ಬೆಳ್ತಂಗಡಿ: ಆಂಬ್ಯುಲೆನ್ಸ್ ಚಾಲಕನ ಮೇಲೆ ಕಾಲಿನಿಂದ ಒದ್ದು ಥಳಿಸಿದ ಬೆಂಗಳೂರು ಮೂಲದ ವ್ಯಕ್ತಿ

▪️ ತುರ್ತು ಸೇವೆಗಾಗಿ ತೆರಳುತ್ತಿದ್ದ ಆಂಬುಲೆನ್ಸ್ ಚಾಲಕನಿಗೆ ಹಲ್ಲೆ
▪️ ಗಂಡನಿಂದ ಥಳಿತ - ಹೆಂಡತಿ ಅವಾಚ್ಯ ಪದಗಳಿಂದ ನಿಂದನೆ
▪️ ಬೆಂಗಳೂರು ಮೂಲದ ದಂಪತಿಯಿಂದ ಪ್ರಕರಣ ದಿಕ್ಕು ತಪ್ಪಿಸುವ ಕಾರ್ಯ

ಬೆಳ್ತಂಗಡಿ: ರಸ್ತೆಯಲ್ಲಿ ಸೈಡ್ ಕೊಡುವ ವಿಚಾರಕ್ಕೆ ಬೆಂಗಳೂರು ಮೂಲದ ಕಾರು ಚಾಲಕನೋರ್ವ ಪಶು ಇಲಾಖೆಯ ಆಂಬುಲೆನ್ಸ್ ಅನ್ನು ತಡೆದು ಚಾಲಕನ ಮೇಲೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಲಾಯಿಲ ಜಂಕ್ಷನ್ ಬಳಿ ನಡೆದಿದ್ದು ಘಟನೆಯ ಕುರಿತ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಹಲ್ಲೆಗೊಳಗಾದ ಸಂತ್ರಸ್ಥ ದೂರು ನೀಡಿದ್ದು ಆರೋಪಿಗಳನ್ನು ಬಂಧಿಸಿ ಆ ಬಳಿಕ ಪೊಲೀಸರು ಬಿಡುಗಡೆ ಮಾಡಿದ್ದಾಗಿ ತಿಳಿದುಬಂದಿದೆ. 

ಹಲ್ಲೆಗೆ ಒಳಗಾಗಿರುವ ಆಂಬುಲೆನ್ಸ್ ಚಾಲಕ ಕಡಬದ ತಾಲೂಕು ವಿದ್ಯಾನಗರ ನಿವಾಸಿ ಸುಬ್ರಹ್ಮಣ್ಯ ಗ್ರಾಮದ ರಕ್ಷಿತ್ (27) ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರು, ಮಲ್ಲೇಶ್ವರದ ನಿವಾಸಿ ಶರತ್ ರಾಮಚಂದ್ರ (35) ಹಲ್ಲೆ ನಡೆಸಿದ ಆರೋಪಿ. ಕುಟುಂಬ ಸಮೇತ ಧರ್ಮಸ್ಥಳ ಸೇರಿದಂತೆ ಸುತ್ತಮುತ್ತಲಿನ ಧಾರ್ಮಿಕ ಪ್ರದೇಶಗಳಿಗೆ ಭೇಟಿ ಕೊಡಲು ಬಂದಿದ್ದರು. ಧರ್ಮಸ್ಥಳ ಸೇರಿದಂತೆ ವಿವಿಧ ದೇವಸ್ಥಾನಗಳ ದರ್ಶನದ ಬಳಿಕ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು ಎನ್ನಲಾಗಿದೆ.

 

ಕಾಲಿನಿಂದ ಒದ್ದು ಹಲ್ಲೆಗೈದ ದುಷ್ಕರ್ಮಿ ಶರತ್..! ಹೆಂಡತಿಯೂ ಸಾಥ್

ಬೆಂಗಳೂರಿನಿಂದ ಬಂದಿದ್ದ ಶರತ್ ಕುಮಾರ್ ಸೈಡ್ ಕೊಡುವ ನೆಪದಿಂದ ಜಗಳಕ್ಕೆ ಇಳಿದಿದ್ದಾನೆ. ಆಂಬುಲೆನ್ಸ್ ಚಾಲಕನಿಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ. ಈತನ ಪತ್ನಿ ಶೃತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ತಕ್ಷಣ ದಂಪತಿಗ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. 

