ಪೆರ್ಡೂರಿನಲ್ಲಿ ತುರ್ತುಚಿಕಿತ್ಸಾ ವಾಹನ ನಿಲ್ಲಿಸುವಂತೆ ಒತ್ತಾಯ; ಪ್ರತಿಭಟನೆಗೆ ಸಿದ್ಧರಾದ ಗ್ರಾಮಸ್ಥರು

ಪೆರ್ಡೂರಿನಲ್ಲಿ ತುರ್ತುಚಿಕಿತ್ಸಾ ವಾಹನ ನಿಲ್ಲಿಸುವಂತೆ ಒತ್ತಾಯ

ಉಡುಪಿ: ಸಾರ್ವಜನಿಕರ ಹಿತದೃಷ್ಟಿಯಿಂದ ಪೆರ್ಡೂರಿನಲ್ಲಿ ತುರ್ತುಚಿಕಿತ್ಸಾ ವಾಹನ ನಿಲ್ಲಿಸುವಂತೆ ಒತ್ತಾಯ ಕೇಳಿಬಂದಿದೆ. ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗೆ ಪೆರ್ಡೂರು ಗ್ರಾಮ ಪಂಚಾಯತ್ ವತಿಯಿಂದ ಮನವಿ ಸಲ್ಲಿಸಲಾಗಿದೆ. ಮನವಿಗೆ ಸ್ಪಂದಿಸಿ ತಕ್ಷಣ ತುರ್ತುಚಿಕಿತ್ಸಾ ಸೇವೆ ಒದಗಿಸದಿದ್ದಲ್ಲಿ ಪ್ರತಿಭಟನೆಗೆ ಸಿದ್ಧ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೆರ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 9 ವಾರ್ಡ್ಗಳಿದ್ದು, 10958 ಜನ ಸಂಖ್ಯೆಯನ್ನು ಹೊಂದಿದೆ. ಈ ಗ್ರಾಮದಲ್ಲಿ 3800 ಕುಟುಂಬಗಳು ವಾಸವಾಗಿದ್ದು, ಸಾರ್ವಜನಿಕರ ಅನುಕೂಲಕ್ಕೆ ಕಾರ್ಯನಿರ್ವಹಿಸುತ್ತಿರುವ ತುರ್ತುಚಿಕಿತ್ಸಾ ವಾಹನ(108) ಇರುವುದಿಲ್ಲ. ಇಲ್ಲಿ ಕಾರ್ಯನಿರ್ವಹಿಸುವ ತುರ್ತುಚಿಕಿತ್ಸಾ ವಾಹನ ಕುಕ್ಕೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿಲುಗಡೆ ಮಾಡುತ್ತಾರೆ ಹಾಗಾಗಿ ಜನರಿಗೆ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಸಾರ್ವಜನಿಕರು ಪರದಾಡಬೇಕಾಗುತ್ತಿದೆ. ಅಲ್ಲದೆ ದುಬಾರಿ ಹಣ ನೀಡಿ ಅಥವಾ ಖಾಸಗಿ ವಾಹನವನ್ನು ಅವಲಂಭಿಸ ಬೇಕಾದ ಪರಿಸ್ಥಿತಿ ಇದೆ. ಈ ಹಿಂದೆ ಪೆರ್ಡೂರಿನಲ್ಲಿ ತುರ್ತುಚಿಕಿತ್ಸಾ ವಾಹನ ನಿಲುಗಡೆ ಮಾಡುತ್ತಿದ್ದರು, ಆದುದರಿಂದ ಕುಕ್ಕೆಹಳ್ಳಿಯಿಂದ ಪೆರ್ಡೂರಿನಲ್ಲಿ ತುರ್ತುಚಿಕಿತ್ಸಾ ವಾಹನ ನಿಲುಗಡೆಮಾಡುವಂತೆ ಕ್ರಮವಹಿದಬೇಕಾಗಿ ಮನವಿಯಲ್ಲಿ ವಿನಂತಿಸಿಕೊ೦ಡಿದ್ದಾರೆ.