ಮಂಗಳೂರು: (ಏ.14) "ವಿಜಯೀಭವ" ರಾಷ್ಟ್ರ ಜಾಗೃತಿ ಕಾರ್ಯಕ್ರಮ

ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ,) ಮಂಗಳೂರು ಸಾರಥ್ಯದಲ್ಲಿ ಅಭಿನವ ಭಾರತ ಅರ್ಪಿಸುವ "ವಿಜಯೀಭವ" ಕಾರ್ಯಕ್ರಮ

ಮಂಗಳೂರು: ಸದೃಢ, ಸಮರ್ಥ ಭಾರತ ನಿರ್ಮಾಣದ ಕಡೆಗೆ ಹೆಜ್ಜೆಯಿಡುತ್ತಿರುವ ಸಮಯದಲ್ಲಿ ಸಮಾಜವನ್ನು ಜಾಗೃತಿಗೊಳಿಸುವ ಉದ್ದೇಶದಿಂದ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ,) ಮಂಗಳೂರು ಸಾರಥ್ಯದಲ್ಲಿ ರಾಷ್ಟ್ರ ಭಕ್ತಿಯ ಚಿಂತನೆಯೊ0ದಿಗೆ ಅಭಿನವ ಭಾರತ ಅರ್ಪಿಸುವ "ವಿಜಯೀಭವ" ಕಾರ್ಯಕ್ರಮ ಇದೇ ಬರುವ ಏಪ್ರಿಲ್ 14ರ ಭಾನುವಾರದಂದು ಬೆಳಗ್ಗೆ 10:30ಕ್ಕೆ ಕೊಡಿಯಾಲ್ ಬೈಲ್ ಕೂಟಕ್ಕಳ ಆಡಿಟೋರಿಯಂನಲ್ಲಿ ನಡೆಯಲಿದೆ. 

ಆ ಪ್ರಯುಕ್ತವಾಗಿ ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಈ ವೇಳೆ ಮಂಜಣ್ಣ ಸೇವಾ ಬ್ರಿಗೇಡ್‌ನ ಅಧ್ಯಕ್ಷರಾದ ವಸಂತ ಹೊಸಬೆಟ್ಟು, ಗೌರವಾಧ್ಯಕ್ಷರಾದ ಭಾಸ್ಕರ್ ಶೆಟ್ಟಿ ಚಿಕ್ಕಪರಾರಿ, ಸದಸ್ಯರುಗಳಾದ ಶಶಿಧರ್ ಕೋಡಿಕೆರೆ, ಆದಿತ್ಯ, ರಮಾನಾಥ ಕೋಡಿಕೆರೆ ಉಪಸ್ಥಿತರಿದ್ದರು. 

ಕಾರ್ಯಕ್ರಮದ ವಿವರ:

ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸನ್ಮಾನ್ಯ ಶ್ರೀ ಲೆಫ್ಟಿನೆಂಟ್ ಸುರೇಶ್ ಬಿ. ಶೆಟ್ಟಿ ನಿವೃತ್ತ ಯೋಧರು ಭಾರತೀಯ ಸೇನೆ ಇವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಶರಣ್ ಪಂಪ್ ವೆಲ್ ಪ್ರಾಂತ ಸಹ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಹಾಗೂ ಶ್ರೀಕಾಂತ್ ಶೆಟ್ಟಿ ಕಾರ್ಕಳ ಪ್ರಾಂತ ಪ್ರಮುಖರು ಹಿಂದೂ ಜಾಗರಣ ವೇದಿಕೆ ಕರ್ನಾಟಕ ಇವರು ಆಗಮಿಸಲಿದ್ದಾರೆ. ಹಾಗೆಯೇ ಶ್ರೀ ಮನೋಜ್ ಕೋಡಿಕೆರೆ ಸಂಸ್ಥಾಪಕಾಧ್ಯಕ್ಷರು ಮಂಜಣ್ಣ ಸೇವಾ ಬ್ರಿಗೇಡ್ ಮಂಗಳೂರು ಇವರು ಉಪಸ್ಥಿತರಿರಲಿದ್ದಾರೆ.

ಈ ಸಂದರ್ಭ ಲೇಖಕ ಸೋಮೇಶ್ವರ ಗುರುಮಠ ಇವರ "ಅಭಿನವ ಭಾರತ" ಕೃತಿ ಬಿಡುಗಡೆ ಮಾಡಲಿದ್ದಾರೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಶ್ರೀ ಮಂಜರಿ ಚಂದ್ರ ಇವರ ತಂಡದಿ0ದ ರಾಷ್ಟ್ರಜಾಗೃತಿಯ ನೃತ್ಯರೂಪಕಗಳು ನಮೋ ನಮೋ ಭಾರತಾಂಬೆ, ಜಯೋಸ್ತುತೇ, ಹೇ ವತನ್ ಆಬಾದ್ ರಹೇ ತೂ, ಶ್ರೀ ಶಿವರಾಜ್ಯಾಭಿಷೇಕಮ್ ನಡೆಯಲಿದ್ದು, ಖ್ಯಾತ ಗಾಯಕ ಶ್ರೀ ಕಿಶೋರ್ ಪೆರ್ಲ ಅವರಿಂದ ರಾಷ್ಟ್ರಭಕ್ತಿ ಗೀತೆಗಳ ಕಾರ್ಯಕ್ರಮ ಗೀತಭಾರತಿ ನಡೆಯಲಿದೆ.