ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಪಾಕ್‍ನಲ್ಲಿ ಸಂಶಯಾಸ್ಪದವಾಗಿ ಮೃತ್ಯು

ಮುಂಬೈ ಟ್ರೈನ್ ಬ್ಲಾಸ್ಟ್, ತಾಜ್ ಅಟ್ಯಾಕ್‍ನ ಉಗ್ರ ಸಾವು
ಮೋಸ್ಟ್ ವಾಂಟೆಡ್ ಉಗ್ರ ಅಝಮ್ ಚೀಮಾ

ಮುಂಬೈ ಸ್ಫೋಟದ ಪ್ರಮುಖ ಆರೋಪಿ, ಮೋಸ್ಟ್ ವಾಂಟೆಡ್ ಉಗ್ರ ಅಝಮ್ ಚೀಮಾ ಪಾಕಿಸ್ತಾನದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಇದು ಹೃದಯಾಘಾತದಿಂದ ಸಂಭವಿಸಿರುವ ಸಾವಾಗಿರಬಹುದು ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. 

2008 ರಲ್ಲಿ ಮುಂಬೈನಲ್ಲಿ ನಡೆದ ಟ್ರೈನ್ ಸ್ಫೋಟದ ಪ್ರಮುಖ ರೂವಾರಿಯಾಗಿದ್ದ ಅಝಮ್ ಚೀಮಾ, ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆಯ ಕಮ್ಯಾಂಡರ್ ಸಹ ಆಗಿದ್ದ. 

2008 ರಲ್ಲಿ ಮುಂಬೈನ್ ತಾಜ್ ಹೋಟೆಲ್ ಮೇಲೆ ನಡೆದ ದಾಳಿಯಲ್ಲಿಯೂ ಸಹ ಈತನ ಕೈವಾಡವಿರುವುದು ಖಚಿತಗೊಂಡಿತ್ತು. ಮುಂಬೈ ಟ್ರೈನ್ ಸ್ಫೋಟದಲ್ಲಿ 188 ಮಂದಿ ಮೃತಪಟ್ಟು, 800 ಮಂದಿ ಗಾಯಗೊಂಡಿದ್ದರು.

ಕೇವಲ ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕ ಭಯೋತ್ಪಾದನಾ ಕೃತ್ಯಗಳಲ್ಲಿ ಗುರುತಿಸಿಕೊಂಡಿದ್ದ ಅಝಮ್ ಚೀಮಾ ಅಮೆರಿಕ ಸರ್ಕಾರಕ್ಕೂ ವಾಂಟೆಡ್ ವ್ಯಕ್ತಿಯಾಗಿದ್ದ. 2008 ರಲ್ಲಿ ಈತ ನಡೆಸಿದ್ದ ದಾಳಿಯಲ್ಲಿ 6 ಮಂದಿ ಅಮೆರಿಕನ್ ಪ್ರಜೆಗಳೂ ಸಹ ಸಾವನ್ನಪ್ಪಿದ್ದರು.