ಮಲ್ಪೆ: ಬಾಡಿಗೆ ಇದೆ ಎಂದು ಹೋದ ಚಾಲಕನ ಶವ ಪತ್ತೆ .!

ಆಟೋರಿಕ್ಷಾ ಚಾಲಕ ಸಂಶಯಾಸ್ಪದ ಸಾವು

ಮಲ್ಪೆ: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಮನೆಯಿಂದ ಹೋದ ಆಟೋರಿಕ್ಷಾ ಚಾಲಕ ನಾಪತ್ತೆಯಾಗಿ ಬಳಿಕ ಶವವಾಗಿ ಪತ್ತೆಯಾದ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಮೃತ ವ್ಯಕ್ತಿ ಆಟೋ ಚಾಲಕ ಮೂಡುತೋನ್ಸೆ ಗ್ರಾಮದ ಮಹಮ್ಮದ್‌ ಫೈಜಲ್‌ (36). 

ಮಾ. 27ರ ರಾತ್ರಿಯಿಂದ ನಾಪತ್ತೆಯಾಗಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ. ತಡರಾತ್ರಿಯಾದರೂ ಮನೆಗೆ ಬಾರದ್ದನ್ನು ಕಂಡು ಪತ್ನಿ ಫೈಜಲ್‌ ಅವರ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್‌ಆಫ್‌ ಬರುತ್ತಿತ್ತು. ಅವರ ಆಟೋರಿಕ್ಷಾ ಮನೆ ಬಳಿಯ ಮೈದಾನದ ಬಳಿ ನಿಲ್ಲಿಸಿರುವುದು ಪತ್ತೆಯಾಗಿದೆ.  ಇದೀಗ ಅವರ ಶವ ಉಳ್ಳೂರು ಗ್ರಾಮದ ಮಾಯಾಡಿ ಎಂಬಲ್ಲಿ ಸುವರ್ಣ ನದಿಯಲ್ಲಿ ಪತ್ತೆಯಾಗಿದೆ.

ಫೈಜಲ್‌ ಅವರು ಆಟೋರಿಕ್ಷಾ ಚಾಲಕ ವೃತ್ತಿಯ ಜತೆಗೆ ಟೈಲ್ಸ್‌ ಜೋಡಿಸುವ ಕೆಲಸವನ್ನೂ ಸಹ ಮಾಡಿಕೊಂಡಿದ್ದರು.  ಫೈಜಲ್ ಅವರು ಸುವರ್ಣ ನದಿಯ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದು,  ಸಾವಿನಲ್ಲಿ ಸಂಶಯವಿದೆ ಎಂಬುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.