ವೃದ್ಧೆಯ ಕಿವಿ ಹರಿದು ಓಲೆ ಎಗರಿಸಿದ ಕಳ್ಳ

ವೃದ್ಧೆಯ ಕಿವಿ ಹರಿದು ಓಲೆ ಎಗರಿಸಿದ ಕಳ್ಳ

ವೃದ್ಧೆಯೊಬ್ಬರ ಕಿವಿಯಲ್ಲಿದ್ದ ಚಿನ್ನದ ಓಲೆಯನ್ನು ಕದಿಯುವ ಸಲುವಾಗಿ ಆಕೆಯ ಕಿವಿಯನ್ನೇ ಹರಿದು ಓಲೆ ಕದ್ದೊಯ್ದಿರುವ ಘಟನೆ ಪಂಜಾಬ್‌ನ ಪಟಿಯಾಲದಲ್ಲಿ ನಡೆದಿದೆ. ತೇಜ್ ಭಾಗ್ ಕಾಲನಿ ನಿವಾಸಿ ಫುಲಾ ದೇವಿ (60) ಗಾಯಗೊಂಡ ಸಂತ್ರಸ್ತೆಯಾಗಿದ್ದಾರೆ.

ಇಡೀ ಘಟನೆಯ ದೃಶ್ಯಾವಳಿ ಮನೆಯ ಮುಂದಿದ್ದ ಸಿಸಿಟಿವಿ ಕೆಮರಾದಲ್ಲಿ ದಾಖಲಾಗಿದೆ. ಫುಲಾದೇವಿ ತಮ್ಮ ಮನೆಯ ಮುಂದೆ ಕುರ್ಚಿಯಲ್ಲಿ ಕುಳಿತಿದ್ದರು. ಈ ವೇಳೆ ತಲೆಗೆ ಕ್ಯಾಪ್ ಧರಿಸಿಕೊಂಡು ತನ್ನ ಗುರುತು ಮರೆಸಿಕೊಂಡು ಬಂದ ಕಳ್ಳ ಆಕೆಯ ಎರಡೂ ಕಿವಿಗಳಿಗೆ ಕೈ ಹಾಕಿ ಕಿವಿಯನ್ನು ಹರಿದು ಓಲೆಯನ್ನು ಕದ್ದಿದ್ದಾನೆ. 

ವೃದ್ಧೆ ಮಾರಣಾಂತಿಕ ವೇದನೆಯಿಂದ ಕಿರುಚಾಡಿದರೂ ಬಿಡದೇ ಎರಡೂ ಓಲೆಗಳನ್ನು ಕದ್ದೊಯ್ದಿದ್ದಾನೆ. ವೃದ್ಧೆಯ ಕಿರಿಚಾಟ ಕೇಳಿ ಮನೆಯವರು ಧಾವಿಸುಷ್ಟರಲ್ಲಿ ಆತ ಸ್ಥಳದಿಂದ ಪರಾರಿಯಾಗದ್ದಾನೆ. ಪಟಿಯಾಲಾ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.