ಮಂಗಳೂರು: ಯಶಸ್ವಿಯಾಗಿ ನಡೆದ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಸಾರಥ್ಯದಲ್ಲಿ ಅಭಿನವ ಭಾರತ ಅರ್ಪಿಸುವ ವಿಜಯೀಭವ - ಅಭಿನವ ಭಾರತ ಕೃತಿ ಬಿಡುಗಡೆ - ಸಾಂಸ್ಕೃತಿಕ ಕಾರ್ಯಕ್ರಮಗಳು

ಜನತೆಗೆ ಜಾಗೃತಿ ಮೂಡಿಸುವ ಪ್ರಯತ್ನ ಎಂಬ ಮೂಲ ಸಂದೇಶವನ್ನಿಟ್ಟುಕೊಂಡು ನಡೆದ ಕಾರ್ಯಕ್ರಮ "ವಿಜಯೀ ಭವ"
ಸೋಮೇಶ್ವರ ಗುರುಮಠ ಬರೆದಿರುವ ಅಭಿನವ ಭಾರತ ಕೃತಿ ಬಿಡುಗಡೆ

ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಸಾರಥ್ಯದಲ್ಲಿ ಹಾಗೂ ಅಭಿನವ ಭಾರತ ಸಂಸ್ಥೆಯು ಜೊತೆಯಾಗಿ "ವಿಜಯೀ ಭವ" ಕಾರ್ಯಕ್ರಮ ಯಶಸ್ವಿಯಾಗಿ ಕೂಟಕ್ಕಳ ಅಡಿಟೋರಿಯಂ, ಕೊಡಿಯಾಲ್‌ಬೈಲ್‌ನಲ್ಲಿ ನಡೆಯಿತು. 

ಸಹಸ್ರಮಾನದ ದೀರ್ಘಕಾಲದ ಹೋರಾಟದ ಬಳಿಕ ಭಾರತ ಮತ್ತೊಮ್ಮೆ ತನ್ನ ಮೂಲ ಸಂಸ್ಕೃತಿಯ ಅಡಿಪಾಯದ ಮೇಲೆ ಬಲಿಷ್ಠವಾಗಿ ಎದ್ದು ನಿಲ್ಲುವಂತೆ. ಸಾಂಸ್ಕೃತಿಕ ಸಾಮಾಜಿಕ ಮತ್ತು ರಾಜಕೀಯಾತ್ಮಕ ದ್ರುವೀಕರಣದ ಸಂಕ್ರಮಣ ಕಾಲದಲ್ಲಿ ನಾವಿದ್ದೇವೆ. ಸಧೃಡ ಸಮರ್ಥ ಭಾರತ ನಿರ್ಮಾಣದ ಕಡೆಗೆ ದಾಪುಗಾಲು ಹಾಕುತ್ತಿರುವ ನಮ್ಮ ಸಮಾಜದ ಕಾಲು ಎಡವದಂತೆ ದೃಷ್ಟಿ ಚದುರದಂತೆ ಎಚ್ಚರವಹಿಸಬೇಕಾಗಿರುವುದು ಸಧ್ಯದ ಅನಿವಾರ್ಯತೆಯಾಗಿದೆ. ಕ್ಷಣಿಕ ಕಾರಣಗಳಿಂದ ವಿಚಲಿತರಾಗಿ ರಾಷ್ಟ್ರ ನಿರ್ಮಾಣದ ಮಹೋನ್ನತ ಕಾರ್ಯಕ್ಕೆ ತೊಡಕಾಗುವಂತೆ ನಾವು ನಡೆದುಕೊಳ್ಳಬಾರದು ಎಂದು ಜನತೆಗೆ ಜಾಗೃತಿ ಮೂಡಿಸುವ ಪ್ರಯತ್ನ ಎಂಬ ಮೂಲ ಸಂದೇಶವನ್ನಿಟ್ಟುಕೊAಡು ನಡೆದ ಕಾರ್ಯಕ್ರಮವೇ "ವಿಜಯೀ ಭವ". 

 

ದೇಶ ಭಕ್ತಿಯ ಗೀತೆಗಳೊಂದಿಗೆ ಕಿಶೋರ್ ಪೆರ್ಲ ರವರ ಸುಮಧುರ ಕಂಠದೊAದಿಗೆ , ಉಡುಪಿಯ ಮಂಜರಿ ಚಂದ್ರ ರವರ ತಂಡದ ರಾಷ್ಟ್ರ ಜಾಗೃತಿಯ ನೃತ್ಯ ರೂಪಕಗಳು ಹಾಗೂ ಶಿವ ಧೂತ ಗುಳಿಗೆ ನಾಟಕದ ಕಲಾವಿದ ವೀರ ವಸಂತ್ ರವರ ನೃತ್ಯದೊಂದಿಗೆ ಸ್ವಾತಂತ್ರ‍್ಯ ವೀರರ ನೆನಪುಗಳನ್ನು ಮೆಲುಕು ಹಾಕಿಕೊಂಡು ಸಾಂಸ್ಕೃತಿ ಕಾರ್ಯಕ್ರಮ ಎಲ್ಲರ ಮನಸೆಳೆಯಿತು. 

