ವಿಶೇಷ ಚೇತನಳನ್ನ ಮದುವೆ ಆಗುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಪ್ರಿಯಕರ

▪️ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ವಂಚನೆ
▪️ ಅಂಗವಿಕಲೆಯ ಪಾಲಿಗೆ ಹಿರೋನೇ ವಿಲನ್
▪️ ಮೈನಾ ಸಿನೆಮಾವನ್ನು ಹೋಲುವ ಘಟನೆ

ಚಂದನವನದ ಸೂಪರ್ ಹಿಟ್ ಮೂವಿಗಳಲ್ಲಿ ಒಂದಾಗಿರುವ ಮೈನಾ ಸಿನೆಮಾದಲ್ಲಿ ಪ್ರೀತಿಯನ್ನು ನೋಡೋದೆ ಚಂದ. ಅಂಗವಿಕಲ ಯುವತಿಗಾಗಿ ಎಲ್ಲವನ್ನೂ ಬಿಟ್ಟುಬಂದ ಯುವಕನ ಪ್ರೀತಿಯನ್ನು ತೆರೆ ಮೇಲೆ ಅಚ್ಚುಕಟ್ಟಾಗಿ ತೋರಿಸಲಾಗಿದೆ. ಇಂತಹದ್ದೇ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಆದರೆ ಅಂಗವಿಕಲೆಯ ಪಾಲಿಗೆ ಹಿರೋನೇ ವಿಲನ್ ಆಗಿದ್ದಾರೆ. ವಿಶೇಷ ಚೇತನಳನ್ನ ಮದುವೆ ಆಗುವುದಾಗಿ ಹಣ ಪಡೆದು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ

ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ವಂಚನೆ 

ಸುರೇಂದ್ರ ಮೂರ್ತಿ ಎಂಬಾತ ವಿಶೇಷ ಚೇತನ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಸುರೇಂದ್ರ ಮೂರ್ತಿ ಹಾಗೂ ವಿಶೇಷ ಚೇತನ ಯುವತಿಗೆ ಮೊದಲು ಪರಿಚಯವಾಗಿ ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರಲ್ಲಿ ಸಲುಗೆ, ನಂಬಿಕೆ ಹೆಚ್ಚಾದ ಬಳಿಕ ಸುರೇಂದ್ರ ಮೂರ್ತಿ ತನ್ನೊಂದು ಬ್ಯುಸಿನೆಸ್ ಮಾಡಬೇಕಿದೆ. ಅದಕ್ಕೆ ಹಣ ಬೇಕೆಂದು ಯುವತಿ ಬಳಿ ಕೇಳಿದ್ದ. ತನ್ನ ಪ್ರಿಯತಮನಿಗಾಗಿ ಯುವತಿ ಸಾಲ ಮಾಡಿ, ತನ್ನ ಬಳಿಯಿದ್ದ ಚಿನ್ನ ಅಡವಿಟ್ಟು ಹಣ ನೀಡಿದ್ದರು. ಆದರೆ ಹಣವೆಲ್ಲ ಪಡೆದ ಬಳಿಕ ಮದುವೆಯಾಗದೆ ವಂಚನೆ ಮಾಡಿದ್ದಾನೆ ಎನ್ನಲಾಗುತ್ತಿದೆ.

ಯುವಕನ ವಿರುದ್ಧ ಎಫ್‌ಐಆರ್ ದಾಖಲು

ಅಲ್ಲದೆ ಪ್ರೀತಿಯಲ್ಲಿದ್ದ ವೇಳೆ ಲೈಂಗಿಕವಾಗಿಯೂ ಬಳಸಿಕೊಂಡಿರುವುದಾಗಿ ಯುವತಿ ಆರೋಪ ಮಾಡಿದ್ದಾಳೆ. ಸದ್ಯ ವಿಶೇಷ ಚೇತನ ಯುವತಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಘಟನೆ ಸಂಬ0ಧ ಫೆಬ್ರವರಿ ತಿಂಗಳಲ್ಲಿ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೃತ್ಯ ನಡೆದದ್ದು ಕೊಡಗೆಹಳ್ಳಿ ಹಿನ್ನಲೆ ಇದೀಗ ಪ್ರಕರಣ ಕೊಡಿಗೆಹಳ್ಳಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ.