ಉಡುಪಿ: ದಾಖಲೆ ರಹಿತ ವಾಹನದಲ್ಲಿ ಡ್ರೈವಿಂಗ್ ಕ್ಲಾಸ್ - ಪ್ರಶಾಂತ್ ಡ್ರೈವಿಂಗ್ ಸ್ಕೂಲ್ ಸಂಸ್ಥೆಯ ವಿರುದ್ಧ ಕ್ರಮಕ್ಕೆ ಆಗ್ರಹ.!

ಪರವಾನಿಗೆ ಹೊಂದಿರದ ವಾಹನದಲ್ಲಿ ಚಾಲನಾ ತರಬೇತಿ

ಉಡುಪಿ: ಅನಧಿಕೃತವಾಗಿ ದಾಖಲೆ ರಹಿತ ವಾಹನದಲ್ಲಿ ಡ್ರೈವಿಂಗ್ ಕ್ಲಾಸ್ ನೀಡುತ್ತಿರುವ ಘಟನೆ ಬೆಳಕಿಗೆ ಬಂದಿದ್ದು, ಹಿತದೃಷ್ಟಿಯಿಂದ ಈ ಚಾಲನಾ  ತರಬೇತಿ ಸಂಸ್ಥೆಯನ್ನು ರದ್ದು ಪಡಿಸುವಂತೆ ವ್ಯಕ್ತಿಯೋರ್ವರು ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. 

"ಪ್ರಶಾಂತ್ ಡ್ರೈವಿಂಗ್ ಸ್ಕೂಲ್" ಎಂಬ ಹೆಸರಿನ ಸಂಸ್ಥೆ ಪೆರ್ಡೂರು ಹಾಗೂ ಹಿರಿಯಡ್ಕದಲ್ಲಿ ಕಾರ್ಯಚರಿಸುತ್ತಿದ್ದು, ಇವರು ಪರವಾನಿಗೆಯಿಲ್ಲದ ವಾಹನದಲ್ಲಿ ತರಬೇತಿ ನೀಡುತ್ತಿದ್ದಾರೆ. ಹೀಗಾಗಿ ಇವರ ವಿರುದ್ಧ ತಕ್ಕ ಕ್ರಮ ಜರಗಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ತೊಂದರೆಯಾಗದAತೆ ಪೆರ್ಡೂರು ನಿವಾಸಿ ನವೀನ್ ಎನ್ನುವವರು ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. 

ಪ್ರಶಾಂತ್ ಡ್ರೈವಿಂಗ್ ಸ್ಕೂಲ್ ಸಂಸ್ಥೆಯ KA20-MB7155 ಹಾಗೂ KA05-MT0378 ಈ ಎರಡು ವಾಹನಗಳು ಪರವಾನಿಗೆ ಹೊಂದಿರುವುದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಧಿಕಾರಿಗಳು ಇದರ ಬಗ್ಗೆ ತಕ್ಷಣ ಕಾನೂನು ಕ್ರಮ ಕೈಗೊಂಡು ಈ ಅಕ್ರಮಕ್ಕೆ ತಡೆ ಮಾಡಬೇಕು ಎನ್ನುವುದು ದೂರುದಾರರ ಆಗ್ರಹವಾಗಿದೆ.