ತಾರೆ. ತಪಾಸಣೆ ಮಾಡುತ್ತಾರೆ ಆದರೂ ಒಳಗಡೆ ಎಲ್ಲಾ ರೀತಿಯ ಅಮಲು ಪದಾರ್ಥಗಳು ಯುವಕ ಯುವತಿಯರ ಕೈ ಸೇರುತ್ತೆ. ಹಾಗಾದರೆ ಇವರೇನು ತಪಾಸಣೆ ಮಾಡುತ್ತಾರೆ ಎನ್ನುತ್ತೀರಾ..? ಹೌದು ಇವರು ತಪಾಸಣೆ ಮಾಡೋದು ಜೋಡಿಗಳ ಜೊತೆ ಬಂದಿದ್ದಾರ,  ಒಳ್ಳೆಯ ಬಟ್ಟೆ ಹಾಕಿದ್ದಾರ, ಶೂ ಧರಿಸಿದ್ದಾರ ಎಂದು ಮಾತ್ರ. 

ಹೀಗೆ ನಡೆದರೆ ಪಬ್ ಗಳ ಹಾವಳಿಗೆ ಮಂಗಳೂರಿಗೆ ಕೆಟ್ಟ ಹೆಸರಂತೂ ಬಂದಿದೆ. ಮುಂದೆ ಯಾವ ರೀತಿಯ ಪರಿಸ್ಥಿತಿ ಎದುರಿಸುವ ದಿನ ಬರುತ್ತೋ ಗೊತ್ತಿಲ್ಲ ಅದಕ್ಕಿಂತ ಮುಂಚೆ ಅಧಿಕಾರಿಗಳೂ ಎಚ್ಚೇತ್ತು ಕಠಿಣ ಕ್ರಮಗಳ ಜೊತೆಗೆ ಈ ಅಕ್ರಮಕ್ಕೆ ಬೀಗ ಜಡಿಯುವ ಅಗತ್ಯವಿದೆ.