ಮತದಾನದಂದು ಫೋಟೋ ಕ್ಲಿಕ್ಕಿಸಿ.. 25 ಸಾವಿರ ರೂಪಾಯಿ ಬಹುಮಾನ ಗೆಲ್ಲಿ

ಸುಮಾರು 2,88,19,342 ಮತದಾರರು ಮತದಾನ ಮಾಡಲಿದ್ದಾರೆ
ರಾಜ್ಯ ಚುನಾವಣಾ ಅಯೋಗವು ಹಮ್ಮಿಕೊಂಡಿದೆ ಛಾಯಾಚಿತ್ರ ಸ್ಪರ್ಧೆ

ನಾಳೆ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. 7 ಗಂಟೆಯಿಂದ ಮತದಾನ ಪ್ರಾರಂಭವಾಗಲಿದೆ. ಸುಮಾರು 2,88,19,342 ಮತದಾರರು ಮತದಾನ ಮಾಡಲಿದ್ದಾರೆ. ಅದರಲ್ಲಿ 1,44,28,099 ಪುರುಷರು, 1,43,88,176 ಮಹಿಳೆಯರು ಮತದಾನ ಮಾಡಲಿದ್ದಾರೆ. ಸುಮಾರು 3,067 ತೃತೀಯ ಲಿಂಗಿಗಳು ಮತ ಚಲಾಯಿಸಲಿದ್ದಾರೆ.

ಮತದಾನದ ಸಂದರ್ಭದಲ್ಲಿ ರಾಜ್ಯ ಚುನಾವಣಾ ಅಯೋಗವು ಛಾಯಾಚಿತ್ರ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಮತದಾನ ವಿಷಯವಾಗಿ ಈ ಸ್ಪರ್ಧೆಯನ್ನು ಏರ್ಪಡಿಸಿದೆ. ಎಲೆಕ್ಷನ್​ ದಿನ ವಿಶಿಷ್ಟ ಫೋಟೋದಲ್ಲಿ ಸೆರೆಹಿಡಿದರೆ ನಗದು ಬಹುಮಾನ ನೀಡುವುದಾಗಿ ರಾಜ್ಯ ಚುನಾವನಾ ಆಯೋಗ ಘೋಷಿಸಿದೆ. 

ಅಷ್ಟು ಮಾತ್ರವಲ್ಲ, ಅತ್ಯುತ್ತಮ ಫೋಟೋ ಕ್ಲಿಕ್ಕಿಸಿದರೆ ಪ್ರಮಾಣ ಪತ್ರದ ಜೊತೆಗೆ ನಗದನ್ನು ನೀಡುವುದಾಗಿ ತಿಳಿಸಿದೆ. ಫೋಟೋ ಕ್ಲಿಕ್ಕಿಸಿದ ಬಳಿಕ ಛಾಯಾಗ್ರಾಹಕರ ವಿವರಗಳನ್ನು Mediacellceokarnataka@gmail.com ಸಲ್ಲಿಸಬೇಕಿದೆ. ಮೇ 15ರವರೆಗೆ ಫೋಟೋ ಕಳುಹಿಸಲು ಸಮಯವಕಾಶ ನೀಡಲಾಗಿದೆ. ಅತ್ಯುತ್ತಮ ಫೋಟೋಗೆ ಬಹುಮಾನ ಸಿಗಲಿದೆ.

ಅಂದಹಾಗೆಯೇ ಬೆಸ್ಟ್​ ಫೋಟೋ ಕ್ಲಿಕ್ಕಿಸಿದ ವಿಜೇತರಿಗೆ ಪ್ರಥಮ 25 ಸಾವಿರ, ದ್ವಿತೀಯ 15 ಸಾವಿರ ಮತ್ತು ತೃತೀಯ 10 ಸಾವಿರ ಬಹುಮಾನ ಸಿಗಲಿದೆ. ಇದಲ್ಲಿದೆ ಸಮಾಧಾನಕರ ಬಹುಮಾನವಾಗಿ 6 ಸಾವಿರ ರೂಪಾಯಿ ಜೊತೆಗೆ ವಿಶೇಷ ಬಹುಮಾನವಾಗಿ 5 ಸಾವಿರ ರೂಪಾಯಿ ನಗದು ಸಿಗಲಿದೆ.