ಸ್ವರ್ಗೀಯ ಜ್ಯೋತಿಷ್ ಸಾವಿಗೆ ಕಾರಣವಾದ ಸ್ಥಳೀಯ ಬಿಜೆಪಿ ನಾಯಕರು..?

ಮಂಜೇಶ್ವರ ಬಿಜೆಪಿಯಲ್ಲಿ ಸ್ಫೋಟ; ಕಾರ್ಯಕರ್ತರ ಮುತ್ತಿಗೆ - ಜ್ಯೋತಿಷ್ ಅಭಿಮಾನಿಗಳ ಆಕ್ರೋಶ

ಮಂಜೇಶ್ವರ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಸ್ಫೋಟ ಉಂಟಾಗಿದ್ದು, ಜಿಲ್ಲಾ ಸಮಿತಿಯ ಇಬ್ಬರು ಸದಸ್ಯರ ನೇತೃತ್ವದಲ್ಲಿ ಕಾರ್ಯಕರ್ತರ ಕಾರ್ಯಾಗಾರ ನಡೆದ ಸಭಾಂಗಣಕ್ಕೆ ನುಗ್ಗಿದ ಕಾರ್ಯಕರ್ತರ ಗುಂಪು ಜಿಲ್ಲಾಧ್ಯಕ್ಷರು ನೀಡಿದ ಭರವಸೆ ಈಡೇರಿಸಿಲ್ಲ ಎಂದು ಆರೋಪಿಸಿ, . ಸ್ವರ್ಗಿಯಾ ಜ್ಯೋತಿಷ್ ರವರ ವಿಷಯದಲ್ಲಿ ಒಂದು ತೀರ್ಮಾನ ತೆಗೆದು ಕೊಳ್ಳದೆ  ಪಕ್ಷದ ಯಾವುದೇ ರೀತಿಯ ಸಭೆಯನ್ನು ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ ಘಟನೆ ನಡೆದಿದೆ.

ಸ್ಥಳೀಯ ಬಿಜೆಪಿ ನಾಯಕರಾದ ಶ್ರೀಕಾಂತ್, ಸುರೇಶ್ ಶೆಟ್ಟಿ, ಮಣಿಕಂಠ ರೈ ಎಂಬವರು ಸಿಪಿಎಂ ಲೀಡರ್ ಕೊಗ್ಗು ಜೊತೆ ಸೇರಿಕೊಂಡು ನಡೆಸಿದ ನಾಲಾಯಕ್ ರಾಜಕೀಯವೇ ಜ್ಯೋತಿಷ್ ಸಾವಿಗೆ ಕಾರಣವಾಗಿತ್ತು. ಅಂದು ನೀಡಿದ್ದ ಭರವಸೆಯನ್ನು ಬಿಜೆಪಿ ನಾಯಕರು ಇಂದಿಗೂ ಈಡೇರಿಸದೇ ಇರುವುದು ಜ್ಯೋತಿಷ್ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಆರೆಸ್ಸೆಸ್ ಲೀಡರ್ ಬಿ ಟಿ ವಿಜಯನ್, ವಿನೋದ್, ದಯಾನಂದ್ ಕೊಲೆ ಕೇಸ್ ನ ಆರೋಪಿಯಾಗಿರುವ ಸಿಪಿಎಂ ಲೀಡರ್ ಕೊಗ್ಗು ಜೊತೆ ನಡೆಸಿದ್ದ ಷಡ್ಯಂತ್ರವೇ ಜ್ಯೋತಿಷ್ ಸಾವಿಗೆ ಕಾರಣ. ಇವರಿಗೆ ಇನ್ನೂ ಬಿಜೆಪಿಯಲ್ಲಿ ಜಾಗ ನೀಡಿರುವುದು  ಎಷ್ಟು ಸರಿ ಹಾಗೂ ಇದಕ್ಕೆ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹಿಂದೂ ಕಾರ್ಯಕರ್ತರ ಕೊಲೆ ಆರೋಪಿಯಾಗಿರುವ ಸಿಪಿಎಂ ಲೀಡರ್ ಕೊಗ್ಗು ಜೊತೆ ಸೇರಿಕೊಂಡ ಬಿಜೆಪಿ ನಾಯಕರಾದ ಶ್ರೀಕಾಂತ್, ಸುರೇಶ್ ಶೆಟ್ಟಿ, ಮಣಿಕಂಠ ರೈ ಇವರು ಜ್ಯೋತಿಷ್ ಸಾವಿಗೆ ಕಾರಣ ಎನ್ನುವುದು ಕಾರ್ಯಕರ್ತರ ಆಕ್ರೋಶವಾಗಿದೆ. ಈ ಮೂವರನ್ನು ತಕ್ಷಣ ಬಿಜೆಪಿಯಿಂದ ಉಚ್ಛಟನೆ ಮಾಡುವ ಮೂಲಕ ಜ್ಯೋತಿಷ್ ಆತ್ಮಕ್ಕೆ ಶಾಂತಿ ನೀಡಬೇಕು ಎನ್ನುವುದು ಕಾರ್ಯಕರ್ತರ ಆಗ್ರಹ. ಹಾಗಾಗಿ ನೀಡಿರುವ ಭರವಸೆ ಈಡೇರುವ ವರೆಗೆ ಕಾರ್ಯಕರ್ತರ ಆಕ್ರೋಶ ತಡೆಯಲು ಸಾಧ್ಯವಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ.

ಬಿಜೆಪಿಯ ಈ ರೀತಿಯ ನಡೆ ನಿಜಕ್ಕೂ ಚುನಾವಣೆಗೆ ದೊಡ್ಡ ಮಟ್ಟದ ಹೊಡೆತ ಮತ್ತು ಕಾರ್ಯಕರ್ತರ ಕೋಪಕ್ಕೆ ಕಾರಣವಾಗುವುದಂತು ಕಂಡಿತ. ಇಂತಹ ಘಟನೆ ಮತ್ತೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯತೆ ಇದೆ. ಇಲ್ಲವಾದಲ್ಲಿ ಬಿಜೆಪಿಗೆ ಕಾರ್ಯಕರ್ತರ ನಷ್ಟ ಹಾಗೂ ಮುಂದಿನ ಬೆಳವಣಿಗೆಗೆ ತೊಡಕಾಗುವುದೆಂದು ಆಪ್ತ ವಲಯದಲ್ಲಿ ಕೇಳಿ ಬಂದಿರುವ ಮಾತು.