ಪ್ರೀತಿ ನಿರಾಕರಿಸಿದ್ದಕ್ಕೆ ಹಿಂದು ಯುವತಿಗೆ ಇರಿದು ಕೊಂದ ಫಯಾಜ್‌.!

ಕಾಂಗ್ರೇಸ್ ಕಾರ್ಪೋರೇಟರ್ ಮಗಳನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಫಯಾಜ್‌

ಪ್ರೇಮ, ಪ್ರೀತಿ ಎಂದು ಹಿಂದೆ ಬಿದ್ದಿದ್ದ ಯುವಕನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ರೊಚ್ಚಿಗೆದ್ದ ಯುವಕ, ಆ ಯುವತಿ ಓದುತ್ತಿದ್ದ ಕಾಲೇಜು ಕ್ಯಾಂಪಸ್ಸಿನಲ್ಲೇ ಚಾಕುವಿನಿಂದ 9 ಬಾರಿ ಇರಿದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಖಾಸಗಿ ಕಾಲೇಜೊಂದರ ಆವರಣದಲ್ಲಿ ನಡೆದಿದೆ.

ಮೃತಪಟ್ಟ ಯುವತಿಯನ್ನು ನೇಹಾ ಎಂದು ಗುರುತಿಸಲಾಗಿದೆ. ಆಕೆ, ಆ ಕಾಲೇಜಿನಲ್ಲಿ ಎಂಸಿಎ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆಕೆಯು ಹುಬ್ಬಳ್ಳಿಯ ನಿವಾಸಿಯಾದ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಸದಸ್ಯರಾಗಿರುವ ನಿರಂಜನ ಹಿರೇಮಠ ಅವರ ಪುತ್ರಿ .

ಕೊಲೆಯ ಆರೋಪಿಯನ್ನು ಫಯಾಜ್ ಎಂದು ಗುರುತಿಸಲಾಗಿದ್ದು, ಆತ ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ನಿವಾಸಿಯಾಗಿದ್ದ ಫಯಾಜ್ ಕೆಲ ದಿನಗಳಿಂದ ನೇಹಾ ಬೆನ್ನು ಬಿದ್ದಿದ್ದ ಎಂದು ಮೂಲಗಳು ತಿಳಿಸಿವೆ. ತನ್ನ ಪ್ರೀತಿ ಒಪ್ಪದ ಕಾರಣಕ್ಕಾಗಿ ಆಕೆಯನ್ನು ಕೊಂದಿರುವುದಾಗಿ ಕೆಲವು ಮೂಲಗಳು ತಿಳಿಸಿವೆ.

ಕಾಲೇಜಿನ ಆವರಣದಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳು ವಿವಿಧ ಮಾಧ್ಯಮಗಳಲ್ಲಿ ಏ. 18ರಂದು ಸಂಜೆ ಪ್ರಸಾರವಾಗಿದೆ. ಅದರಲ್ಲಿ ಫಯಾಜ್ ಎಂದು ಹೇಳಲಾದ ವ್ಯಕ್ತಿಯು ನೇಹಾಳ ಕಾಲೇಜು ಕ್ಯಾಂಪಸ್ಸಿಗೆ ಬಂದು ಆಕೆಯನ್ನು ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಆದರೆ, ಆಕೆ ಪ್ರೀತಿಯನ್ನು ನಿರಾಕರಿಸಿದಾಗ ಚಾಕು ತೋರಿಸಿ ಬೆದರಿಸಿದ್ದಲ್ಲದೆ, ಮೊದಲು ಆಕೆಯ ಹೊಟ್ಟೆಯ ಭಾಗಕ್ಕೆ ಚುಚ್ಚಿದ್ದಾನೆ. ಆಕೆ ನೆಲಕ್ಕುರುಳಿದ ಕೂಡಲೇ ಸಿಕ್ಕ ಸಿಕ್ಕ ಕಡೆ ಆಕೆಯನ್ನು ಚುಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡ ನೇಹಾಳನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ .

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ್ ಹಿರೇಮಠ ಅವರ ಮಗಳು ನೇಹಾ ಹಿರೇಮಠರನ್ನು ಮುಸ್ಲಿಂ ಸಮುದಾಯದ ವ್ಯಕ್ತಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಈ ಕುರಿತು ಸ್ವತಃ ಮೃತಳ ತಂದೆ ಪ್ರತಿಕ್ರಿಯಿಸಿದ್ದಾರೆ. ಮಗಳು ಕಳೆದುಕೊಂಡ ತಂದೆಯ ಆಕ್ರಂದನ ಮುಗಿಲು ಮುಟ್ಟಿದೆ. ಈ ನೋವಿನಲ್ಲೇ ಮಗಳ ಕುರಿತು ಮಾತನಾಡಿರುವ ಅವರು, ನನ್ನ ಮಗಳ ಕೊಲೆ ಹಿಂದೆ ಲಬ್ ಜಿಹಾದ್ ಇದೆ. ಕೊಲೆಗಾರನ ಜೊತೆಗೆ ನಾಲ್ಲೈದು ಅದೇ ಸಮುದಾಯದವರು ಇರುತಿದ್ದರು. ಅನೇಕ ಬಾರೀ ಮಗಳ ಜೊತೆಗೆ ಮಾತನಾಡುವುದನ್ನು ನಾನು ನೋಡಿದ್ದೇನೆ ಎಂದರು.

ಸರ್ಕಾರ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ನನ್ನ ಮಗಳಿಗೆ ಆದ ಅನ್ಯಾಯ ಬೇರೆ ಹೆಣ್ಣು ಮಕ್ಕಳಿಗೆ ಆಗಬಾರದು. ನನ್ನ ಮಗಳು ಬಹಳ ಮುಗ್ಧೆ. ಯಾರೋಂದಿಗೂ ಯಾರದೊಂದಿಗೆ ಜಗಳ ಆಡುವ ಸ್ವಭಾವದವಳಲ್ಲ. ಅವಳು ಪ್ರತಿಭಾವಂತೆ ಎಂದು ತಂದೆ ನಿರಂಜನ್ ಹಿರೇಮಠ್ ತಿಳಿಸಿದ್ದಾರೆ.

ತುಂಬಾ ದಿನದ ಹಿಂದೆ ಆ ವ್ಯಕ್ತಿ ನನ್ನ ಮಗಳ ಹಿಂದೆ ಬಿದ್ದಿದ್ದ. ಲವ್ ಮಾಡುವಂತೆ ಪಿಡಿಸಿ ಬೆದರಿಕೆ ಹಾಕಿದ್ದ. ನಾನು ಸಹ ಎಚ್ಚರಿಕೆ ಕೊಟ್ಟಿದ್ದೆ. ನನ್ನ ಮಗಳು ಆತನ ಪ್ರೀತಿಗೆ ಒಪ್ಪದೇ ನಿರಾಕರಿಸಿ ಎಲ್ಲರಂತೆ ಸುಮ್ಮನಿದ್ದಳು, ಕಾಲೇಜಿಗೆ ಹೋಗುತ್ತಿದ್ದರು. ಆತನ ಸ್ನೇಹಿತರ ಜತೆ ಮೂರು ನಾಲ್ಕು ದಿನದಿಂದ ಪ್ಲಾನ್ ಮಾಡಿದ್ದು, ಗುರುವಾರ ಬಂದು ಆರೋಪಿ ಕೊಲೆ ಮಾಡಿದ್ದಾನೆ ಎಂದು ಅವರು ವಿವರಿಸಿದರು.