ದ.ಕ.ಜಿಲ್ಲೆಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ

ದ.ಕ.ಜಿಲ್ಲೆಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ

ಮಂಗಳೂರು: ಕರಾವಳಿಯ ಜನತೆ ಹೆಚ್ಚುತ್ತಿರುವ ತಾಪಮಾನದ ತೀವ್ರತೆಯನ್ನು ಅನುಭವಿಸುತ್ತಿದ್ದಾರೆ, ದಕ್ಷಿಣ ಕನ್ನಡದಲ್ಲಿ ತಾಪಮಾನ ರವಿವಾರ 40 ಡಿಗ್ರಿ ಸೆಲ್ಸಿಯಸ್ ತನಕ ಏರಿಕೆಯಾಗಿತ್ತು. 

ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಮಂಡ್ಯ, ಬೆಂಗಳೂರು ನಗರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಬೆಳಗ್ಗೆ 11 ರಿಂದ 1:30ರ ತನಕ ಇದೇ ಸ್ಥಿತಿ ಇತ್ತು. ಮಂಗಳೂರು ನಗರದಲ್ಲಿ ಉರಿ ಬಿಸಿಲು ಇತ್ತು. ಬಳಿಕ ನಿಧಾನವಾಗಿ ವಾತಾವರಣದ ತಾಪಮಾನ ಇಳಿಕೆಯಾಗಿತ್ತು.

ಕಲಬುರುಗಿ, ಯಾದಗಿರಿ ಮತ್ತು ರಾಯಚೂರ್‌ನಲ್ಲಿ ಗರಿಷ್ಠ ತಾಪಮಾನ 42.1ಕ್ಕಿಂತ ಜಾಸ್ತಿಯಾಗಿತ್ತು. ತಾಪಮಾನದಲ್ಲಿ ಉಡುಪಿ ಮತ್ತು ಕೊಡಗಿನಲ್ಲಿ ಮಧ್ಯಾಹ್ನದ ನಂತರ ಇಳಿಕೆಯಾಗಿತ್ತು. 

ಐಎಂಡಿ ಅಂಕಿ ಅಂಶಗಳ ಪ್ರಕಾರ ಕರಾವಳಿ ಪ್ರದೇಶದಲ್ಲಿ ಈಗಿನ ತಾಪಮಾನವು ರೂಢಿಗಿಂತ 1 ರಿಂದ 2 ಡಿಗ್ರಿ ಸೆಲ್ಸಿಯಸ್ ಹೆಚ್ಚುತ್ತಿದೆ. ಸಾಮಾನ್ಯ ವ್ಯಾಪ್ತಿಯು 35 ರಿಂದ 36 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ. ಮುಂದಿನ ದಿನಗಳಲ್ಲಿ ಇದು ಇಳಿಕೆಯಾಗುವ ಸಾಧ್ಯತೆ ಇದೆ. ಭಾಗಶ: ಮೋಡ ಮುಸುಕಿದ ವಾತಾವರಣ ಇದೆ. ಎಪ್ರಿಲ್ 9ರಿಂದ 25ರಿಂದ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಬಹುದೆಂದು ಹವಾಮಾನ ಇಲಾಖೆ ತಿಳಿಸಿದೆ. ಎ.9ರಂದು ಸಾಧಾರಣ ಮಳೆ, ಎ.11 ಮತ್ತು 12ರಂದು ಮಳೆ ನಿರೀಕ್ಷಿಸಲಾಗಿದೆ.