ಕಡಬ: ಕಸಾಯಿಖಾನೆಗೆ ದಾಳಿ -3 ದನಗಳ ವಧೆ - ಓರ್ವನ ಬಂಧನ - ಸೊತ್ತುಗಳು ವಶಕ್ಕೆ.!

ಕೊಯಿಲ ಕಸಾಯಿಖಾನೆ ಮೇಲೆ ಕಡಬ ಪೊಲೀಸರ ದಾಳಿ

ಕಡಬ : ದಕ್ಷಿಣ ಕನ್ನಡ ಕಡಬ ತಾಲೂಕು ಕೊಯಿಲಾ ಗ್ರಾಮದ ಕೆಮ್ಮಾರ ಅಕೀರ ಎಂಬಲ್ಲಿ ನಡೆಯುತ್ತಿದ್ದ ಕಸಾಯಿ ಖಾನೆಗೆ ಕಡಬ ಪೊಲೀಸರು ದಾಳಿ ನಡೆಸಿದ್ದಾರೆ.

ಕಡಬ ಉಪನಿರೀಕ್ಷಕ ಅಭಿನಂದನ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದ್ದು ಈ ಸಂದರ್ಭ 3 ದನಗಳನ್ನು ವಧೆ ಮಾಡುತ್ತಿರುವುದು ಕಂಡು ಬಂದಿದೆ. ಪ್ರಕರಣ ಸಂಬಂಧ ಇಲ್ಯಾಸ್ ಎಂಬಾತನನ್ನು ಬಂಧಿಸಲಾಗಿದ್ದು ಮಹಮ್ಮದ್‌ ಆಮು ಎಂಬಾತ ಪರಾರಿಯಾಗಿದ್ದಾನೆ. 

ಇಲ್ಯಾಸ್ ಎಂಬಾತನ ಮನೆಯಲ್ಲಿ ಈ ಕಸಾಯಿಖಾನೆ ಕಾರ್ಯಾಚರಿಸುತ್ತಿತ್ತು. ಸ್ಥಳದಿಂದ 18,800 ರೂ ಮೌಲ್ಯದ 94 ಕೆಜಿ ದನದ ಮಾಂಸ 12 ದನದ ಕಾಲುಗಳು ವಶಕ್ಕೆ ಪಡೆದಿದ್ದಾರೆ. ಜೊತೆಗೆ ದನವನ್ನು ವಧೆ ಮಾಡಲು ಉಪಯೋಗಿಸಿದ ಸೊತ್ತುಗಳಾದ ಕಬ್ಬಿಣದ ತಲ್ವಾರ್, ಚಾಕುಗಳು,ಪ್ಲಾಸ್ಟೀಕ್‌ ಬುಟ್ಟಿ, ಡ್ರಮ್, ಮಾಂಸ ಕಟ್‌ ಮಾಡಲು ಉಪಯೋಗಿಸಿದ ಮರದ ತುಂಡು ವಶಕ್ಕೆ ಪಡೆದಿದ್ದು ಆರೋಪಿಗಳ ವಿರುದ್ದ ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ- 2020 ಪ್ರಕಾರ ಪ್ರಕರಣ ದಾಖಲು ಮಾಡಲಾಗಿದೆ.