ಸುರತ್ಕಲ್: ಮನೆಗಳ್ಳನನ್ನು 24 ಗಂಟೆಯೊಳಗೆ ಬಂಧಿಸಿದ ಸುರತ್ಕಲ್ ಪೊಲೀಸರು

ಸುರತ್ಕಲ್: ಮನೆಗಳ್ಳನನ್ನು 24 ಗಂಟೆಯೊಳಗೆ ಬಂಧಿಸಿದ ಸುರತ್ಕಲ್ ಪೊಲೀಸರು

ಸುರತ್ಕಲ್: ಮನೆಯಲ್ಲಿ ಯಾರು ಇಲ್ಲದೆ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ಕಳವು ಗೈದ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, 24ಗಂಟೆಯೊಳಗೆ ಕಳ್ಳನನ್ನು ಬಂಧಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

 

ಬಂಧಿತ ಆರೋಪಿಯನ್ನು ಆರೋಪಿಯಾದ ಹೊಸಪೇಟೆ ವಿಜಯನಗರ ಜಿಲ್ಲೆ ನಿವಾಸಿ ಜಂಬಯ್ಯ(24) ಎಂದು ಗುರುತಿಸಲಾಗಿದೆ. 

 

ದಿನಾಂಕ 09-04-2024 ರಂದು ಬೆಳಿಗ್ಗೆ 8:00 ಗಂಟೆ ಸುಮಾರಿಗೆ ಮನೆಯವರು ಕೆಲಸದ ಬಗ್ಗೆ ಮನೆಯಿಂದ ಹೋಗಿದ್ದು, ವಾಪಸ್ಸು ಬಂದಾಗ ಮನೆಯ ಮುಂಬಾಗಿಲಿನ ಬೀಗವನ್ನು ಕಳ್ಳರು ಒಡೆದು ಮನೆಯ ಹಾಲ್ ನಲ್ಲಿ ಇಟ್ಟಿದ್ದ ಗೋದ್ರೇಜ್ ನ ಬಾಗಿಲನ್ನು ತೆರೆದು ಅದರ ಒಳಗಿದ್ದ 10 ಗ್ರಾಮ್ ನ ಚಿನ್ನದ ನೆಕ್ಲಸ್-1, 10 ಗ್ರಾಮ್ ನ ಚಿನ್ನದ ಎಲಕ್ಕಿ ಸರ-1, 7.5 ಗ್ರಾಮ್ ನ ಎಲೆ ಸಹಿತ ಜುಮಕಿ ಬೆಂಡೋಲೆ ಸೆಟ್-1. 2.5 ಗ್ರಾಮ್ ನ ಕಿವಿ ಗುಂಡುಗಳ ಸೆಟ್-1. 5 ಗ್ರಾಮ್ ನ ಚಿನ್ನದ ಉಂಗುರ-2, 2.5 ಗ್ರಾಮ್ ನ ಮಗುವಿನ ಉಂಗುರ-2, 40 ಗ್ರಾಮ್ ನ ಬೆಳ್ಳಿಯ ಮಕ್ಕಳ ಕಾಲೈಜ್ಜೆ ಸೆಟ್-1, 20 ಗ್ರಾಮ್ ನ ಬೆಳ್ಳಿಯ ಚೈನ್-1 ಮತ್ತು ನಗದು ಸುಮಾರು ರೂ 50,000/- ಸಾವಿರ ರೂಪಾಯಿಗಳು ಕಳವು ಆಗಿರುವುದು ತಿಳಿದುಬಂದಿದೆ.

 

ಕಳವಾದ ಚಿನ್ನದ ಒಡವೆಗಳ ಮತ್ತು ಬೆಳ್ಳಿಯ ಅಂದಾಜು ಮೌಲ್ಯ 2.50.000/- ಲಕ್ಷ ರೂಪಾಯಿ. ಅಕ್ಕಪಕ್ಕದ ಮನೆಯವರಲ್ಲಿ ವಿಚಾರಿಸಿಕೊಂಡಲ್ಲಿ ಬೆಳಿಗ್ಗೆ 10:30 ಗಂಟೆ ಸುಮಾರಿಗೆ ಬಿಳಿಬಣ್ಣದ ಕಾರೊಂದು ನಿಂತುಕೊಂಡ ವಿಚಾರ ಬೆಳಕಿಗೆ ಬಂದಿದೆ.

 

ಈ ಪ್ರಕರಣದ ಆರೋಪಿಯ ಪತ್ತೆಗೆ ಸುರತ್ಕಲ್ ಪೊಲೀಸ್ ಠಾಣಾ ಪೊಲೀಸರ ತಂಡ ಪ್ರಕರಣದ ತನಿಖೆ ಕೈಗೊಂಡು ಆರೋಪಿಯ ಬಗ್ಗೆ ಸಿ.ಸಿ.ಟಿ.ವಿ ಫೂಟೇಜ್ ಹಾಗೂ ತಾಂತ್ರಿಕ ಮಾಹಿತಿಗಳಿಂದ ದಿನಾಂಕ 10-04-2024 ರಂದು 16.00 ಗಂಟೆಗೆ ಉಡುಪಿ ಜಿಲ್ಲೆಯ ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಬಿದ್ರೆ-ನಂದಿಕೂರು ರಸ್ತೆ ಕಡೆಗೆ ಹೋಗುವ ರಸ್ತೆಯಲ್ಲಿ ಆರೋಪಿ ಜಂಬಯ್ಯ ಎಂಬಾತನನ್ನು ಬಂಧಿಸಿದ್ದಾರೆ. ‌ಆರೋಪಿಯಿಂದ ಕಳವಾದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.