ನಂತರ ನಡೆದ ಸಭಾ ಕಾರ್ಯಕ್ರಮ ದೀಪ ಪ್ರಜ್ವಲನೆಯೊಂದಿಗೆ ಹಾಗೂ ತಾಯಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಮುಂದುವರೆಯಿತು.

 

ಸಭಾ ಕಾರ್ಯಕ್ರಮದಲ್ಲಿ ಲೇಖಕ ಸೋಮೇಶ್ವರ ಗುರುಮಠ ಬರೆದಿರುವ ಅಭಿನವ ಭಾರತ ಕೃತಿ ಬಿಡುಗಡೆಗೊಂಡಿತು. ಅತಿಥಿಗಳಾದ ಕರ್ನಾಟಕ ದಕ್ಷಿಣ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್, ಸ್ವಾತಂತ್ರ‍್ಯ ವೀರರಾದ ಸಾವರ್ಕರ್ ಹಾಗೂ ಶಿವಾಜಿ ಮಹಾರಾಜರ ಹೋರಾಟದ ಕಿಚ್ಚನ್ನು ಜಗತ್ತಿಗೆ ಪಸರಿಸಿದ ರೀತಿ ಹಾಗೂ ದೇಶ ಧರ್ಮಕ್ಕಾಗಿ ಅವರ ಕೊಡುಗೆಯನ್ನು ವಿವರಿಸಿದರು.

ಜಾಗರಣ ವೇದಿಕೆ ಕರ್ನಾಟಕ ಪ್ರಾಂತ ಪ್ರಮುಖ ಶ್ರೀಕಾಂತ್ ಶೆಟ್ಟಿ ಧರ್ಮ ರಕ್ಷಣೆಯ ಚಿಂತನೆಯೊAದಿಗೆ ನಾವು ನಮ್ಮ ಪೂರ್ವಜರ ತ್ಯಾಗ ಬಲಿದಾನವನ್ನು ವ್ಯರ್ಥ ಮಾಡದೆ ಜಾತಿ ಜಾತಿ ಎನ್ನುವ ಬೇಧವನ್ನು ಮರೆತು ಬೆಳೆಯಬೇಕಿದೆ. ಈ ಹಿಂದೆ ಕೂಡ ಜಾತಿ ಜಾತಿ ಅನ್ನೊ ವಿಷ ಬೀಜದಿಂದ ನಮ್ಮ ಸಮಾಜ ಹೊಡೆದು ಹೋಗಿದೆ. ಅದೆಲ್ಲವನ್ನು ಸರಿಪಡಿಸಿಕೊಂಡು ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಇಟ್ಟುಕೊಂಡು ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಜವಾಬ್ಧಾರಿ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಭಾರತೀಯ ಸೇನೆಯ ನಿವೃತ್ತ ಯೋಧ ಲೆಫ್ಟಿನೆಂಟ್ ಸುರೇಶ್ ಬಿ ಶೆಟ್ಟಿ ಮಾತನಾಡಿ ಸೇನೆಯಲ್ಲಿ ಸೈನಿಕ ತನ್ನ ರಾಷ್ಟ್ರಕ್ಕಾಗಿ ಮಾಡಿರುವ ತ್ಯಾಗ ಹಾಗೂ ಬಲಿದಾನವನ್ನು ನೆನಪಿಸುತ್ತಾ ನಮನವನ್ನು ಸಲ್ಲಿಸಿದರು. ವೇದಿಕೆಯಲ್ಲಿ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಇದರ ಸ್ಥಾಪಕಧ್ಯಕ್ಷ ಮನೋಜ್ ಕೋಡಿಕೆರೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ, ವಿಶ್ವ ಹಿಂದೂ ಪ್ರಮುಖರಾದ ಎಚ್. ಕೆ. ಪುರುಷೋತ್ತಮ್, ಶಿವಾನಂದ ಮೆಂಡನ್, ಭಜರಂಗದಳ ಪ್ರಮುಖರಾದ ಭುಜಂಗ ಕುಲಾಲ್, ಪುನೀತ್ ಅತ್ತಾವರ, ಹಿಂದೂ ಜಾಗರಣ ವೇದಿಕೆ ಪ್ರಮುಖ ಹರೀಶ್ ಕುಮಾರ್ ಶಕ್ತಿನಗರ, ಹರ್ಷಿತ್ ಶಕ್ತಿನಗರ, ಸಂದೀಪ್ ಆಮ್ಲಮೊಗರು, ಉದ್ಯಮಿಗಳಾದ ಪ್ರಶಾಂತ್ ಕಾಮತ್ ಕಾರ್ಕಳ, ಉದ್ಯಮಿ ಜಯಪ್ರಕಾಶ್ ವಾಮಂಜೂರ್ ಹಾಗೂ ಹಲವು ಸಂಘ ಸಂಸ್ಥೆಯ ಪ್ರಮುಖರು, ಉದ್ಯಮಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ಬಹಳ ವಿಜೃಂಭನೆಯಿ0ದ ನಡೆಯಿತು.

ಕಾರ್ಯಕ್ರಮದ ನಿರೂಪಣೆಯನ್ನು ರಾಷ್ಟ್ರ ಚಿಂತನೆಯ ವಾಗ್ಮಿ ಎನ್. ಆರ್. ದಾಮೋದರ ಶರ್ಮರವರು ನೆರವೇರಿಸಿದರು.