ಕುಳಾಯಿ: ಪುರಾತನ ಕೋಟೆದ ಬಬ್ಬು ದೈವಸ್ಥಾನದಲ್ಲಿ "ವಾರ್ಷಿಕ ನೇಮೋತ್ಸವ ಹಾಗೂ ಮಾರಿಪೂಜೆ"

ಪುರಾತನ ಕೋಟೆದ ಬಬ್ಬು ದೈವಸ್ಥಾನದಲ್ಲಿ "ವಾರ್ಷಿಕ ನೇಮೋತ್ಸವ ಹಾಗೂ ಮಾರಿಪೂಜೆ"

ಕುಳಾಯಿ : ಪುರಾತನ ಕೋಟೆದ ಬಬ್ಬು ದೈವಸ್ಥಾನ ಕುಳಾಯಿ ಇಲ್ಲಿ ಮಾರ್ಚ್ 12ರಿಂದ 19 ತನಕ ವಾರ್ಷಿಕ ನೇಮೋತ್ಸವ ಹಾಗೂ ಮಾರಿಪೂಜೆ ನಡೆಯಲಿದೆ. 

ದಿನಾಂಕ: 12-03-2024ರಂದು  ಬೆಳಿಗ್ಗೆ ಗಂಟೆ 9.00ಕ್ಕೆ ಸರಿಯಾಗಿ ಕಂಬೆರ್ಲ ಕಲ ಏರುವುದು, ಮಧ್ಯಾಹ್ನ ಗಂಟೆ 12.30ರಿಂದ 2.00ರ ವರೆಗೆ ಪುರಾತನ ಕೋಟೆದ ಬಬ್ಬು ದೈವಸ್ಥಾನದ ವಠಾರದಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ. 

ದಿನಾಂಕ: 14-03-2024ರಂದು ಬೆಳಿಗ್ಗೆ ಗಂಟೆ 7.00ಕ್ಕೆ ಸರಿಯಾಗಿ ಬಗ್ಗುಂಡಿ ಕೆರೆಯಲ್ಲಿ ಮೀನು ಹಿಡಿಯುವ ಕಾರ್ಯಕ್ರಮ. ರಾತ್ರಿ ಗಂಟೆ 10.00ಕ್ಕೆಸರಿಯಾಗಿ ಕೋಟೆದ ಬಬ್ಬು ದೈವದ ನೇಮೋತ್ಸವ ಮತ್ತು ತನ್ನಿಮಾನಿಗ ದೈವದ ನೇಮೋತ್ಸವ ಜರಗಲಿದೆ. 

ದಿನಾಂಕ: 15-03-2024ರಂದು ಸಾಯಂಕಾಲ ಗಂಟೆ 6.00ಕ್ಕೆ ಸರಿಯಾಗಿ ಪಂಜುರ್ಲಿ ಗುಳಿಗ ದೈವದ ನೇಮೋತ್ಸವ ಹಾಗೂ ರಾತ್ರಿ ಗಂಟೆ 10.00ಕ್ಕೆ ಸರಿಯಾಗಿ ರಾಹು ಗುಳಿಗ ದೈವದ ನೇಮೋತ್ಸವ ನಡೆಯಲಿದೆ. ದಿನಾಂಕ: 19-03-2024ರಂದು ಮಾರಿ ಪೂಜೆ ನೆರವೇರಲಿದೆ. 

ಪುರಾತನ ಕೋಟೆದ ಬಬ್ಬು ದೈವಸ್ಥಾನದಲ್ಲಿ ನಡೆಯಲಿರುವ ಈ ವಾರ್ಷಿಕ ಕಾರ್ಯಕ್ರಮಕ್ಕೆ ಭಕ್ತಾಭಿಮಾನಿಗಳಾದ ತಾವೆಲ್ಲರೂ ಆಗಮಿಸಿ, ತನು-ಮನ-ಧನಗಳಿಂದ ಸಹಕರಿಸಿ, ದೈವಗಳ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ದೈವಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಆಡಳಿತ ಸಮಿತಿ ಹಾಗೂ ಊರಿನ ಹತ್ತು ಸಮಸ್ಥರು ಮತ್ತು ಅರ್ಚಕ ವೃಂದ ಪುರಾತನ ಕೋಟೆದ ಬಬ್ಬು ದೈವಸ್ಥಾನ, (ರಿ.) ಕುಳಾಯಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.