ಬೆಂಗಳೂರಿನ ಮಲ್ಲೇಶ್ವರಂನ ನಿವಾಸಿ ಹೆಚ್‌ಡಿಎಫ್‌ಸಿ ಬ್ಯಾಂಕ್ ನಲ್ಲಿ ಉದ್ಯೋಗದಲ್ಲಿರುವ ಶರತ್ (40) ಮತ್ತು ಆತನ ಪತ್ನಿ ಶೃತಿ (34) ಗಂಡು ಮಗು ಮತ್ತು ಶೃತಿ ತಾಯಿ ಸೇರಿ ಒಟ್ಟು ನಾಲ್ಕು ಜನ ವಿವಿಧ ದೇವಾಲಯಗಳಿಗೆ ಹೋಗುತ್ತಿದ್ದರು ಎನ್ನಲಾಗಿದೆ. ಇನ್ನು ಇನ್ಸೂರೆನ್ಸ್ ಇಲ್ಲದ ಕಾರು ಮತ್ತು ಹಲ್ಲೆ ಮಾಡಿದ ಶರತ್ ಮತ್ತು ಶೃತಿಯನ್ನು ಬೆಳ್ತಂಗಡಿ ಪೊಲೀಸ್ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

ಅಂಬುಲೆನ್ಸ್ ಚಾಲಕ ಸುಬ್ರಮಣ್ಯ ನಿವಾಸಿ ರಕ್ಷಿತ್ ಕುಮಾರ್ (27)ನನ್ನು ಬೆಳ್ತಂಗಡಿ ತಾಲೂಕಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳ್ತಂಗಡಿ ಪಶು ಇಲಾಖೆ ವಾಹನದ ಚಾಲಕ ರಜೆ ಇದ್ದ ಕಾರಣ 1962 ಗೆ ಕಾಲ್ ಸೆಂಟರ್ ಗೆ ದನದ ಚಿಕಿತ್ಸೆಗಾಗಿ ನೆರಿಯದಿಂದ ಬಂದ ಕರೆ ಬಂದ ಕಾರಣ ಬೆಳ್ತಂಗಡಿ ಪಶು ಇಲಾಖೆಗೆ ಕಡಬದಿಂದ ಬಂದ ಅಂಬುಲೆನ್ಸ್ ನೆರಿಯ ಕಡೆ ಅಂಬುಲೆನ್ಸ್ ಚಾಲಕ ಹೊರಟು ಲಾಯಿಲ ಜಂಕ್ಷನ್ ಹೋಗುವಾಗ ಎದುರಿನಿಂದ ಬಂದು ಕಾರು ಚಾಲಕ ಮತ್ತು ಆತನ ಪತ್ನಿ ಅಡ್ಡ ಬಂದದ್ದನ್ನು ಪ್ರಶ್ನಿಸಿದಾಗ ಏಕಾಏಕಿ ಅಂಬುಲೆನ್ಸ್ ಬಾಗಿಲು ತೆಗೆದು ಹಲ್ಲೆ ಮಾಡಲಾಗಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ಅಂಬುಲೆನ್ಸ್ ಚಾಲಕ ರಕ್ಷಿತ್ ಕುಮಾರ್ ನೀಡಿದ ದೂರಿನ ಮೇರೆಗೆ ಕಾರು ಚಾಲಕ ಶರತ್ ಮತ್ತು ಪತ್ನಿ ಶೃತಿ ವಿರುದ್ಧ 504,341,323,427 ಜೊತೆಗೆ 34 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ. ಇನ್ನು ದಂಪತಿ ಪ್ರಕಾರ ಆಂಬುಲೆನ್ಸ್ ಚಾಲಕ ಅಸಹ್ಯಕರವಾಗಿ ಬೈದು ಅಶ್ಲೀಲ ಸಂಜ್ಞೆ ಮಾಡಿದ್ದಾನೆ ಎಂದು ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ ದಂಪತಿ.