ಮಲ್ಪೆ: ಗಾಂಜಾ ಮಾರಾಟ - ಇಬ್ಬರು ಅರೆಸ್ಟ್

ಗಾಂಜಾ ಮಾರಾಟಕ್ಕೆ ಯತ್ನ - ಇಬ್ಬರು ಆರೋಪಿಗಳ ಬಂಧನ

ಮಲ್ಪೆ : ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಮಲ್ಪೆ ಪೊಲೀಸರು ಮಾ.17ರಂದು ಬಂಧಿಸಿದ್ದಾರೆ. 

ನಿಹಾಲ್(24) ಹಾಗೂ ತಿಲಕ್ ರಾಜ್(30) ಬಂಧಿತ ಆರೋಪಿಗಳು.

ಆರೋಪಿಗಳು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ದಾಳಿ ನಡೆಸಿದ ಮಲ್ಪೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು. ಇವರಿಂದ ಒಟ್ಟು 114 ಗ್ರಾಂ ತೂಕದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.