"ಶ್ರೀಮಹಾಲಿಂಗೇಶ್ವ ಟ್ರೋಫಿ" ಧರ್ಮ ಜಾರಾಂದಾಯ ಮಡಿಲಿಗೆ.!

ಪಲಿಮಾರಿನಲ್ಲಿ ನಡೆದ ಮಹಾಲಿಂಗೇಶ್ವರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಕೂಟ

ವರದಿ: ಸುರೇಶ್ ಎರ್ಮಾಳ್

ಉಡುಪಿ : ಪಲಿಮಾರಿ ಹೈಸ್ಕೂಲ್ ಕ್ರೀಡಾಂಗಣದಲ್ಲಿ ನಡೆದ ಆರು ತಂಡಗಳ ಮಹಾಲಿಂಗೇಶ್ವರ ಪ್ರೀಮಿಯರ್ ಲೀಗ್ ಪಂದ್ಯಾಕೂಟದಲ್ಲಿ ಅಂತಿಮವಾಗಿ  ಮೂಡು ಪಲಿಮಾರು ಧರ್ಮ ಜಾರಂದಾಯ ತಂಡವು ಜಯಶಾಲಿಯಾಗಿದೆ.

ಪೈನಲ್ ಪಂದ್ಯಾಟದಲ್ಲಿ  ಪಲಿಮಾರು ಅಸ್ತದಡ್ಪು ತಂಡವನ್ನು ಸೋಲಿಸಿದ ಶ್ರೀಧರ್ಮ ಜಾರಂದಾಯ ತಂಡ 2024ರ  ಚಾಂಪಿಯನ್ ಆಗಿದೆ.

ಪೈನಲ್ ಪಂದ್ಯಾದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಆಸಿಫ್‌ ಪಡೆದುಕೊಂಡರೆ, ಉತ್ತಮ ಕ್ಷೇತ್ರ ರಕ್ಷಕ ಪ್ರಶಸ್ತಿಯನ್ನು ರತನ್ ರಾಜ್ ತನ್ನದಾಗಿಸಿಕೊಂಡಿದ್ದಾರೆ, ಉತ್ತಮ ದಾಂಡಿಗ ಪ್ರಶಸ್ತಿ ಧನರಾಜ್ ಪಾಲಾಗಿದೆ, ಉತ್ತಮ ಎಸೆತಗಾರ ಪ್ರಶಸ್ತಿ ಅಶ್ವಿತ್ ಪಡೆದುಕೊಂಡರೆ, ಸರಣೆಯುದ್ಧಕ್ಕೂ ಉತ್ತಮ ಆಲ್ ರೌಂಡರ್ ಪ್ರದರ್ಶನ ತೋರಿದ ಅಸ್ತಪಡ್ಪು ತಂಡದ ಜೀತೇಶ್ ಅರ್ಹವಾಗಿಯೆ ಸರಣಿ ಶೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಪ್ರವೀಣ್ ಅಡ್ವೆ, ಎಲೆ ಮರೆ ಕಾಯಿಯಂತ್ತಿರುವ ಯುವ ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಇಂಥಹ ಕ್ರೀಢಾಕೂಟಗಳ ಆಯೋಜನೆ ಅತ್ಯಗತ್ಯ, ಇಂಥಹ ಕ್ರೀಡಾಕೂಟಗಳು ಜಾತಿ ಧರ್ಮಗಳ ಮಧ್ಯೆ ನಡೆಯುವ ಸಂಘರ್ಷಗಳನ್ನು ದೂರ ಮಾಡಿ,  ಅವರವರ ಪ್ರತಿಭೆಗೆ ಮಣೆ ಹಾಕುವ ಕ್ಷೇತ್ರವಾಗಿದೆ ಎಂದರು.

ಈ ಸಂದರ್ಭ ವೇದಿಕೆಯಲ್ಲಿ ಪಲಿಮಾರು ಮಾಜಿ ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ ಪ್ರಭು, ಉದ್ಯಮಿ ದಿನೇಶ್ ಪ್ರಭು, ಗ್ರಾ.ಪಂ. ಉಪಾಧ್ಯಕ್ಷ ರಾಯೇಶ್ ಪೈ,  ಪ್ರತೀಕ್ ಕೋಟ್ಯಾನ್ ನಂದಿಕೂರು, ಮಾತೃ ಸಂಸ್ಥೆಯ ಅಧ್ಯಕ್ಷರಾದ ಭರತ್ ಭಟ್,  ಸಂಘಟಕರಾದ ಅರುಣ್ ಪೂಜಾರಿ, ರೀತೇಶ್ ದೇವಾಡಿಗ, ಪುರುಷೋತ್ತಮ ಪೂಜಾರಿ, ರೋಹಿತ್ ಪೂಜಾರಿ, ಗುರು ಪಲಿಮಾರು ಮುಂತಾದವರಿದ್ದರು.