ಬುದ್ಧಿವಂತರ ನಾಡಿನಲ್ಲಿ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ ಅಕ್ರಮವಾಗಿ ನಡೆಯುವ ಕಪ್ಪುಕಲ್ಲು, ಕೆಂಪುಕಲ್ಲು ಗಣಿಗಾರಿಕೆಗೆ ಯಾವ ರೀತಿಯ ಪರವಾಣಿಗೆಯೂ ಇಲ್ಲ

ಆದಷ್ಟು ಬೇಗ ನೀಡಲಿದ್ದೇವೆ ದಾಖಲೆ ಸಮೇತ ವಿವರ

ಮಂಗಳೂರು: ಬುದ್ಧಿವಂತರ ನಾಡಲ್ಲಿ ನಡೆಯುತ್ತಿದೆ ಅಕ್ರಮ ಗಣಿಕಾರಿಕೆ. ಕಣ್ಣಿದ್ದೂ ಕುರುಡಂತೆ ನಟಿಸುತ್ತಿದ್ದಾರೆ ಅಧಿಕಾರಿ ವರ್ಗ. ಭೂಮಾಫಿಯಾದ ಹಿಂದಿದ್ಯಾ ಕಾಣದ ಪ್ರಬಲ ಕೈಗಳು? ಸುಂದರ ಪ್ರಕೃತಿಯ ಒಡಲನ್ನು ಅಗೆಯುತ್ತಿದ್ದಾರೆ ಚೋರರು. ಪ್ರಶ್ನಿಸುವವರೇ ಇಲ್ಲದಂತಾಗಿದೆ. ಮೂಗುದಾರ ಹಾಕುವವರು ಯಾರು.?? 

ಹೌದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿಗಿನ ವರ್ಷಗಳಲ್ಲಿ ಹಲವು ದಂಧೆಗಳು ನಡೆಯುತ್ತಿದೆ‌. ಜನರ ಜೀವನವನ್ನು ಹಾಳುಗೆಡುವ ಈ ದಂಧೆಗಳ ಬಗ್ಗೆ ಯಾವುದೇ ನಿರ್ಭೀತಿಯಿಂದ ವರದಿ ಪ್ರಕಟಿಸಿದ್ದೇವೆ. ನಗರದ ಸ್ವಾಸ್ಥ್ಯವನ್ನು ಹಾಳುಗೆಡವುವ ಹಲವು ಅಕ್ರಮವಗಳ ಬಗ್ಗೆ ನಮ್ಮ ದಕ್ಷ ನ್ಯೂಸ್ ವಿಸ್ತಾರವಾಗಿ ಸುದ್ದಿ ಭಿತ್ತರಿಸಿ ಅಧಿಕಾರಿಗಳ ಕಣ್ತೆರೆಸುವ ಕಾರ್ಯ ಮಾಡಿದ್ದೆವು. ಈಗ ಮತ್ತೊಂದು ಬಹುದೊಡ್ಡ ಅಕ್ರಮದ ಬಗ್ಗೆ ದ್ವನಿ ಎತ್ತುವಂತಾಗಿದೆ. ಅಕ್ರಮವಾಗಿ ನಡೆಯುವ ಕಲ್ಲು ಗಣಿಕಾರಿಕೆಯಿಂದ ಭೂ ಒಡಲು ಬರಿದಾಗುತ್ತಿದೆ. 

ಹೌದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ, ಮಂಗಳೂರು ನಗರದ ಹೊರ ವಲಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ತಲೆ‌ಎತ್ತಿನಿಂತಿವೆ. ಈ ಬಗ್ಗೆ ಯಾವೊಬ್ಬನೇ ಅಧಿಕಾರಿ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ.‌

ಭೂ ಒಡಲಿಗೆ ಕನ್ನ ಹಾಕುವ ಖದೀಮರು..!

ಕಲ್ಲು ಗಣಿಕಾರಿಕೆ‌ ನಡೆಸುವ ಮಂದಿ ಸ್ವಂತ ಜಾಗಕ್ಕೆಂದು ಪರ್ಮಿಶನ್ ಪಡೆದುಕೊಂಡು ಅಕ್ರಮನ್ನು ನಡೆಸುತ್ತಿದ್ದಾರೆ. ಮೊದಲು 5 ಸೆನ್ಸ್ ಜಾಗದಲ್ಲಿ ಗಣಿಗಾರಿಕೆ ಮಾಡಲಿದ್ದೇವೆ ಎಂದು ಹೇಳಿ 50 ಎಕರೆ ಬೇಕಾದರೂ ನೈಸರ್ಗಿಕ ಸಂಪತ್ತನ್ನು ಕೊಳ್ಳೆಹೊಡೆಯಲು ಹಿಂದೆ ಮುಂದೆ ಯೋಚಿಸುತ್ತಿಲ್ಲ‌. ಈ ಬಗ್ಗೆ ಹಲವಾರು ದೂರುಗಳನ್ನು ಕೇಳಿಬಂದಿದೆ.‌ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು ಈ ರೀತಿ ಇದೆ. 

ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪ ಆಸುಪಾಸಿನಲ್ಲಿ ಜಲ್ಲಿ ಕ್ರಶರ್ ಇದ್ದು ಇದು ಬಹು ದೊಡ್ಡ ಅಕ್ರಮವಾಗಿದೆ. ಮೂಡಬಿದ್ರೆಯಲ್ಲೂ ಗಣಿಗಾರಿಕೆ ನಡೆಯುತ್ತಿದ್ದು ಇದರಿಂದ ಪ್ರಕೃತಿ‌ ಹಾಗೂ ಜನರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀಳುತ್ತಿದೆ‌ 

ಉಡುಪಿ ಜಿಲ್ಲೆಯ ಕಾರ್ಕಳದ ನಂದಿಕೂರು ಸಮೀಪ ಕಲ್ಲು ಗಣಿಗಾರಿಕೆ ನಡೆಯುತ್ತಿದೆ‌.‌ ಅಂತೆಯೇ ಕಾರ್ಕಳದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಎಗ್ಗಿಲ್ಲದೆ, ಯಾವುದೇ ಭಯಭೀತಿಯಿಲ್ಲದೆ ಲೂಟಿ ನಡೆಯುತ್ತಿದೆ. 

ದಾಖಲೆ ಸಮೇತ ವರದಿ ಭಿತ್ತರಿಸುತ್ತೇವೆ.

ಈಗಾಗಲೇ ಹಲವು ದಂಧೆಗಳ ಬಗ್ಗೆ ದಾಖಲೇ ಸಮೇತ ವರದಿ ಭಿತ್ತರಿಸಿದ್ದೇವೆ. ಈ ಅಕ್ರಮ‌ ಗಣಿಗಾರಿಕೆಯ ಬಗ್ಗೆಯೂ ದಾಖಲೆಗಳನ್ನು ಕಲೆಹಾಕುತ್ತಿದ್ದೇವೆ. ಮುಂದಿನ ದಿನಗಳಲ್ಲಿ ದಾಖಲೆ ಸಹಿತವಾಗಿ ಅಕ್ರಮವನ್ನು ಬಟಾಬಯಲು ಮಾಡಲಿದ್ದೇವೆ.